ಪ್ರಗತಿವಾಹಿನಿ ಸುದ್ದಿ; ಕೋಲಾರ: ಬಾಲಕನೊಬ್ಬ ಅವಧಿ ಮೀರಿದ ಚಾಕೋಲೋಟೆ ಸೇವಿಸಿ ಅಸ್ವಸ್ಥನಾಗಿರುವ ಘಟನೆ ಕೋಲಾರ ಜಿಲ್ಲೆಯ ಕೆಜಿಎಫ್ ನಗರದ ಎಸ್.ಟಿ.ಬ್ಲಾಕ್ ನಲ್ಲಿ ನಡೆದಿದೆ.
6 ವರ್ಷದ ಲಚ್ಚನ್ ಅಸ್ವಸ್ಥ ಬಾಲಕ. ಬಾಲಕ ಜೆ.ಎಸ್.ಮೆಡಿಕಲ್ ಶಾಪ್ ನಲ್ಲಿ ಚಾಕೋಲೇಟ್ ಖರೀದಿಸಿದ್ದು, ಎಕ್ಸ್ ಪೈರ್ ಆಗಿರುವ ಚಾಕೋಲೇಟ್ ಸೇವಿಸಿದ್ದಾನೆ. ಕೆಲ ಸಮಯದಲ್ಲೇ ಬಾಲಕನಿಂಗೆ ವಾಂತಿ ಶುರುವಾಗಿದೆ.
ಅಸ್ವಸ್ಥ ಬಾಲಕನನ್ನು ಕೆಜಿಎಫ್ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮೆಡಿಕಲ್ ಸ್ಟೋರ್ ವಿರುದ್ಧ ಸ್ಥಳೀಯರ ಆಕ್ರೋಶ ವ್ಯಕ್ತವಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ