Latest

ಸಂಚುಕೋರರೊಂದಿಗೆ ಸೇರಿ ಯುವತಿ ವಿಡೀಯೋ ಬಿಡುಗಡೆ -ರಮೇಶ ಜಾರಕಿಹೊಳಿ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಸಂತ್ರಸ್ತೆ ಎನ್ನುವ ಯುವತಿ ಬಿಡುಗಡೆ ಮಾಡಿರುವ ವಿಡೀಯೋ ಕುರಿತು ಮಾಜಿ ಸಚಿವ ರಮೇಶ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದು, ಯುವತಿ ಸಂಚುಕೋರರೊಂದಿಗೆ ಸೇರಿಕೊಂಡು ಈ ವಿಡೀಯೋ ಬಿಡುಗಡೆ ಮಾಡಿದ್ದಾಳೆ ಎಂದಿದ್ದಾರೆ.

ಇದೊಂದು ದೊಡ್ಡ ಷಢ್ಯಂತ್ರ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ನಾನು ದೂರು ನೀಡಿ ಅರ್ಧ ಗಂಟೆ ನಂತರ ಅವರು ಈ ವಿಡೀಯೋ ಬಿಡುಗಡೆ ಮಾಡಿರುವುದೇ ಇದಕ್ಕೆ ಸಾಕ್ಷಿ ಎಂದೂ ಅವರು ಹೇಳಿದ್ದಾರೆ.

ಅವರು ಏನೇ ಮಾಡಲಿ ನಾನು ಮಾತ್ರ ಸುಮ್ಮನೇ ಬಿಡುವುದಿಲ್ಲ. ಷಢ್ಯಂತ್ರ ಮಾಡಿದವರನ್ನು ಜೈಲಿಗೆ ಹಾಕಿಸಿಯೇ ಹಾಕಿಸುತ್ತೇನೆ ಎಂದು ರಮೇಶ ಜಾರಕಿಹೊಳಿ ಹೇಳಿದ್ದಾರೆ.

ರಮೇಶ್ ಜಾರಕಿಹೊಳಿಯೇ ಸಿಡಿ ಬಿಡುಗಡೆ ಮಾಡಿದ್ದಾರೆ – ಸಂತ್ರಸ್ತೆ ಎನ್ನಲಾದ ಯುವತಿಯ ಹೇಳಿಕೆ

ಈ ಸಿಡಿ ಪ್ರಕರಣ ಬೆಂಗಳೂರಿಗೆ ಸೀಮಿತವಾಗಿದೆ, ಹಾಗಾಗಿ ಇಲ್ಲೇ ದೂರು ದಾಖಲಿಸಿದ್ದೇನೆ – ರಮೇಶ ಜಾರಕಿಹೊಳಿ

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button