Latest

ಸಿಐಡಿ ಡಿಐಜಿ ದಿಲೀಪ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ; ಗೃಹ ಇಲಾಖೆಗೆ ದೂರು ನೀಡಿದ ಮಹಿಳಾ ಉದ್ಯೋಗಿ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸಿಐಡಿ ಡಿಐಜಿ ದಿಲೀಪ್ ವಿರುದ್ಧ ಪ್ರತಿಷ್ಠಿತ ಸಾರಿಗೆ ಮತ್ತು ಲಾಜಿಸ್ಟಿಕ್ಸ್ ಕಂಪನಿಯ ಮಹಿಳಾ ಉದ್ಯೋಗಿ ಲೈಂಗಿಕ ಕಿರುಕುಳ ಆರೋಪ ಮಾಡಿದ್ದು, ಈ ಸಂಬಂಧ ಮಹಿಳಾ ಉದ್ಯೋಗಿ ಗೃಹ ಇಲಾಖೆಗೆ ದೂರು ನೀಡಿದ್ದಾರೆ.

ಸಿಐಡಿ ಡಿಐಜಿ ದಿಲೀಪ್, ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರಾಗಿದ್ದ ಸಂದರ್ಭದಲ್ಲಿ ಮಹಿಳೆ ಪ್ರತಿಷ್ಠಿತ ಸಾರಿಗೆ ಮತ್ತು ಲಾಜೆಸ್ಟಿಕ್ ಸಮೂಹ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಈ ವೇಳೆ ಕಳೆದ ನವೆಂಬರ್ ಹಾಗೂ ಡಿಸೆಂಬರ್ ನಲ್ಲಿ ಐಟಿ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇನ್ನೋರ್ವ ಸ್ನೇಹಿತೆ ಜೊತೆ ದಿಲೀಪ್ ಅವರನ್ನು ಭೇಟಿಯಾಗಿದ್ದರು. ಈ ವೇಳೆ ಮೊಬೈಲ್ ನಂಬರ್ ಪಡೆದ ದಿಲೀಪ್ ಮಹಿಳೆಗೆ ಕರೆ ಮಾಡಿ ತಮ್ಮನ್ನು ಭೇಟಿಯಾಗಲು ಮನೆಗೆ ಬರುವಂತೆ ಹೇಳಿದ್ದರು ಎಂದು ದೂರಿದ್ದಾರೆ.

ಅದರಂತೆ ಸಿಐಡಿ ಡಿಐಜಿ ದಿಲೀಪ್ ರನ್ನು ಅವರ ಮನೆಯಲ್ಲಿ ಭೇಟಿಯಾದಾಗ ದಿಲೀಪ್ ಅಸಭ್ಯವಾಗಿ ವರ್ತಿಸಿದ್ದಲ್ಲದೇ ತನ್ನ ಜೊತೆ ಸಂಬಂಧವಿರಿಸಿಕೊಳ್ಳುವಂತೆ ಬಲವಂತ ಮಾಡಿದ್ದರು. ಆದರೆ ನನಗೆ ಈಗಾಗಲೇ ವಿವಾಹವಾಗಿದ್ದಾಗಿ ಹೇಳಿ ಸ್ಥಳದಿಂದ ಹೊರಟು ಬಂದಿದ್ದೆ. ಆದರೆ ಅಷ್ಟಕ್ಕೆ ನಿಲ್ಲದೆ ಅಶ್ಲೀಲ ಸಂದೇಶಗಳನ್ನು ರವಾನಿಸಿ ಕಿರುಕುಳ ನೀಡುತ್ತಿದ್ದರು.  ಅಲ್ಲದೇ ನನ್ನ ವಿರುದ್ಧ ಅಪಪ್ರಚಾರಮಾಡಿ ನನ್ನ ಹೆಸರು ಕೆಡಿಸುತ್ತಿದ್ದಾರೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.

ಅಷ್ಟೇ ಅಲ್ಲ ಸಿಐಡಿ ಡಿಐಜಿ ದಿಲೀಪ್ ವಿರುದ್ಧ ಮಹಿಳೆ ಇನ್ನೂ ಅನೇಕ ಆರೋಪಗಳನ್ನು ಮಾಡಿದ್ದು, ಗೃಹ ಇಲಾಖೆ ಮುಂದಿನ ಕ್ರಮ ಏನು ಎನ್ನುವುದನ್ನು ಕಾದು ನೋಡಬೇಕಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button