ಪ್ರಗತಿವಾಹಿನಿ ಸುದ್ದಿ, ಮಾಂಜರಿ – ಕರ್ನಾಟಕ ಮಹಾರಾಷ್ಟ್ರ ರಾಜ್ಯದ ಗಡಿಭಾಗದ ಸಾವಿರಾರು ಭಕ್ತರ ಆರಾಧ್ಯ ದೈವ ಹಾಗೂ ಚಿಕ್ಕೋಡಿ ತಾಲೂಕಿನ ಸುಕ್ಷೇತ್ರ ಯಡೂರಿನ ಶ್ರೀವೀರಭದ್ರೇಶ್ವರ ಮಹಾರಥೋತ್ಸವವು ಇಂದು ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.
ಮಹಾರಾಷ್ಟ್ರ ಕರ್ನಾಟಕ ಗಡಿಭಾಗದ ಜಾಗೃತ ದೇವಸ್ಥಾನ ಎಂದು ಪ್ರಸಿದ್ಧಿ ಪಡೆದಿರುವ ಚಿಕ್ಕೋಡಿ ತಾಲೂಕಿನ ಯಡೂರ ಗ್ರಾಮದ ಶ್ರೀವೀರಭದ್ರೇಶ್ವರ ಮಹಾರಥೋತ್ಸವ ಶುಕ್ರವಾರ ಸಾವಿರಾರು ಜನರ ಸಮ್ಮುಖದಲ್ಲಿ ಸಂಭ್ರಮ, ಸಡಗರದಿಂದ ಜರುಗಿತು.ಯಡೂರು ದೇವಸ್ಥಾನದಿಂದ ಪ್ರಾರಂಭವಾದ ರಥೋತ್ಸವವು ಬಸ್ ನಿಲ್ದಾಣದ ಮೂಲಕ ಹಳೆಯ ಯಡೂರಿನ ಬಸವೇಶ್ವರ ದೇವಸ್ಥಾನ ತಲುಪಿ ಮತ್ತೆ ವೀರಭದ್ರೇಶ್ವರ ದೇವಸ್ಥಾನಕ್ಕೆ ವಾಪಸ್ಸಾಯಿತು.
ರಥೋತ್ಸವದ ಉದ್ದಕ್ಕೂ ಭಕ್ತರ ಉತ್ಸಾಹ ಮುಗಿಲು ಮುಟ್ಟಿತ್ತು. ಭಕ್ತರು ತೇರಿನ ಮೇಲೆ ಕೊಬ್ಬರಿ,ಖಾರೀಕ, ಸಕ್ಕರೆ ಹೂವು ಭಕ್ತಿಯಿಂದ ಅರ್ಪಣೆ ಮಾಡಿದರು. ಹರ ಹರ ಮಹಾದೇವ,ಶ್ರಿ ವೀರಭದ್ರೇಶ್ವರ ಮಹಾರಾಜಕೀ ಜೈ ಘೋಷಣೆಗಳು ಮುಗಿಲು ಮುಟ್ಟಿದವು. ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಯುವಕರು ಭಕ್ತಿ ಭಾವದಿಂದ ತೇರೆಳೆದು ಸಂಭ್ರಮಿಸಿದರು. ತೇರಿನ ಉದ್ದಕ್ಕೂ ಡೊಳ್ಳು ಕುಣ ತ, ಝಾಂಜ್ ಪಥಕ್ ಸೇರಿದಂತೆ ವಿವಿಧ ಕಲಾ ತಂಡಗಳು ಭಾಗಹಿಸಿದ್ದವು. ಶ್ರೀಶೈoಲ ಜಗದ್ಗುರುಗಳ ನೇತೃತ್ವದಲ್ಲಿ ನಡೆದ ಮಹಾರಥೋತ್ಸವಕ್ಕೆ ಅಂಬಿಕಾ ನಗರದ ಶಿವಾಚಾರ್ಯರು ಬನಹಟ್ಟಿಯ ಗೌರಿಶಂಕರ ಶಿವಾಚಾರ್ಯರು ಹಾಗೂ ಯಕ್ಸಂಬಾದ ಬಸವಜ್ಯೋತಿ ಯೂತ್ ಫೌಂಡೇಶನ್ ಅಧ್ಯಕ್ಷರಾದ ಬಸವ ಪ್ರಸಾದ್ ಜೊಲ್ಲೆ ಚಿಕ್ಕೋಡಿ-ಸದಲಗಾ ಶಾಸಕ ಹಾಗೂ ಇನ್ನುಳಿದ ಗಣ್ಯರ ಉಪಸ್ಥಿತಿಯಲ್ಲಿ ಚಾಲನೆ ನೀಡಿದರು. ಮಹಾರಥೋತ್ಸವ ಸಾಗಿದ ರಸ್ತೆಯ ಉದ್ದಕ್ಕೂ ಜನಸಾಗರವೇ ಕಂಡುಬಂತು. ಮುಂಜಾಗ್ರತಾ ಕ್ರಮವಾಗಿ ಅಂಕಲಿ ಪೊಲೀಸ್ ಠಾಣೆಯ ಪಿಎ??? ಲಕ್ಷ್ಮಣಪ್ಪ ??ರಿ ಇವರ ಮುಂದಾಳತ್ವದಲ್ಲಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ