
ಪ್ರಗತಿವಾಹಿನಿ ಸುದ್ದಿ: ಬಿಎಂಟಿಸಿ ಬಸ್ ಗೆ ರೈಲು ಡಿಕ್ಕಿಹೊಡೆದು ಭೀಕರಪ ಅಪಘಾತ ಸಂಭವಿಸಿರುವ ಘಟನೆ ನಡೆದಿದೆ.
ಬೆಂಗಳೂರಿನ ಸಾದರಮಂಗಲದ ಬಳಿ ಈ ಅವಘಡ ಸಂಭವಿಸಿದೆ. ರೈಲ್ವೆ ಪ್ಯಾರ್ಲರ್ ರೋಡ್ ನಲ್ಲಿ ಬಿಎಂಟಿ ಬಸ್ ರಿವರ್ಸ್ ತೆಗೆದುಕೊಳ್ಳುವಾಗ ಬಸ್ ರೈಲ್ವೆ ಹಳಿಗೆ ಬಂದಿದೆ. ವೇಗವಾಗಿ ಬಂದ ರೈಲು ಬಸ್ ಗೆ ಡಿಕ್ಕಿ ಹೊಡೆದಿದೆ.
ಅಪಘಾತದ ರಭಸಕ್ಕೆ ಬಸ್ ನ ಹಿಂಭಾಗ ಜಖಂಗೊಂಡಿದೆ. ಅದೃಷ್ಟವಶಾತ್ ಬಸ್ ನಲ್ಲಿ ಪ್ರಯಾಣಿಕರು ಇರಲಿಲ್ಲವಾದ್ದರಿಂದ ಭಾರಿ ದುರಂತ ತಪ್ಪಿದೆ. ಆದರೆ ಬಸ್ ನಿರ್ವಾಹಕನಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಬಸ್ ಚಾಲಕನ ಅಜಾಗರೂಕತೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ


