Latest

ಸತತ 6ನೇ ದಿನವೂ ಏರಿಕೆ ಕಂಡ ಪೆಟ್ರೋಲ್-ಡೀಸೆಲ್ ದರ

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ದೇಶದಲ್ಲಿ ದಿನದಿಂದ ದಿನಕ್ಕೆ ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆಯಾಗುತ್ತಿದ್ದು, ಇಂದು ಲೀಟರ್ ಪೆಟ್ರೋಲ್ ಬೆಲೆ 29 ಪೈಸೆ ಏರಿಕೆಯಾಗಿದ್ದರೆ ಡೀಸೆಲ್ ದರ 32 ಪೈಸೆ ಹೆಚ್ಚಳವಾಗಿದೆ.

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಹೆಚ್ಚಳವಾಗಿದ್ದು, ದೇಶಿಯ ಮಾರುಕಟ್ಟೆಯಲ್ಲಿ ತೈಲ ದರ ಏರಿಕೆಯಾಗುವುದು ಸಾಮಾನ್ಯ. ಆದರೆ ಅಂತಾರಾಷ್ತ್ರ‍ಿಯ ಮಾರುಕಟ್ಟೆಯಲ್ಲಿ ತೈಲ ದರ ಹೆಚ್ಚಳವಾಗದಿದ್ದರೂ ದೇಶಿಯ ಮಾರುಕಟ್ಟೆಯಲ್ಲಿ ತೈಲ ದರ ಏರುತ್ತಲೇ ಇದೆ ಎನ್ನಲಾಗಿದೆ.

ವಿವಿಧ ನಗರಗಳಲ್ಲಿ ಇಂದಿನ ಪೆಟ್ರೋಲ್ ಹಾಗೂ ಡೀಸೆಲ್ ದರಗಳ ಬಗ್ಗೆ ಮಾಹಿತಿ ಇಲ್ಲಿದೆ:

ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ಬೆಲೆ 91.40 ರೂ ಆಗಿದ್ದರೆ ಡೀಸೆಲ್ ದರ 83.47 ರೂ. ಆಗಿದೆ.
ದೆಹಲಿ: ಲೀಟರ್ ಪೆಟ್ರೋಲ್ ದರ 88.73ರೂ ಹಾಗೂ ಡೀಸೆಲ್ ದರ 79.06 ರೂ ಆಗಿದೆ.
ಚೆನ್ನೈ: ಲೀಟರ್ ಪೆಟ್ರೋಲ್ ದರ 88.73 ರೂ ಹಾಗೂ ಡೀಸೆಲ್ ದರ 79.06ರೂ ಆಗಿದೆ.
ಕೋಲ್ಕತ್ತಾ: ಲೀಟರ್ ಪೆಟ್ರೋಲ್ ದರ 90.01 ರೂ ಹಾಗೂ ಡೀಸೆಲ್ ದರ 82.65 ರೂ ಆಗಿದೆ
ಮುಂಬೈ: ಲೀಟರ್ ಪೆಟ್ರೋಲ್ ದರ 95.21 ರೂ ಹಾಗೂ ಡೀಸೆಲ್ ದರ 86.04 ರೂ ಆಗಿದೆ

 

ಶೀಘ್ರದಲ್ಲೇ ಪೆಟ್ರೋಲ್ ಬೆಲೆ 50 ರೂ!

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button