Latest

ರೈತರ ಹೆಸರಲ್ಲಿ ರಾಜಕೀಯ ಮಾಡುವ ಕೆಲಸ ನಡೆದಿದೆ; ನಳೀನ್ ಕುಮಾರ್ ಕಟೀಲ್ ಕಿಡಿ

ಪ್ರಗತಿವಾಹಿನಿ ಸುದ್ದಿ; ಚಿತ್ರದುರ್ಗ: ಒಂದೂವರೆ ವರ್ಷ ಕೃಷಿ ಕಾಯ್ದೆಯನ್ನು ತಡೆ ಹಿಡಿಯುವ ಬಗ್ಗೆ ಈಗಾಗಲೇ ಭರವಸೆಯನ್ನು ನೀಡಲಾಗಿದೆ. ಆದಾಗ್ಯೂ ರೈತರು ಹೋರಾಟದ ಹಾದಿ ಹಿಡಿದಿರುವುದು ವಿಪಕ್ಷಗಳ ಕೈವಾಡ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದ್ದಾರೆ.

ರೈತರ ಹೆದ್ದಾರಿ ತಡೆ ಪ್ರತಿಭಟನೆ ವಿಚಾರವಾಗಿ ಮಾತನಾಡಿದ ಅವರು, ಇದೊಂದು ರೀತಿಯ ರಾಜಕೀಯ ಹೋರಾಟ. ಎಡಪಕ್ಷಗಳು, ಕಾಂಗ್ರೆಸ್ ಸೇರಿಕೊಂಡು ನಡೆಸುತ್ತಿರುವ ಹುನ್ನಾರ. ರೈತರ ಹೆಸರಲ್ಲಿ ರಾಜಕೀಯ ಮಾಡುವ ಕೆಲಸ ಇದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Home add -Advt

ಪ್ರಜಾಪ್ರಭುತ್ವದಲ್ಲಿ ಸಂಧಾನಕ್ಕೆ ಕರೆದಾಗ ಮಾತುಕತೆ ನಡೆಸುವುದು ಕ್ರಮ. ಆದರೆ ಇಲ್ಲಿ ಹೋರಾಟವನ್ನು ಮುಂದುವರೆಸಲಾಗುತ್ತಿದೆ. ಇದೊಂದು ರಾಜಕೀಯ ಪ್ರೇರಿತ ಹೋರಾಟವಾಗಿದೆ ಎಂದು ಹೇಳಿದರು.

Related Articles

Back to top button