ಪ್ರಗತಿವಾಹಿನಿ ಸುದ್ದಿ; ಮೈಸೂರು: ರೈತರಿಂದ ಹೆದ್ದಾರಿ ತಡೆ ಪ್ರತಿಭಟನೆ ನಡೆಯುತ್ತಿರುವ ವಿಚಾರವಾಗಿ ಮಾತನಾಡಿದ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, ರೈತರ ಜೊತೆ ಮಾತುಕತೆಗೆ ಕೇಂದ್ರ ಸಿದ್ಧ ಎಂದು ಹೇಳುತ್ತಿದ್ದರೂ ಕೂಡ ರೈತರು ಪ್ರತಿಭಟನೆ ದಾರಿ ಹಿಡಿದಿದ್ದಾರೆ. ಪಟ್ಟಭದ್ರ ಹಿತಾಸಕ್ತಿಗಳಿಂದ ಈ ಪ್ರತಿಭಟನೆ ನಡೆಯುತ್ತಿದೆ ಎಂದಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಸಚಿವರು, ಅರಂಭದಿಂದಲೂ ನಾವು ರೈತರ ಜೊತೆ ಮಾತುಕತೆಗೆ ಸಿದ್ಧ ಎಂದಿದ್ದೇವೆ ಆದರೂ ರೈತರು ಕೋರ್ಟ್ ಮೆಟ್ಟಿಲೇರಿದರು. ಕೆಲ ಕಾಲ ಕಾಯ್ದೆ ಸ್ಥಗಿತಮಾಡಿ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ನ್ಯಾಯಾಲಯ ಸೂಚನೆ ನೀಡಿದೆ. ಆದರೂ ರೈತರ ಸೋಗಿನಲ್ಲಿ ಕೆಲವರು ಪ್ರತಿಭಟನೆಗೆ ಮುಂದಾಗಿದ್ದಾರೆ. ಅಲ್ಲದೇ ಈಗ ಹಾಲಿವುಡ್ ತಾರೆಯರ ಬೆಂಬಲವನ್ನೂ ಪಡೆದಿದ್ದಾರೆ ಎಂದು ಗುಡುಗಿದರು.
ರೈತರ ಹೋರಾಟಕ್ಕೆ ಪಾಪ್ ಗಾಯಕಿ ರೆಹಾನ್ನಾ ಬೆಂಬಲ ನೀಡಲು ಆಕೆ ಯಾರು? ಭತ್ತದ ಗದ್ದೆ ಬಗ್ಗೆ ಅವರಿಗೇನು ಗೊತ್ತು? ಪಟ್ಟಭದ್ರ ಹಿಸಾಕ್ತಿಗಳಿಂದ ನಡೆಯುತ್ತಿರುವ ಪ್ರತಿಭಟನೆ ಇದು. ದೇಶಕ್ಕೆ ಸ್ವಾತಂತ್ರ್ಯ ಬಂದಿದೆ. ಆದರೆ ರೈತರಿಗೆ ಇನ್ನೂ ಸಿಕ್ಕಿಲ್ಲ. ರೈತನ ಬೆಳೆ ಮುಕ್ತವಾಗಿ ಮಾರಲು ಅವಕಾಶ ನೀಡಿದ್ದೇವೆ. ರೈತರಿಗೆ ಬೆಂಬಲ ಬೆಲೆ ನೀಡಿದ್ದು ಮೋದಿ ಸರ್ಕಾರ. ರೈತರು ಎಪಿಎಂಸಿ ಕೈಗೊಂಬೆಗಳಾಗಬಾರದು ಎಂದು ಕಾಯ್ದೆಯಲ್ಲಿ ತಿದ್ದುಪಡಿ ಮಾಡಲಾಗಿದೆ ಎಂದರು.
ರೈತರ ಹೆಸರಲ್ಲಿ ರಾಜಕೀಯ ಮಾಡುವ ಕೆಲಸ ನಡೆದಿದೆ; ನಳೀನ್ ಕುಮಾರ್ ಕಟೀಲ್ ಕಿಡಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ