ಪ್ರಗತಿವಾಹಿನಿ ಸುದ್ದಿ; ಕೊಪ್ಪಳ: ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವವರು ಭಯೋತ್ಪಾದಕರು. ನಿಜವಾದ ರೈತರು ಯಾರೂ ಪ್ರತಿಭಟನೆ ನಡೆಸುತ್ತಿಲ್ಲ. ಇವರಿಗೆ ಪಾಕಿಸ್ತಾನದ ಬೆಂಬಲವಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ವಾಗ್ದಾಳಿ ನಡೆಸಿದ್ದಾರೆ.
ದೆಹಲಿಯಲ್ಲಿ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಇನ್ನೊಂದೆಡೆ ಕೆಂಪುಕೋಟೆ ಮೇಲೆ ಪ್ರತಿಭಟನಾಕಾರರು ಧ್ವಜಾರೋಹಣ ನಡೆಸಿದ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಸಚಿವ ಬಿ.ಸಿ.ಪಾಟೀಲ್, ದೆಹಲಿಯಲ್ಲಿ ರೈತರ ಹೆಸರಲ್ಲಿ ಉಗ್ರರನ್ನು ತಂದು ಪ್ರತಿಭಟನೆ ನಡೆಸಲಾಗುತ್ತಿದೆ. ಇದರ ಹಿಂದೆ ಪಾಕಿಸ್ತಾನ ಹಾಗೂ ಕಾಂಗ್ರೆಸ್ ನವರ ಕೈವಾಡವಿದೆ. ಪ್ರಧಾನಿ ಮೋದಿ ಜನಪ್ರಿಯತೆ ಕಂಡು ಹತಾಶರಾಗಿ ಮಾಡುತ್ತಿರುವ ಕೃತ್ಯ. ಏನೇ ಮಾಡಿದರೂ ಮೋದಿ ಸರ್ಕಾರ ಅಲುಗಾಡಿಸಲಾಗದು ಎಂದಿದ್ದಾರೆ.
ನಿಜವಾದ ರೈತರು ಯಾರೂ ಧರಣಿ, ಸತ್ಯಾಗ್ರಹ ನಡೆಸುತ್ತಿಲ್ಲ. ಕೆಂಪುಕೋಟೆಯ ಮೇಲೆ ಬಾವುಟ ಹಾರಿಸಿರುವುದನ್ನು ನೋಡಿದರೇ ಗೊತ್ತಾಗುತ್ತದೆ ಇದೊಂದು ಭಯೋತ್ಪಾಕರ ಕೃತ್ಯ ಎಂದು. ರೈತರ ಹೆಸರಲ್ಲಿ ನಡೆಯುತ್ತಿರುವ ಈ ಪ್ರತಿಭಟನೆಯನ್ನು ನಾವು ಖಂಡಿಸುತ್ತೇವೆ. ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
ಕೆಂಪುಕೋಟೆ ಮೇಲೆ ಹಾರಿದ್ದು ಯಾವ ಧ್ವಜ?
ರೈತರ ಹೆಸರಲ್ಲಿ ಗೂಂಡಾಗಿರಿ; ಹಿಂಸಾರೂಪಕ್ಕೆ ತಿರುಗಿದ ಪ್ರತಿಭಟನೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ