Kannada NewsLatest

*ಮತ್ತೊಂದು ನರಗುಂದ ಬಂಡಾಯವಾಗಲು ಅವಕಾಶ ಕೊಡಬೇಡಿ; ಬಸವಜಯ ಮೃತ್ಯುಂಜಯ ಸ್ವಾಮೀಜಿ*

 

 

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಒತ್ತಾಯಿಸಿ ಬೆಳಗಾವಿ ಸುವರ್ಣ ವಿಧಾನಸೌಧದ ಬಳಿ ಬೃಹತ್ ಸಮಾವೇಶ ನಡೆಯುತ್ತಿದ್ದು, ಮೀಸಲಾತಿ ಘೋಷಿಸಿದರೆ ಸರ್ಕಾರಕ್ಕೆ ಸನ್ಮಾನ ಮಾಡುವುದಾಗಿ ಬಸವಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದ್ದಾರೆ.

ಸಮಾವೇಶದಲ್ಲಿ ಮಾತನಾಡಿರುವ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಮತ್ತೊಂದು ನರಗುಂದ ಬಂಡಾಯವಾಗಲು ಅವಕಾಶ ನೀಡಬಾರದು. ಪಂಚಮಸಾಲಿಗಳಿಗೆ 2ಎ ಮೀಸಲಾತಿ ನೀಡಿದರೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರಿಗೆ ಸನ್ಮಾನ ಮಾಡೋಣ. ಮೀಸಲಾತಿ ನೀಡದಿದ್ದರೆ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕೋಣ ಎಂದು ಕರೆ ನೀಡಿದ್ದಾರೆ.

ಇಷ್ಟು ದಿನ ಕಾದು ಕಾದು ಕಾದು ಸಾಕಾಗಿದೆ. ಮುಖ್ಯಮಂತ್ರಿಗಳು ಏನು ಸಂದೇಶ ಕಳಿಸಿದ್ದಾರೆ ನೋಡೋಣ, ಮುಖಂಡರು ಏನು ಹೇಳುತ್ತಾರೆ ನೋಡೋಣ ಎಂದು ಸ್ವಾಮಿಗಳು ಹೇಳಿದರು.

ಇನ್ನು ಮುಂದೆ ಇಲ್ಲಿರುವ ಮುಖಂಡರು ಚುನಾವಣೆಯ ಸಿದ್ಧತೆ ಮಾಡಲಿ. ಅವರೆಲ್ಲ ಗೆಲ್ಲುವುದು ಮುಖ್ಯ. ನಾನು ಏಕಾಂಗಿಯಾಗಿ ಹೋರಾಡುತ್ತೇನೆ ಎಂದು ಅವರು ಹೇಳಿದರು.

*ಸಚಿವ ಸಂಪುಟ ಸಭೆ ಮುಕ್ತಾಯ; ಸಸ್ಪೆನ್ಸ್ ಆಗಿಯೇ ಉಳಿದ ಮೀಸಲಾತಿ ವಿಚಾರ*

https://pragati.taskdun.com/panchamasali-2a-reservationvirath-samaveshacabinet-meeting/

Related Articles

Back to top button