ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಬಿಜೆಪಿಯ ವಿಜಯ ಸಂಕಲ್ಪ ಬೈಕ್ ರ್ಯಾಲಿ ಅಭಿಯಾನದ ಅಂಗವಾಗಿ ಬೆಳಗಾವಿಯಲ್ಲಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ತಾಲೂಕಿನ ಗಣೇಶಪುರದಿಂದ ಹಿಂಡಲಗಾ, ಸುಳಗಾ, ಮುತಗಾ, ಕಲ್ಲೆಹೋಳ, ಬೆಳಗುಂದಿ, ಸೋನೊಲಿ, ಎಳೇಬೈಲ ಮಾರ್ಗವಾಗಿ ರಾಕಸಕೊಪ್ಪವರೆಗೆ ವಿಜಯ ಸಂಕಲ್ಪ ಮೋಟರ್ ಬೈಕ್ ರ್ಯಾಲಿ ನಡೆಸಿದರು.
ಮಾಜಿ ಶಾಸಕ ಸಂಜಯ ಪಾಟೀಲ, ಯುವ ಮೋರ್ಚಾ ಗ್ರಾಮೀಣ ಅಧ್ಯಕ್ಷ ಚೇತನ ಪಾಟೀಲ, ಮಹೇಶ ಮೋಹಿತೆ, ರಾಜು ಚಿಕ್ಕನಗೌಡರ, ಉಜ್ವಲಾ ಬಡವನ್ನಾಚೆ, ಯುವರಾಜ ಜಾಧವ, ಪ್ರವೀಣ ಪಾಟೀಲ, ಯಲ್ಲಪ್ಪಾ ಪಾಟೀಲ, ಹೇಮಂತ ಪಾಟೀಲ, ರಾಮಚಂದ್ರ ಮನ್ನೋಳಕರ, ಸುಮೀತ ಅಗಸಗಿ, ಬಾಪುಸೋ ಪಾಟೀಲ, ಅಭಯ ಅವಲಕ್ಕಿ, ಯುವ ಮೋರ್ಚಾ ಸದಸ್ಯರು, ಕಾರ್ಯಕರ್ತರು ಪಾಲ್ಗೊಂಡಿದ್ದರು.




