Kannada NewsKarnataka NewsLatest

ಬಾಲಚಂದ್ರ ಜಾರಕಿಹೊಳಿ ಅವರು ಆಧುನಿಕ ಶ್ರವಣಕುಮಾರ -ನಿಜಗುಣ ದೇವರು

ಪ್ರಗತಿವಾಹಿನಿ ಸುದ್ದಿ, ಘಟಪ್ರಭಾ : ಸಂಘಟಿತ ಹೋರಾಟದಿಂದ ಮುನ್ನಡೆದರೆ ಎಂತಹ ಅಭಿವೃದ್ಧಿ ಕಾರ್ಯಗಳನ್ನೂ ಮಾಡಬಹುದು ಎಂಬುದನ್ನು ಹುಣಶ್ಯಾಳ ಪಿಜಿ ಗ್ರಾಮಸ್ಥರು ಈಗಾಗಲೇ ಸಾಬೀತುಪಡಿಸಿದ್ದಾರೆ. ಹಿಂದಿನ ಗ್ರಾಪಂ ಸದಸ್ಯರ ಒಗ್ಗಟ್ಟಿನ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಸರ್ಕಾರಿ ಯೋಜನೆಗಳು ಯಶಸ್ವಿಕಂಡಿವೆ ಎಂದು ಅರಭಾವಿ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು.
ಸಮೀಪದ ಹುಣಶ್ಯಾಳ ಪಿಜಿ ಗ್ರಾಮದ ಸಿದ್ಧಲಿಂಗ ಕೈವಲ್ಯಾಶ್ರಮಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಹುಣಶ್ಯಾಳ ಗ್ರಾಮದಲ್ಲಿ ಸರ್ಕಾರದ ಎಲ್ಲ ಯೋಜನೆಗಳನ್ನು ಅನುಷ್ಠಾನಗೊಳಿಸುವ ಮೂಲಕ ಇಲ್ಲಿನ ಗ್ರಾಪಂ ಸದಸ್ಯರು ಇತರರಿಗೆ ಮಾದರಿಯಾಗಿದ್ದಾರೆಂದು ಶ್ಲಾಘಿಸಿದರು.
ಹಿಂದಿನ ಗ್ರಾಪಂ ಸದಸ್ಯರ ಮಾದರಿಯಂತೆ ಹೊಸದಾಗಿ ಆಯ್ಕೆಯಾಗಿರುವ ಸದಸ್ಯರು ಪ್ರಾಮಾಣಿ ಕತೆಯಿಂದ ಗ್ರಾಮದ ಅಭಿವೃದ್ಧಿಗೆ ಪಣತೊಟ್ಟು ಕೆಲಸ ನಿರ್ವಹಿಸಬೇಕು. ಅಭಿವೃದ್ಧಿ ಕಾರ್ಯಗಳಲ್ಲಿ ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹುಣಶ್ಯಾಳ ಪಿಜಿ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಅವರು ಹೇಳಿದರು.
ಪ್ರಪಂಚದಲ್ಲಿಯೇ ನಮ್ಮ ರಾಷ್ಟ್ರ ಇತರೇ ದೇಶಗಳಿಗೆ ಮಾದರಿಯಾಗಿದೆ. ಇಲ್ಲಿನ ಧಾರ್ಮಿಕಾಚರಣೆಗಳು ಹಾಗೂ ಪರಂಪರೆ ವಿಶ್ವಕ್ಕೆ ಮಾದರಿ ಎಂದು ಹೇಳಬಹುದು. ಪರಸ್ಪರ ಸಹೋದರತ್ವ ಮನೋಭಾವನೆಯಿಂದ ಎಲ್ಲ ಧರ್ಮಿಯ ಜನರು ಒಂದೇ ಎಂಬ ಏಕತೆ ಭಾವನೆಯಿಂದ ಬದುಕುತ್ತಿರುವುದು ಜಾತ್ಯಾತೀತ ಮನೋಭಾವನೆಗೆ ಸಾಕ್ಷಿಯಾಗಿದೆ ಎಂದು ಹೇಳಿದರು.
ನಿಜಗುಣ ದೇವರು ಈ ಭಾಗದಲ್ಲಿ ಭಕ್ತರಿಗೆ ಧಾರ್ಮಿಕ ಪರಂಪರೆ ಹಾಗೂ ಆಚರಣೆಯನ್ನು ಉಣಬಡಿಸುತ್ತಿದ್ದಾರೆ. ಪ್ರತಿವರ್ಷ ನಡೆಯುವ ಜಾತ್ರೆಯಲ್ಲಿ ರಾಜ್ಯ ಮಾತ್ರವಲ್ಲದೇ ಅನ್ಯ ರಾಜ್ಯದ ಭಕ್ತರು ಸಹ ಶ್ರದ್ಧಾ ಭಕ್ತಿ ಭಾವದಿಂದ ಈ ಮಠಕ್ಕೆ ನಡೆದುಕೊಳ್ಳುತ್ತಿದ್ದಾರೆ. ನಿಜಗುಣ ದೇವರ ದೂರ ದೃಷ್ಟಿಯಿಂದಾಗಿ ಶ್ರೀಮಠ ಪ್ರಗತಿಪಥದತ್ತ ಸಾಗುತ್ತಿದೆ. ಜೊತೆಗೆ ಸರ್ಕಾರದಿಂದ ಕೂಡ ಸಾಕಷ್ಟು ಅಭಿವೃದ್ಧಿಪರ ಕಾಮಗಾರಿಗಳನ್ನು ಈ ಮಠದಲ್ಲಿ ಕೈಗೊಳ್ಳಲಾಗಿದೆ. ಹುಣಶ್ಯಾಳ ಪಿಜಿ ಗ್ರಾಮದ ಅಭಿವೃದ್ಧಿಯಲ್ಲಿಯೂ ಶ್ರೀಗಳ ಪಾತ್ರ ಬಹು ದೊಡ್ಡದು ಎಂದು ಪ್ರಶಂಸಿಸಿದರು.
ಸಿದ್ಧಲಿಂಗ ಕೈವಲ್ಯಾಶ್ರಮದ ಪೀಠಾಧಿಪತಿ ನಿಜಗುಣ ದೇವರು ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿ, ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಗುಣಗಾನ ಮಾಡಿದರು. ಇಂತಹ ದಯಾಮಯಿ ಹಾಗೂ ಹೃದಯವಂತ ಶಾಸಕರನ್ನು ಪಡೆದಿರುವುದು ಈ ಕ್ಷೇತ್ರದ ಜನರ ಸೌಭಾಗ್ಯವೆಂದರು.

ಧಾರ್ಮಿಕ, ಶೈಕ್ಷಣ ಕ, ಸಾಮಾಜಿಕ ಮುಂತಾದ ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧನೆಗೈಯುತ್ತಿದ್ದಾರೆ. ತಮ್ಮಲ್ಲಿಗೆ ಕಷ್ಟ-ಕಾರ್ಪಣ್ಯಗಳೆಂದು ಹೇಳಿಕೊಂಡು ಬರುವ ಜನರನ್ನು ಬರಿಗೈಯಿಂದ ಕಳುಹಿಸಿದ ಉದಾಹರಣೆಗಳಿಲ್ಲ. ದಾನ-ಧರ್ಮದಲ್ಲಿ ಬಾಲಚಂದ್ರ ಜಾರಕಿಹೊಳಿ ಅವರು ಎತ್ತಿದ ಕೈ. ಅಲ್ಲದೇ ತಾಯಿ-ತಂದೆಯವರನ್ನು ಹೇಗೆ ಪೂಜಿಸಬೇಕು. ಅವರ ಋಣ ಹೇಗೆ ತೀರಿಸಬೇಕು ಎಂಬುದನ್ನು ಬಾಲಚಂದ್ರ ಅವರಿಂದ ಇಂದಿನ ಯುವಕರು ಕಲಿಯಬೇಕಾದ ಅಗತ್ಯವಿದೆ. ಬಾಲಚಂದ್ರ ಜಾರಕಿಹೊಳಿ ಅವರು ಆಧುನಿಕ ಶ್ರವಣಕುಮಾರ ಎಂದು ಬಣ್ಣಿಸಿದರು.
ತಾಪಂ ಸದಸ್ಯ ಬಸಪ್ಪ ಹುಕ್ಕೇರಿ, ವಕೀಲ ಮುತ್ತೆಪ್ಪ ಕುಳ್ಳೂರ, ಪ್ರಭಾಶುಗರ ನಿರ್ದೇಶಕ ಶಿದ್ಲಿಂಗ ಕಂಬಳಿ, ರಾಮನಾಯ್ಕ ನಾಯ್ಕ, ಶಿಕಂದರ ನದಾಫ, ಶಬ್ಬೀರ ತಾಂಬಿಟಗಾರ, ನಿಜಗುಣ ಅಥಣ , ನಾಗಪ್ಪ ನಾಯ್ಕ, ಅಪ್ಪಯ್ಯ ಪಾಟೀಲ, ಶಂಕರ ಇಂಚಲ, ಲಾಲಸಾಬ ಜಮಾದಾರ, ಬಸಗೌಡ ನಾಯ್ಕ, ಲಕ್ಕಪ್ಪ ಸುಂಕದ, ಗುರುಸಿದ್ಧ ಕರಬಣ , ಅಜೀತ ಪಾಟೀಲ, ಗ್ರಾಪಂ ಸದಸ್ಯರು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಶ್ರೀಮಠದಿಂದ ನಿಜಗುಣ ದೇವರು ಸತ್ಕರಿಸಿ ನೆನಪಿನ ಕಾಣ ಕೆ ಅರ್ಪಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button