Kannada NewsKarnataka NewsLatest

ಬೆಳಗಾವಿ ರಿಂಗ್ ರಸ್ತೆ ಭೂ ಸ್ವಾಧೀನಕ್ಕೆ ಶೇ.50ರಷ್ಟು ಪಾಲನ್ನು ನೀಡಲು ಮನವಿ

ಬೆಳಗಾವಿಯ ಅತೀ ಅಗತ್ಯವಾದ ರಿಂಗ್ ರೋಡ್ ಯೋಜನೆ ಸಂಬಂಧ ಮುಖ್ಯಮಂತ್ರಿಗಳು ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಮಾತನಾಡಿ ಯೋಜನೆ ಆದಷ್ಟು ಶೀಘ್ರ ಜಾರಿಯಾಗಲು ಅಗತ್ಯ ಕ್ರಮವಾಗುವಂತೆ ನೋಡಿಕೊಳ್ಳುವಂತೆ ಮನವಿ ಮಾಡುತ್ತೇನೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ರಿಂಗ್ ರಸ್ತೆ ನಿರ್ಮಾಣ ಸಂಬಂಧ ಭೂ ಸ್ವಾಧೀನಕ್ಕೆ ಶೇ. 50ರಷ್ಟು ವೆಚ್ಚವನ್ನು ನೀಡಲು ರಾಜ್ಯ ಸರಕಾರ ಕೂಡಲೆ ಒಪ್ಪಿಗೆ ಸೂಚಿಸಬೇಕು ಎಂದು ಇನ್ ಸ್ಟಿಟ್ಯೂಟ್ ಆಫ್ ಎಂಜಿನಿಯರ್ಸ್ ಆ್ಯಂಡ್ ಪ್ರೊಫೇಶನಲ್ ಫೋರಂ ಮನವಿ ಸಲ್ಲಿಸಿದೆ.
ಮುಖ್ಯಮಂತ್ರಿಗಳ ಕಾರ್ಯದರ್ಶಿ ಗಿರೀಶ್ ಹೊಸೂರು ಅವರಿಗೆ ಶನಿವಾರ ಬೆಳಗಾವಿಯಲ್ಲಿ ಫೋರಂ ಸದಸ್ಯರು ಮನವಿ ಸಲ್ಲಿಸಿದರು.
 ಡಾ.ರಾಜಶೇಖರ ಪಾಟೀಲ, ನಿವೃತ್ತ ನುಪರಿಂಟೆಂಡೆಂಟ್ ಎಂಜಿನಿಯರ್ ವಿ.ಬಿ. ಜಾವೂರ್, ಆನಂದ ಹಾವಣ್ಣವರ್, ಕುಂದರಗಿ ಮೊದಲಾದವರು ಮನವಿ ಸಲ್ಲಿಸಿದರು.
 ಈ ಕುರಿತು ಪ್ರಗತಿವಾಹಿನಿಯೊಂದಿಗೆ ಮಾತನಾಡಿದ ಗಿರೀಶ್ ಹೊಸೂರು, ಬೆಳಗಾವಿಯ ಅತೀ ಅಗತ್ಯವಾದ ಈ ಯೋಜನೆ ಸಂಬಂಧ ಮುಖ್ಯಮಂತ್ರಿಗಳು ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಮಾತನಾಡಿ ಯೋಜನೆ ಆದಷ್ಟು ಶೀಘ್ರ ಜಾರಿಯಾಗಲು ಅಗತ್ಯ ಕ್ರಮವಾಗುವಂತೆ ನೋಡಿಕೊಳ್ಳುವಂತೆ ಮನವಿ ಮಾಡುವುದಾಗಿ ತಿಳಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button