![](https://pragativahini.com/wp-content/uploads/2021/03/trafic-police-.jpg)
ಪ್ರಗತಿವಾಹಿನಿ ಸುದ್ದಿ; ಚಂಡೀಗಢ: ಮಹಿಳಾ ಟ್ರಾಫಿಕ್ ಪೊಲೀಸ್ ಓರ್ವರು ಮಗುವನ್ನು ಭುಜದ ಮೇಲೆ ಮಲಗಿಸಿಕೊಂಡು ರಸ್ತೆಯಲ್ಲಿ ನಿಂತು ಟ್ರಾಫಿಕ್ ನಿಯಂತ್ರಣ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
ಪ್ರಿಯಾಂಕಾ ಎಂಬ ಟ್ರಾಫಿಕ್ ಪೊಲೀಸ್ ಚಂಡೀಗಢ ಸೆಕ್ಟರ್ 15/23 ರಸ್ತೆಯಲ್ಲಿ ತಮ್ಮ ಪುಟ್ಟ ಕಂದನನ್ನು ಭುಜದ ಮೇಲೆ ಮಲಗಿಸಿಕೊಂಡು ಸಂಚಾರ ನಿಯಂತ್ರಣವನ್ನು ಮಾಡುತ್ತಿದ್ದರು. ಉರಿ ಬಿಸಿಲಲ್ಲಿ ಮಗುವನ್ನು ಎತ್ತಿಕೊಂಡು ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ಪೊಲೀಸ್ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ