ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬೆಳಗಾವಿ, ಶಿಶು ಅಭಿವೃದ್ಧಿ ಯೋಜನೆ ಹುಕ್ಕೇರಿ, ಯಮಕನಮರಡಿ ಹಾಗೂ ಹತ್ತರಗಿಯ ಸಂಜೀವಿನಿ ಗ್ರಾಮ ಪಂಚಾಯತ ಮಟ್ಟದ ಒಕ್ಕೂಟಗಳು, ಜಿಲ್ಲಾ ಸ್ತ್ರೀ ಶಕ್ತಿ ಒಕ್ಕೂಟ, ಬೆಳಗಾವಿ ಮತ್ತು ಹುಕ್ಕೇರಿ ತಾಲ್ಲೂಕ ಸ್ತ್ರೀ ಶಕ್ತಿ ಒಕ್ಕೂಟ ಇವರುಗಳ ಸಂಯುಕ್ತ ಆಶ್ರಯದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ದಿನಾಂಕ: 15-03-2021 ರಂದು ಯಮಕನಮರಡಿ ಗ್ರಾಮದ ಶ್ರೀ ಗುರುಸಿದ್ಧ ಮಹಾಸ್ವಾಮಿಗಳ ಸಭಾ ಭವನದಲ್ಲಿ ಮಾ.15ರಂದು ಆಚರಿಸಲಾಯಿತು.
ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯರಾದ ಶ್ಯಾಮಲಾ.ಎಸ್.ಕುಂದರ ಅವರು, ಸ್ತ್ರೀ ಶಕ್ತಿ ಸಂಘಗಳ ಮಾರಾಟ ಮೇಳ/ವಸ್ತು ಪ್ರರ್ದಶನನ್ನು ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಮಹಿಳೆ ಒಂದು ವಿಶೇಷವಾದ ಶಕ್ತಿ, ಸಹನಾಮಯಿ ಹೌದು, ತನ್ನ ಮೇಲೆ ದಬ್ಬಾಳಿಕೆಯಾದಾಗ ದುರ್ಗೆಯು ಆಗಬಲ್ಲಳು, ಇಂದು ಮಹಿಳೆಯ ಸಾಧನೆ ಭೂಮಿ ಆಕಾಶದೆತ್ತರಕ್ಕೆ ವ್ಯಾಪಿಸಿದೆ. ಮಹಿಳೆಯು ಒಂದು ಕುಟುಂಬವನ್ನು ಸುಗುಮವಾಗಿ ನಿರ್ವಹಿಸಿಕೊಂಡು ಹೋಗಲು ದೇಶವನ್ನು ಆಳಲು ಸಮರ್ಥಳು ಎಂದು ವಿವರಿಸುತ್ತ ಹಲವು ಮಹಿಳೆಯರ ರಾಜಕೀಯ ಸಾಧನೆಗಳ ನಿದರ್ಶನಗಳನ್ನು ಉಲ್ಲೇಖಿಸುವ ಮೂಲಕ ತಿಳಿಸಿದರು.
ತೊಟ್ಟಿಲನ್ನು ತೂಗುವ ಕೈ ದೇಶವನ್ನಾಳಬಲ್ಲದು ಎಂಬ ಮಾತನ್ನು ಎತ್ತಿ ತೋರಿಸಿದರು. ಗಂಡು ಹೆಣ್ಣು ರಥದ ಎರಡು ಚಕ್ರಗಳಿದ್ದಂತೆ ಎರಡು ಸರಿಸಮವಾಗಿದ್ದರೆ ಕುಟುಂಬದ ಬಂಡಿ ಸುಗಮವಾಗಿ ಚಲಿಸುತ್ತದೆ ಎಂದು ಅಭಿಪ್ರಾಯಪಟ್ಟ ಅವರು, ಲಿಂಗ ಸಮಾನತೆ ಅಗತ್ಯತೆಯನ್ನು ಪ್ರತಿಪಾದಿಸಿದರು.
ಪ್ರಿಯಾಂಕಾ ಜಾರಕಿಹೊಳಿ, ಪೂಜ್ಯ ರಾಚೋಟಿ ಮಹಾಸ್ವಾಮಿಗಳು, ಶ್ರೀ ಕ್ಷೇತ್ರ ಹುಣಸಿಕೊಳ್ಳ ಮಠ, ಪೂಜ್ಯ ಗುರು ಸಿದ್ದ ಸ್ವಾಮಿಗಳು, ಶ್ರೀ ಕ್ಷೇತ್ರ ಕಾರಿಮಠ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಬಸವರಾಜವರವಟ್ಟಿ, ಯಮಕನಮರಡಿ ಗ್ರಾಮ ಪಂಚಾಯತ ಅಧ್ಯಕ್ಷರು ಮತ್ತಿತರರು ಉಪಸ್ಥಿತರಿದ್ದರು.
ರಾಚೋಟಿ ಮಹಾಸ್ವಾಮಿಗಳು, ಶ್ರೀ ಕ್ಷೇತ್ರ ಹುಣಸಿಕೊಳ್ಳ ಮಠ ಇವರು ಆಶೀರ್ಚವಚನ ನೀಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬೆಳಗಾವಿ, ಶಿಶು ಅಭಿವೃದ್ಧಿ ಯೋಜನೆ ಕಚೇರಿ ಹುಕ್ಕೇರಿ ಅಧಿಕಾರಿ/ ಸಿಬ್ಬಂದಿಗಳು ಸ್ತ್ರೀ ಶಕ್ತಿ ಗುಂಪಿನ ಸದಸ್ಯರು ಹಾಗೂ ಸುಮಾರು 200 ಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿದ್ದರು.
ಅನುರಾಧಾ ಕಾಪ್ಸಿ ಸ್ವಾಗತಿಸಿದರು, ಕಾರ್ಯಕ್ರಮದ ನಿರೂಪಣೆಯನ್ನು ಸುಜಾತಾ ಪಾಸಪ್ಪಗೋಳ ನೇರವೆರಿಸಿದರು, ಹಾಗೂ ಶ್ರೀಮತಿ ಎಮ್. ಲೋಕಾಂಭಾ ಸ.ಶಿ.ಅ.ಯೋಜನಾಧಿಕಾರಿಗಳು ವಂದಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ