Kannada NewsKarnataka NewsLatest

ಅಮಿತ್ ಶಾ ಸಭೆ ಸ್ಥಳ ಬದಲಾವಣೆ: ಯಾರಿಗೆಲ್ಲ ಅವಕಾಶ?

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ನಡೆಸಲಿರುವ ಬಿಜೆಪಿ ಪ್ರಮುಖ ಪ್ರಮುಖರ ಸಭೆಯ ಸ್ಥಳ ಬದಲಾವಣೆಯಾಗಿದೆ.

ಅಮಿತ್ ಶಾ ಬಹಿರಂಗ ಸಭೆಯ ನಂತರ ಸಂಕಂ ಹೊಟೆಲ್ ನಲ್ಲಿ ಬಿಜೆಪಿ ಪ್ರಮುಖರ ಸಭೆ ನಡೆಸುವುದಿತ್ತು. ಆದರೆ ಈ ಸಭೆಯನ್ನು ಕೆಎಲ್ಇ ಸಂಸ್ಥೆಯ ಜೀರಗೆ ಸಭಾಭವನದಲ್ಲಿ ನಡೆಸಲು ನಿರ್ಧರಿಸಲಾಗಿದೆ.

Home add -Advt

ಸಭೆಯಲ್ಲಿ ಭಾಗವಹಿಸುವ ಪ್ರಮುಖರು ಬಹಿರಂಗ ಸಭೆಯ ಬಳಿಕ ಸಂಕಂ ಹೊಟೆಲ್ ತುಲುಪುದು ಕಷ್ಟ ಸಾಧ್ಯ ಎನ್ನುವ ಕಾರಣಕ್ಕಾಗಿ ಈ ಬದಲಾವಣೆ ಮಾಡಲಾಗಿದೆ. ಬಹಿರಂಗ ಸಭೆಯ ಬಳಿಕ ಅಮಿತ್ ಶಾ ದಿವಂಗತ ಸುರೇಶ ಅಂಗಡಿ ನಿವಾಸಕ್ಕೆ ಭೇಟಿ ನೀಡಿ ನಂತರ ಬಿಜೆಪಿ ಪ್ರಮುಖರ ಸಭೆಗೆ ಆಗಮಿಸಲಿದ್ದಾರೆ.

ಯಾರಿಗೆಲ್ಲ ಅವಕಾಶ?

ಅಮಿತ್ ಶಾ ಅವರು ಸುಮಾರು ಒಂದು ಗಂಟೆ ಬಿಜೆಪಿ ಪ್ರಮುಖರ ಸಭೆ ನಡೆಸಲಿದ್ದಾರೆ. ಜಿಲ್ಲೆಯ ಸುಮಾರು 200 ಜನ ಚುನಾವಣೆ ನಿರ್ವಹಣೆ ಪ್ರಮುಖರು ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಆಹ್ವಾನಿತರಿಗೆಲ್ಲ ಈಗಾಗಲೆ ಬಿಜೆಪಿ ಪಾಸ್ ತಲುಪಿಸಿದೆ. ಆಹ್ವಾನಿತರನ್ನು ಹೊರತುಪಡಿಸಿ ಬೇರೆಯವರಿಗೆ ಸಭೆಯಲ್ಲಿ ಅವಕಾಶವಿಲ್ಲ. ಸಭೆ ಸಂಜೆ 6 ಗಂಟೆಯಿಂದ 7.20ರ ವರೆಗೆ ನಡೆಯುವುದು.

ಮಧ್ಯಾಹ್ನ 4 ಗಂಟೆಗೆ ಅಮಿತ್ ಶಾ ಕೆಎಲ್ಇ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ, ಅಲ್ಲಿ ಕೌಶಲ್ಯ ಲ್ಯಾಬ್ ಉದ್ಘಾಟಿಸಲಿದ್ದಾರೆ. 15 ಕೋಟಿ ರೂ. ವೆಚ್ಚದಲ್ಲಿ ಈ ಲ್ಯಾಬ್ ಅಭಿವೃದ್ಧಿಪಡಿಸಲಾಗಿದೆ ಎಂದು ಕೆಎಲ್ಇ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ತಿಳಿಸಿದ್ದಾರೆ.

 

 

Related Articles

Back to top button