Latest

ಮೀನು ಕ್ರೇಟ್ ಗಳ ಮದ್ಯೆ ಅಕ್ರಮ ಮದ್ಯ; 9 ಲಕ್ಷ ಮೌಲ್ಯದ ಗೋವಾ ಮದ್ಯ ಜಪ್ತಿ ಮಾಡಿದ ಪೊಲೀಸರು

ಪ್ರಗತಿವಾಹಿನಿ ಸುದ್ದಿ; ಕಾರವಾರ: ಗೋವಾದಿಂದ ಕಾರವಾರಕ್ಕೆ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದ್ದ 9.13 ಲಕ್ಷ ಮೌಲ್ಯದ 505 ಲೀಟರ್ ಮದ್ಯವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಇಂದು ಮುಂಜಾನೆ 2.30 ರ ಸಮಯದಲ್ಲಿ ಮಾಜಾಳಿ ಠಾಣಾ ವ್ಯಾಪ್ತಿಯಲ್ಲಿ ಗೋವಾದಿಂದ ಬರುತ್ತಿದ್ದ ವಾಹನ ಸಂಖ್ಯೆ AP 37TD-9855 ಲಾರಿಯನ್ನು ತಪಾಸಣೆ ಮಾಡಲಾಗಿದ್ದು, ಮೀನು ತುಂಬುವ 300 ಖಾಲಿ ಕ್ರೇಟ್ ಗಳ ಮದ್ಯೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದು ಪತ್ತೆಯಾಗಿದೆ. ಲಾರಿ ಚಾಲಕನನ್ನು ಬಂಧಿಸಿ 505ಲೀ ಗೋವಾ ಮದ್ಯ ವಶಕ್ಕೆ ಪಡೆಯಲಾಗಿದೆ.

ಅಂದಾಜು 9.13 ಲಕ್ಷ ರೂ ಮೌಲ್ಯದ ಮದ್ಯ, 10 ಚಕ್ರಗಳ ಕಂಟೈನರ್ ಅಂದಾಜು ಮೌಲ್ಯ ರೂ 15 ಲಕ್ಷಗಳು, ಪ್ಲಾಸ್ಟಿಕ್ ಕ್ರೇಟ್ ಸೇರಿದಂತೆ ಒಟ್ಟು 25 ಲಕ್ಷ ಮೌಲ್ಯದ ಸ್ವತ್ತುಗಳನ್ನು ಜಪ್ತಿ ಮಾಡಲಾಗಿದೆ.

Home add -Advt

Related Articles

Back to top button