ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಮೇಶ್ ಜಾರಕಿಹೊಳಿ ರಾಸಲೀಲೆಸಿಡಿ ಪ್ರಕರಣದ ಬಗ್ಗೆ ನಾಗರಿಕ ಹಕ್ಕು ಹೋರಾಟ ಸಮಿತಿ ಅಧ್ಯಕ್ಷ ದಿನೇಶ್ ಕಲ್ಲಹಳ್ಳಿ ಪೊಲೀಸ್ ಆಯುಕ್ತರ ಕಚೇರಿಗೆ ತೆರಳಿ ದೂರು ನೀಡಿ, ಮಾಧ್ಯಮಗಳಿಗೆ ವಿಡಿಯೋ ಬಿಡುಗಡೆ ಮಾಡುವ ಮೂರು ಗಂಟೆ ಮೊದಲೇ ಯೂಟ್ಯೂಬ್ ನಲ್ಲಿ ಮಾಹಿತಿ ಬಹಿರಂಗವಾಗಿದೆ.
ರಷ್ಯಾದ ರಾಜಧಾನಿ ಮಾಸ್ಕೋದಲ್ಲಿ ವಿಡಿಯೋ ಅಪ್ ಲೋಡ್ ಮಾಡಿರುವ ಬಗ್ಗೆ ಇಂಟರ್ನೆಟ್ ಪ್ರೊಟೋಕಾಲ್ ವಿಳಾಸದಿಂದ ಗೊತ್ತಾಗಿದೆ. ಆದರೆ ವಿಡಿಯೋವನ್ನು ಕೆಲ ತಾಸುಗಳಲ್ಲಿ ಡಿಲಿಟ್ ಮಾಡಲಾಗಿದೆ.
ಇನ್ನು ರಮೇಶ್ ಜಾರಕಿಹೊಳಿಯವರನ್ನು ಖೆಡ್ಡಾಗೆ ಕೆಡವಲೆಂದೇ ಒಂದು ಗುಂಪು ಹಲವು ತಿಂಗಳುಗಳಿಂದ ಪಕ್ಕಾ ಪ್ಲಾನ್ ಮಾಡಿ, ರಮೇಶ್ ಜಾರಕಿಹೊಳಿ ವೀಕ್ ನೆಸ್ ಅರಿತು ಈ ಯೋಜನೆ ರೂಪಿಸಿತ್ತು ಎಂದು ಹೇಳಲಾಗುತ್ತಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ