Latest

ರಾತ್ರೋ ರಾತ್ರಿ ಸರ್ಜಿಕಲ್ ಸ್ಟ್ರೈಕ್

ಪ್ರಗತಿವಾಹಿನಿ ಸುದ್ದಿ, ನವದೆಹಲಿ

ಮಂಗಳವಾರ ಮಧ್ಯರಾತ್ರಿ ಭಾರತೀಯ ವಾಯುಪಡೆ ವಿಮಾನಗಳು ಪಾಕಿಸ್ತಾನಿ ಉಗ್ರ ನೆಲೆಗಳ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಸಿವೆ.

ಪಾಕಿಸ್ತಾನ ಗಡಿ ದಾಟಿ ಹೋಗಿ ಉಗ್ರರ ಅಡಗುತಾಣದ ಮೇಲೆ ದಾಳಿ ಮಾಡಲಾಗಿದ್ದು ಹಲವು ಉಗ್ರರು ಹತರಾಗಿದ್ದಾರೆ ಎನ್ನಲಾಗಿದೆ.

ಭಾರತದ ವಿಮಾನಗಳು ಗಡಿ ದಾಟಿ ಹೋಗಿದ್ದನ್ನು ಪಾಕಿಸ್ತಾನ ಖಚಿತಪಡಿಸಿದೆ. ಆದರೆ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದಿದೆ. ನಾವು ಪ್ರತಿದಾಳಿ ನಡೆಸಿ ಭಾರತೀಯ ವಿಮಾನಗಳನ್ನು ಹಿಮ್ಮೆಟ್ಟಿದ್ದಾಗಿ ಪಾಕಿಸ್ತಾನದ ಅಧಿಕಾರಿಗಳು ಹೇಳಿದ್ದಾರೆ.

ಭಾರತ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ದಾಳಿಯ ವಿವರವನ್ನು ಪ್ರಧಾನಿ ಸೇರಿದಂತೆ ಸಂಬಂಧಿಸಿದ ಸಚಿವರಿಗೆ ನೀಡಲಾಗಿದೆ. ದಾಳಿ ಯಶಸ್ವಿಯಾಗಿದೆ ಎಂದಿ ಅನಧಿಕೃತ ಮೂಲಗಳು ಹೇಳಿವೆ.

ಅಧಿಕೃತ ಹೇಳಿಕೆಗಾಗಿ ಕಾಯಲಾಗುತ್ತಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button