ಪ್ರಗತಿವಾಹಿನಿ ಸುದ್ದಿ; ಕೋಲ್ಕತ್ತಾ: ವ್ಯಕ್ತಿ ಸಾವನ್ನಪ್ಪಿದ್ದರೆ, ಆ ವ್ಯಕ್ತಿಯ ವೀರ್ಯಾಣು ಪಡೆಯಲು ಆತನ ಪತ್ನಿಗೆ ಮಾತ್ರ ಹಕ್ಕಿರುತ್ತದೆ ಎಂದು ಕೋಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ವಂಶಾಭಿವೃದ್ಧಿಗಾಗಿ ಮೃತ ಮಗನ ವೀರ್ಯಾಣು ನೀಡುವಂತೆ ತಂದೆಯೊಬ್ಬ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಅರ್ಜಿ ತಿರಸ್ಕರಿಸಿದ್ದು, ಪತ್ನಿ ಬದುಕಿದ್ದಾಗಲೇ ಪತಿಯ ವೀರ್ಯಾಣು ಹಸ್ತಾಂತರ ಮಾಡಲಾಗದು. ಈ ಬಗ್ಗೆ ಅರ್ಜಿದಾರನಿಗೆ ಕೇಳುವ ಹಕ್ಕಿಲ್ಲ. ಮೃತ ವ್ಯಕ್ತಿಯ ವೀರ್ಯಾಣು ಆತನ ಪತ್ನಿಗೆ ಮಾತ್ರ ನೀಡಬಹುದು ಎಂದು ಹೇಳಿದೆ.
ದೆಹಲಿಯ ಆಸ್ಪತ್ರೆಯಲ್ಲಿ ಮೃತ ವ್ಯಕ್ತಿಯ ವೀರ್ಯಾಣು ಸಂಗ್ರಹಿಸಿಡಲಾಗಿತ್ತು. ವಂಶಾಭಿವೃದ್ಧಿಗಾಗಿ ತನ್ನ ಮೃತ ಮಗನ ವೀರ್ಯಾಣು ನೀಡುವಂತೆ ಮೃತ ಮಗನ ತಂದೆ ಆಸ್ಪತ್ರೆ ವೈದ್ಯರಿಗೆ ಕೇಳಿದ್ದರು. ಆದರೆ ವೈದ್ಯರು ಮಗನ ವೀರ್ಯಾಣು ಪಡೆಯಲು ಮದುವೆ ಪ್ರಮಾಣಪತ್ರ ಹಾಗೂ ಮಗನ ಪತ್ನಿಯ ಒಪ್ಪಿಗೆ ಬೇಕು ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಮೃತ ವ್ಯಕ್ತಿಯ ತಂದೆ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ