ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಬೆಳಗಾವಿಯಿಂದ ಬೆಂಗಳೂರಿಗೆ ಸ್ಟಾರ್ ಏರ್ ವೇಸ್ ವಿಮಾನ ಸಂಚಾರ ಸೋಮವಾರ ಆರಂಭವಾಗಿದೆ.
ಬೆಳಗಾವಿ ವಿಮಾನ ನಿಲ್ದಾಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಸಂಸದರಾದ ಪ್ರಭಾಕರ ಕೋರೆ, ಪ್ರಕಾಶ ಹುಕ್ಕೇರಿ, ಸ್ಟಾರ್ ಗ್ರುಪ್ ಮಾಲಿಕ ಸಂಜಯ ಘೋಡಾವತ್ ಮೊದಲಾದವರು ವಿಮಾನ ಸಂಚಾರಕ್ಕೆ ಚಾಲನೆ ನೀಡಿದರು.
ಶಾಸಕರಾದ ಅಭಯ ಪಾಟೀಲ, ಅನಿಲ ಬೆನಕೆ, ಜಿಲ್ಲಾಧಿಕಾರಿ ಎಸ್.ಬಿ.ಬೊಮ್ಮನಳ್ಳಿ, ವಿಮಾನನಿಲ್ದಾಣ ನಿರ್ದೇಶಕ ರಾಜೇಶಕುಮಾರ ಮೌರ್ಯ, ಉದ್ಯಮಿಗಳಾದ ಚೈತನ್ಯ ಕುಲಕರ್ಣಿ, ಪರಾಗ್ ಭಂಡಾರೆ, ಸಚಿನ್ ಸಬ್ನಿಸ್, ರೋಹನ್ ಜುವಳಿ ಮೊದಲಾದವರು ಇದ್ದರು.
ಇದೇ ವೇಳೆ ಹಾಜರಿದ್ದ ಬೆಳಗಾವಿ ವಾಣಿಜ್ಯೋದ್ಯಮ ಸಂಘದ ಪದಾಧಿಕಾರಿಗಳು, ಬೆಳಗಾವಿಯಿಂದ ಮುಂಬೈ, ತಿರುಪತಿ, ಹೈದರಾಬಾದ್, ಅಹಮದಾಬಾದ್ ಗಳಿಗೂ ವಿಮಾನ ಸೇವೆ ಆರಂಭಿಸುವಂತೆ ಸಂಜಯ ಘೋಡಾವತ್ ಅವರಿಗೆ ಮನವಿ ಮಾಡಿದರು.