ಸಂಡೇ ಸ್ಪೆಷಲ್

ಬಾಳೆ ಕಾಯಿ ತವಾ ಪ್ರೈ

ಬಾಳೆ ಕಾಯಿಯಿಂದ ಸರಳವಾಗಿ  ಪಟಾ ಪಟ್ ಅಂತ ಮಾಡಬಹುದಾದ ಸ್ನ್ಯಾಕ್ಸ ಬಾಳೆಕಾಯಿ ತವಾಪ್ರೈ. ಇದು ಸಾಯಂಕಾಲ ಟೀ ಜೊತೆಗೆ ಸ್ನ್ಯಾಕ್ಸ ಆಗಿ, ಊಟದಲ್ಲಿ ನೆಂಜಿಕೊಳ್ಳಲೂ ಬರುತ್ತದೆ.
ಬೇಕಾದ ಸಾಮಗ್ರಿಗಳು:
ದಪ್ಪಬಾಳೆಕಾಯಿ(ಪಲ್ಯದ ಬಾಳೆಕಾಯಿ) 1, ಅಚ್ಚಖಾರದಪುಡಿ 2 ಚಮಚ, ಅರಿಶಿಣಪುಡಿ ಅರ್ಧ ಚಮಚ, ಉಪ್ಪು ರುಚಿಗೆ,ಇಂಗಿನ ಪುಡಿ ಕಾಲುಚಮಚ, ಸಣ್ಣರವೆ 4 ರಿಂದ 5 ಚಮಚ, ಸ್ವಲ್ಪ ಎಣ್ಣೆ.
ಮಾಡುವ ವಿಧಾನ:
ಬಾಳೆಕಾಯಿಯನ್ನು ಸಿಪ್ಪೆತೆಗೆದು  ತೆಳ್ಳಗೆ ಕತ್ತರಿಸಿ ನೀರಿನಲ್ಲಿ ಹಾಕಿ ಇಡಬೇಕು. ಖಾರದಪುಡಿ, ಅರಿಶಿಣ, ಉಪ್ಪು, ಇಂಗು ಸೇರಿಸಿ 1 ಟೀ ಚಮಚದಸ್ಟು ನೀರನ್ನು ಸೇರಿಸಿ ಪೇಸ್ಟತರಹ ಮಾಡಬೇಕು. ಮೊದಲು ಹೆಚ್ಚಿಟ್ಟ ಬಾಳೆಕಾಯಿಗೆ ಈ ಪೇಸ್ಟನ್ನು ಸವರಬೇಕು. ಇದನ್ನು ರವಾದಲ್ಲಿ ಹೊರಲಾಡಿಸಿ ಕಾದ ತವಾದಲ್ಲಿ ಸ್ವಲ್ಪ ಎಣ್ಣೆಹಾಕಿ ಬೇಯಿಸಬೇಕು. ಹಾಗೆ ಎರಡು ಕಡೆ ತಿರುವಿ ಬೇಯಿಸಬೇಕು.ತವಾಪ್ರೈ ಸವಿಯಲು ತಯಾರಾಗಿದೆ.(ಇದೇ ರೀತಿ ಬದನೆ ಕಾಯಿ, ಆಲುಗಡ್ಡೆಯಲ್ಲಿ ಯೂ ಸಹ ಮಾಡಬಹುದು)
ಸಹನಾ ಭಟ್
ಸಹನಾಸ್ ಕಿಚನ್

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button