ಕೆಂಪುಕೋಟೆ ಮೇಲೆ ಹಾರಿದ್ದು ಯಾವ ಧ್ವಜ?

ಪ್ರಗತಿವಾಹಿನಿ ಸುದ್ದಿ, ನವದೆಹಲಿ – ನವದೆಹಲಿಯಲ್ಲಿ ಕೃಷಿ ಕಾಯ್ದೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿದ್ದು, ಕೆಂಪುಕೋಟೆ ಮೇಲೆ ರಾಷ್ಟ್ರಧ್ವಜ ಹಾರಾಡಬೇಕಾದ ಜಾಗದಲ್ಲಿ ಬೇರೆ ಧ್ವಜವನ್ನು ಹಾರಿಸಲಾಗಿದೆ.

ಬೆಳಗ್ಗೆಯಿಂದ ಸಾವಿರಾರು ಟ್ರ್ಯಾಕ್ಟರ್ ಜೊತೆ ಬಂದ ಪ್ರತಿಭಟನೆಕಾರರು ಲಾಠಿ ಚಾರ್ಜ್, ಜಲಫಿರಂಗಿ, ಅಶ್ರುವಾಯುಗಳಿಗೂ ಜಗ್ಗದೆ ಮುನ್ನುಗ್ಗಿದ್ದಾರೆ. ಪ್ರತಿಭಟನೆ ಹಿಂಸಾಚಾರ ರೂಪಕ್ಕೆ ತಿರುಗಿದ್ದು, ಪ್ರತಿಭಟನೆಕಾರರು ಕೆಂಪುಕೋಟೆ ಮೇಲೆ ಹತ್ತಿ ರಾಷ್ಟ್ರ ಧ್ವಜ ಹಾರಿಸುವ ಸ್ಥಳದಲ್ಲಿ ಬೇರೆ ಧ್ವಜವನ್ನು ಹಾರಿಸಿದ್ದಾರೆ.

ಕೆಂಪುಕೋಟೆ ಮೇಲೆ ಹಾರಾಡಿದ ಧ್ವಜ ಯಾವುದು ಎನ್ನುವ ಕುರಿತು ವಿಭಿನ್ನ ಅಭಿಪ್ರಾಯಗಳು ಕೇಳಿಬರುತ್ತಿವೆ. ರೈತ ಯೂನಿಯನ್ ಧ್ವಜ ಎಂದು ಕೆಲವರು ಹೇಳಿದರೆ, ಸಿಖ್ ಧ್ವಜ ಎಂದು ಕೆಲವರು, ಖಲಿಸ್ತಾನದ ಧ್ವಜ ಎಂದು ಕೆಲವರು ವಾದಿಸುತ್ತಿದ್ದಾರೆ.

ಆದರೆ ಅದು ಯಾವುದೇ ಧ್ವಜವಾಗಿದ್ದರೂ ರಾಷ್ಟ್ರ ಧ್ವಜ ಹಾರಬೇಕಾದ ಸ್ಥಳದಲ್ಲಿ ಬೇರೆ ಧ್ವಜ ಹಾರಿದ್ದು ರಾಷ್ಟ್ರವೇ ತಲೆತಗ್ಗಿಸುವಂತೆ ಮಾಡಿದೆ.

ಈ ಬಗ್ಗೆ ಇನ್ನಷ್ಟೆ ಸರಕಾರದ ಪ್ರತಿಕ್ರಿಯೆ ಬರಬೇಕಿದೆ.

ಕೆಂಪುಕೋಟೆಗೆ ನುಗ್ಗಿ ಧ್ವಜಾರೋಹಣ ಮಾಡಿದ ಪ್ರತಿಭಟನೆಕಾರರು (Updated)

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button