Kannada NewsLatest

ತಾಂತ್ರಿಕ ಯುಗದಲ್ಲಿ ಸಾಮಾಜಿಕ ಜಾಲತಾಣ ಅತ್ಯಂತ ಪ್ರಭಾವಿ ಮಾಧ್ಯಮ: ಸಚಿವ ರಮೇಶ್ ಜಾರಕಿಹೊಳಿ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಸರ್ಕಾರದ ಜನಪರ ಯೋಜನೆಗಳು ಹಾಗೂ ಸಾಧನೆಗಳನ್ನು ಜನಸಾಮಾನ್ಯರಿಗೆ ಮುಟ್ಟಿಸಲು ಇಂದಿನ ತಾಂತ್ರಿಕ ಹಾಗೂ ಯಾಂತ್ರಿಕ ಯುಗದಲ್ಲಿ ಸಾಮಾಜಿಕ ಜಾಲತಾಣ ಅತ್ಯಂತ ಪ್ರಭಾವಿ ಮಾಧ್ಯಮವಾಗಿ ಹೊರಹೊಮ್ಮುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು.

ರವಿವಾರ ಪಟ್ಟಣದ ಗೋಮಟೇಶ್ವರ ಸಭಾಭವನದಲ್ಲಿ ಗ್ರಾಮಾಂತರ ಜಿಲ್ಲೆಯ ಬಿಜೆಪಿ ಸಾಮಾಜಿಕ ಜಾಲತಾಣದ ಪದಾಧಿಕಾರಿಗಳ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಅತ್ಯಂತ ವೇಗವಾಗಿ ಬೇಳೆಯುತ್ತಿರುವ ಪ್ರಪಂಚದಲ್ಲಿ ಪ್ರಚಲಿತ ವಿದ್ಯಮಾನಗಳನ್ನು ತಿಳಿದುಕೊಳ್ಳಲು ಇಂದು ಪ್ರತಿಯೊಬ್ಬರು ಮೊಬೈಲ  ಹೆಚ್ಚಿನ ಪ್ರಮಾಣದಲ್ಲಿ ಬಳಸುತ್ತಿರುವದರಿಂದ ಜಾಲತಾಣ ಪ್ರಮುಖ ಪಾತ್ರವಹಿಸುತ್ತಿದೆ. ಬಿಜೆಪಿ ಯುವ ಕಾರ್ಯಕರ್ತರು ದಿನ ನಿತ್ಯ ಟೀಕಾಕಾರರ ವಿರುದ್ದ ಜಾಲತಾಣಗಳಲ್ಲಿ ಹೋರಾಡುತ್ತಿರುವದರಿಂದ ನಮ್ಮ ಪಕ್ಷದ ಜಾಲತಾಣ ಯೋಧರು ಎಂದು ಬಣ್ಣಿಸಲಾಗುತ್ತಿದೆ ಎಂದರು.

ಬಿಜೆಪಿ ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಸಂಜಯ ಪಾಟೀಲ ಮಾತನಾಡಿ, ಪ್ರಪಂಚದಲ್ಲಿ ಇಂದು ದೊಡ್ಡದಾದ ರಾಜಕೀಯ ಪಕ್ಷವಾಗಿ ಬಿಜೆಪಿ ಹೊರಹೊಮ್ಮಲು ಹಾಗೂ ಅನೇಕ ವಿರೋಧಿಗಳು ಬಿಜೆಪಿ ಬಗ್ಗೆ ಅಪಪ್ರಚಾರ ಮಾಡಿದರು ಕ್ಷಣಾರ್ಧದಲ್ಲಿ ಅದರ ಸತ್ಯಾಂಶಗಳನ್ನು ಹುಡುಕಿ ಪ್ರತಿಯೊಬ್ಬ ನಾಗರಿಕರಿಗೂ ಮುಟ್ಟಿಸುವ ಕೆಲಸಮಾಡುತ್ತಿರುವ ಪಕ್ಷದ ಸಾಮಾಜಿಕ ಜಾಲತಾಣಗಳ ಪದಾಧಿಕಾರಿಗಳ ಕಾರ್ಯ ಶ್ಲಾಘನೀಯ ಎಂದರು.

ಶಿಸ್ತಿನ ಪಕ್ಷವಾದ ಬಿಜೆಪಿ ಪಾರ್ಟಿಯ ಪ್ರತಿಯೊಂದೂ ವಿಭಾಗದಲ್ಲಿರುವ ಪ್ರತಿಯೊಬ್ಬರಿಗೂ ಕಾರ್ಯಾಗಾರದ ಮೂಲಕ ತಮಗೆ ಕೊಟ್ಟಿರುವ ಜವಾಬ್ದಾರಿಯನ್ನು ಅತ್ಯಂತ ಯಶಸ್ವಿಯಾಗಿ ನೇರವೆರಿಸಲು ತರಬೇತಿ ನೀಡಲಾಗುತ್ತಿದ್ದು ತವೆಲ್ಲರೂ ಈ ಬಗ್ಗೆ ಮಾಹಿತಿ ಪಡೆದುಕೊಂಡು ರಾಜ್ಯದಲ್ಲಿ ಉತ್ತಮ ಜಾಲಾತಾಣ ತಂಡವಾಗಿ ನಿರ್ಮಾಣವಾಗಲಿ ಎಂದರು.

ವೇದಿಕೆಯ ಮೇಲೆ ರಾಜ್ಯ ಬಿಜೆಪಿಯ ಸಾಮಾಜಿಕ ಜಾಲತಾಣದ ಸಹ ಸಂಚಾಲಕ ಪ್ರಶಾಂತ ಜಾಧವ, ಬೆಳಗಾವಿ ವಿಭಾಗದ ಸಹ ಪ್ರಭಾರಿ ಬಸವರಾಜ ಯಾಕ್ಕಂಚಿ,ಗುರು ಹುದ್ದಾರ, ಜಿಲ್ಲಾ ಪ್ರಧಾನಕಾರ್ಯದರ್ಶಿ ಮಹೇಶ ಮೊಹಿತೆ, ಸಂದೀಪ್ ದೇಶಪಾಂಡೆ, ಕಿರಣ ಜಾಧವ ಜಿಲ್ಲಾ ಮಾಧ್ಯಮ ಸಂಚಾಲಕ ಎಫ್.ಎಸ್.ಸಿದ್ದನಗೌಡರ, ಜಿಲ್ಲಾ ಸಾಮಾಜಿಕ ಜಾಲತಾಣದ ಸಂಚಾಲಕ ನೀತಿನ ಚೌಗಲೆ, ಸಂತೊಷ ದೇಶನೂರು, ದೇವಯಾಣಿ ಪಾಟೀಲ ಹಾಗೂ ಜಿಲ್ಲೆಯ ಸಾಮಾಜಿಕ ಜಾಲತಾಣದ ಪದಾಧಿಕಾರಿಗಳು ಇದ್ದರು

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button