ಪ್ರಗತಿವಾಹಿನಿ ಸುದ್ದಿ; ಹಾವೇರಿ: ಹಾವೇರಿಯಲ್ಲಿ ನಡೆಯಲಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಹಿರಿಯ ಸಾಹಿತಿ, ಪದ್ಮಶ್ರೀ ಪುರಸ್ಕೃತ ಡಾ.ದೊಡ್ಡರಂಗೇಗೌಡ ಆಯ್ಕೆಯಾಗಿದ್ದಾರೆ.
ಈ ಕುರಿತು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಮನುಬಳಿಗಾರ್ ಮಾಹಿತಿ ನೀಡಿದ್ದು, ಹಾವೇರಿಯ ಗುದ್ದಲ್ಯಪ ಹಳ್ಳಿಕೇರಿ ಕಾಲೇಜಿನ ಪಕ್ಕದಲ್ಲಿರುವ ವಿಶಾಲ ಮೈದಾನದಲ್ಲಿ ಫೆ.26, 27 ಹಾಗೂ 28ರಂದು ಸಾಹಿತ್ಯ ಸಮ್ಮೇಳನ ನಡೆಯಲಿದೆ. ಕೋವಿಡ್ ನಿಯಮ ಸಡಿಲಿಸಿ ಅನುಮತಿ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದ್ದು, ಮೊದಲ ದಿನವೇ 1 ಲಕ್ಷ ಜನ ಸೇರುವ ನಿರೀಕ್ಷೆಯಿದೆ ಎಂದು ತಿಳಿಸಿದ್ದಾರೆ.
ದೊಡ್ಡರಂಗೇಗೌಡರ ಜೀವನ ಸಾಧನೆ:
ಡಾ|| ದೊಡ್ಡರಂಗೇಗೌಡರು ಕನ್ನಡ ಪ್ರಗಾಥಗಳ ಸಾಮ್ರಾಟ್ ಎಂದು ಪ್ರಸಿದ್ಧಿರಾದ ಕನ್ನಡದ ಕವಿ, ಸಾಹಿತಿ ಮತ್ತು ಕನ್ನಡ ಚಲನಚಿತ್ರ ಸಾಹಿತಿಗಳಲ್ಲೊಬ್ಬರು. ಇವರು ತುಮಕೂರು ಜಿಲ್ಲೆಯ ಕುರುಬರಹಳ್ಳಿಯಲ್ಲಿ ಫೆಬ್ರುವರಿ 7, 1946ರಲ್ಲಿ ಜನಿಸಿದರು. ತಂದೆ ಕೆ. ರಂಗೇಗೌಡರು, ತಾಯಿ ಅಕ್ಕಮ್ಮ. ಇವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದರು. ಇವರು “ಕನ್ನಡ ನವೋದಯ ಕಾವ್ಯ- ಒಂದು ಪುನರ್ ಮೌಲ್ಯಮಾಪನ” ಎಂಬ ವಿಷಯದ ಸಂಶೋಧನಾ ಪ್ರಬಂಧಕ್ಕೆ ಬೆಂಗಳೂರು ವಿಶ್ವವಿದ್ಯಾಲಯದ ಪಿಹೆಚ್ಡಿ(ಡಾಕ್ಟರೇಟ್) ಪದವಿ ದೊರಕಿತು.
1972 ರಿಂದ 2004 ರವರೆಗೂ ಬೆಂಗಳೂರಿನ ಕೃಷ್ಣರಾಜೇಂದ್ರ ಮಾರುಕಟ್ಟೆ ಬಳಿ ಇರುವ ಎಸ್.ಎಲ್.ಎನ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ, ಅಧ್ಯಾಪಕರಾಗಿ, ಪ್ರಾಚಾರ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ. ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸಿದ್ದಾರೆ. 1982ರಲ್ಲಿ ಗೌಡರು ಆಲೆಮನೆ ಚಿತ್ರಕ್ಕಾಗಿ ಬರೆದ ಭಾವೈಕ್ಯ ಗೀತೆಗೆ ಸರ್ಕಾದಿಂದ ವಿಶೇಷ ಗೀತೆ ಪ್ರಶಸ್ತಿ ಹಾಗೂ ಬೆಳ್ಳಿ ಪದಕದೊಂದಿಗೆ ಸನ್ಮಾನ ದೊರೆಯಿತು. ವಿಶೇಷ ಗೀತೆ ಪ್ರಶಸ್ತಿ ಪಡೆದ ಮೊದಲ ಸಾಹಿತಿ ಇವರು. ಇವರು ಮನುಜ ಎಂಬ ಕಾವ್ಯ ನಾಮದಿಂದ ಬರೆಯುತ್ತಿದ್ದಾರೆ.
ಪ್ರಗಾಥ ಕೃತಿಗಳು:
ಪ್ರೀತಿ ಪ್ರಗಾಥ.
ಹಳ್ಳಿ ಹುಡುಗಿ ಹಾಡು-ಪಾಡು.
ಕವನ ಸಂಕಲನಗಳು:
ಕಣ್ಣು ನಾಲಿಗೆ ಕಡಲು ಕಾವ್ಯ.
ಜಗುಲಿ ಹತ್ತಿ ಇಳಿದು.
ನಾಡಾಡಿ.
ಮೌನ ಸ್ಪಂದನ.
ಕುದಿಯುವ ಕುಲುಮೆ.
ಚದುರಂಗಗ ಕುದುರೆಗಳು.
ಯುಗವಾಣಿ.
ಬದುಕು ತೋರಿದ ಬೆಳಕು.
ಗದ್ಯ ಕೃತಿಗಳು:
ವರ್ತಮಾನದ ವ್ಯಂಗ್ಯದಲ್ಲಿ
ವಿಚಾರ ವಾಹಿನಿ
ಪ್ರವಾಸ ಸಾಹಿತ್ಯ ಸಂಪಾದಿಸಿ
ಅನನ್ಯನಾಡು ಅಮೇರಿಕ
ಪಿರಮಿಡ್ಡುಗಳು ಪರಿಸರದಲ್ಲಿ
ಚಲನಚಿತ್ರಗಳು
ದೊಡ್ಡರಂಗೇಗೌಡ
ರಂಗನಾಯಕಿ
ಪರಸಂಗದ ಗೆಂಡೆತಿಮ್ಮ
ಆಲೆಮನೆ
ಅನುಪಮ
ಅರುಣರಾಗ
ಮುದುಡಿದ ತಾವರೆ ಅರಳಿತು
ಏಳು ಸುತ್ತಿನ ಕೋಟೆ
ಅಶ್ವಮೇಧ
ಹೃದಯಗೀತೆ
ಭೂಲೋಕದಲ್ಲಿ ಯಮರಾಜ
ಜನುಮದ ಜೋಡಿ
ಕುರುಬನ ರಾಣಿ
ರಮ್ಯ ಚೈತ್ರಕಾಲ
ತಂದೆಗೆ ತಕ್ಕ ಮಗ
ಪಡುವಾರಳ್ಳಿ ಪಾಂಡವರು
ಸಾಧನೆ ಶಿಖರ
ಭಾವಗೀತೆ ಆಲ್ಬಂಗಳು
ಮಾವು-ಬೇವು
ಪ್ರಾಯ ಮೂಡಿತು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ