ತಕ್ಷಣವೇ ವೆಬ್ ಸೈಟ್ ಸಾಮರ್ಥ್ಯ ಹೆಚ್ಚಳ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ದಯವಿಟ್ಟು ಕ್ಷಮಿಸಿ, ನಿಮಗಾದ ತೊಂದರೆಗೆ ವಿಷಾದಿಸುತ್ತೇವೆ.
ಬುಧವಾರ ಮಧ್ಯಾಹ್ನ ನಂತರ ಸುಮಾರು ಮೂರೂವರೆ ಗಂಟೆಗಳ ಕಾಲ ಓದುಗರಿಗೆ ಪ್ರಗತಿವಾಹಿನಿ ಲಭ್ಯವಾಗಲಿಲ್ಲ. ವೆಬ್ ಸೈಟ್ ಓಪನ್ ಆಗುತ್ತಿರಲಿಲ್ಲ. ನೂರಾರು ಓದುಗರು ಕರೆ ಮಾಡಿ ವಿಚಾರಿಸಿದರು. ಅನೇಕರು ಸ್ಕ್ರೀನ್ ಶಾಟ್ ತೆಗೆದು ವಾಟ್ಸಪ್ ಸಂದೇಶ ರವಾನಿಸಿದರು.
ಪ್ರಗತಿವಾಹಿನಿಯ ಓದುಗರ ಸಂಖ್ಯೆ ನಮ್ಮ ನಿರೀಕ್ಷೆಗೂ ಮೀರಿ ಹೆಚ್ಚಾಗುತ್ತಿದೆ. ಕೇವಲ ಎರಡೂ ಕಾಲು ವರ್ಷದಲ್ಲಿ ಓದುಗರ ಸ್ಪಂದನೆ ಅದ್ಭುತವಾಗಿದೆ. ಸುದ್ದಿ ಹಾಕುತ್ತಿದ್ದಂತೆ ಓದುಗರು ವೆಬ್ ಸೈಟ್ ಗೆ ಲಗ್ಗೆ ಇಡುತ್ತಿದ್ದಾರೆ. 6 ತಿಂಗಳ ಹಿಂದೆ ಓದುಗರ ಸಂಖ್ಯೆ ಏಕಾ ಏಕಿ ದ್ವಿಗುಣಗೊಂಡಿದ್ದರಿಂದ ವೆಬ್ ಸೈಟ್ ಒಮ್ಮೆಲೆ ಸ್ಟಕ್ ಆಗಿತ್ತು. ನಂತರದಲ್ಲಿ ಅಪ್ ಗ್ರೇಡ್ ಮಾಡುವ ಮೂಲಕ ಸಮಸ್ಯೆ ನಿವಾರಿಸಲಾಗಿತ್ತು.
ಬುಧವಾರವೂ ಹಾಗೆಯೇ ಆಗಿತ್ತು. ಓದುಗರು ವೆಬ್ ಸೈಟ್ ಗೆ ಭಾರಿ ಸಂಖ್ಯೆಯಲ್ಲಿ ಲಗ್ಗೆ ಇಟ್ಟಿದ್ದರಿಂದಾಗಿ ಓದುಗರಿಗೆ ವೆಬ್ ಸೈಟ್ ಓಪನ್ ಆಗುತ್ತಿರಲಿಲ್ಲ. ಅನೇಕರು ವೆಬ್ ಸೈಟ್ ಓಪನ್ ಮಾಡಲು ಹೋಗಿ ನಿರಾಶರಾಗಿದ್ದರು. ಅಲ್ಲಿಂದಲೇ ಫೋನ್ ಗಳ ಸುರಿಮಳೆಯೂ ಆರಂಭವಾಯಿತು. ಅನೇಕರು ಸ್ಕ್ರೀನ್ ಶಾಟ್ ತೆಗೆದು ಕಳುಹಿಸಿದರು. ಸುದ್ದಿಗಾಗಿ ಕಾಯುತ್ತಿದ್ದವರಿಗೆ ನಿರಾಸೆಯಾಗಿತ್ತು.
ನಂತರದಲ್ಲಿ ನಮ್ಮ ತಾಂತ್ರಿಕ ಸಿಬ್ಬಂದಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಆರಂಭಿಸಿದರು. ದೊಡ್ಡ ಸಂಖ್ಯೆಯಲ್ಲಿ ಓದುಗರು ಬಂದಿದ್ದರಿಂದ ಸಮಸ್ಯೆಯಾಗಿದೆ. ಆದಷ್ಟು ಬೇಗ ಸಮಸ್ಯೆ ಪರಿಹರಿಸುತ್ತೇವೆ ಎಂದು ತಾಂತ್ರಿಕ ಸಿಬ್ಬಂದಿ ಹೇಳುತ್ತಲೇ ಕೆಲಸ ಮುಂದುವರಿಸಿದ್ದರು. ಅವರು ಹೇಳುವ ಪ್ರಕಾರ ಒಮ್ಮೆಲೆ ಸುಮಾರು 72 ಸಾವಿರ ಓದುಗರು ವೆಬ್ ಸೈಟ್ ಗೆ ಪ್ರವೇಶಿಸಲು ಪ್ರಯತ್ನಿಸಿದ್ದರು. ಇದರಿಂದಾಗಿ ವೆಬ್ ಪೇಜ್ ಸ್ಟಕ್ ಆಗತೊಡಗಿತು. ಸುಮಾರು ಮೂರೂವರೆ ಗಂಟೆಗಳ ಕಾಲ ನಮ್ಮ ತಾಂತ್ರಿಕ ಸಿಬ್ಬಂದಿ ಕೆಲಸ ಮಾಡಿ ಸರಿಪಡಿಸುವಲ್ಲಿ ಯಶಸ್ವಿಯಾದರು.
ಬುಧವಾರ ಉಂಟಾಗಿರುವ ಸಮಸ್ಯೆಯ ಹಿನ್ನೆಲೆಯಲ್ಲಿ ತಕ್ಷಣವೇ ವೆಬ್ ಸೈಟ್ ಸಾಮರ್ಥ್ಯ ಹೆಚ್ಚಿಸಲಾಗಿದೆ. ಈಗಿರುವ ಓದುಗರ ಸಂಖ್ಯೆ ಎರಡುಪಟ್ಟು ಏರಿಕೆಯಾದರೂ ಇನ್ನು ಮುಂದೆ ಇಂತಹ ಸಮಸ್ಯೆಯಾಗುವುದಿಲ್ಲ.
ಬುಧವಾರ ಏಕಾ ಏಕಿ ಕಾಣಿಸಿಕೊಂಡ ಸಮಸ್ಯೆಯ ಹಿನ್ನೆಲೆಯಲ್ಲಿ ನಮಗೂ ಒಮ್ಮೆ ಶಾಕ್ ಆಗಿತ್ತು. ಸುಮಾರು ಮೂರೂವರೆ ಗಂಟೆಗಳ ಕೆಲಸ ಮಾಡಿ ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದರು ನಮ್ಮ ಸಿಬ್ಬಂದಿ. ಈ ಅಡಚಣೆಗಾಗಿ ನಾವು ಕ್ಷಮೆ ಕೇಳುತ್ತೇವೆ. ನಿಮಗೆ ಆದ ತೊಂದರೆಗೆ ವಿಷಾದ ವ್ಯಕ್ತಪಡಿಸುತ್ತೇವೆ. ಇನ್ನು ಮುಂದೆ ಹೀಗಾಗದಂತೆ ನೋಡಿಕೊಳ್ಳುತ್ತೇವೆ. ಜೊತೆಗೆ ಲಕ್ಷ ಲಕ್ಷ ಓದುಗರಿಗೆ ಕೃತಜ್ಞತೆ ಸಲ್ಲಿಸುತ್ತೇವೆ. ನಿಮ್ಮ ಸಹಕಾರ ಸದಾ ಇರಲಿ.
ವಂದನೆಗಳೊಂದಿಗೆ
ಎಂ.ಕೆ.ಹೆಗಡೆ
ಸಂಪಾದಕ
ರಮೇಶ್ ಜಾರಕಿಹೊಳಿಗೆ ಸತೀಶ್ ಜಾರಕಿಹೊಳಿ ಕಿವಿ ಮಾತು
4 ಗಂಟೆಯಲ್ಲಿ 27 ಸಾವಿರ ಓದುಗರು! : ಇದು ನಿಮ್ಮ ಪ್ರಗತಿವಾಹಿನಿ
ಮಾಧ್ಯಮ ಲೋಕದಲ್ಲೊಂದು ಹೊಸ ಮೈಲಿಗಲ್ಲು: ಪ್ರಗತಿ ಮೀಡಿಯಾ ಹೌಸ್ ಉದ್ಘಾಟನೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ