ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ತಾಲೂಕಿನ ಕಂಗ್ರಾಳಿ ಕೆ ಎಚ್ ಕಾರ್ಯಕ್ಷೇತ್ರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್(ರಿ) ಬೆಳಗಾವಿ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ವಿಶ್ವ ಮಹಿಳಾ ದಿನಾಚರಣೆ ನಿಮಿತ್ಯ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಸೋಮವಾರ ಕಂಗ್ರಾಳಿ ಕೆಎಚ್ ಗ್ರಾಮದ ಮಹಾತ್ಮಾ ಪುಲೆ ಮಂಗಲ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿಸಿ ಟ್ರಸ್ಟ್(ರಿ) ಬೆಳಗಾವಿ ಜಿಲ್ಲಾ ನಿರ್ದೇಶಕರಾದ ಶ್ರೀ ಪ್ರದೀಪ ಜಿ ಅವರು ಉದ್ಘಾಟಿಸಿದರು.ಕಾರ್ಯಕ್ರಮವನ್ನು ಉದ್ಘಾಟಿಸಿ ಪ್ರತಿಯೋಬ್ಬ ಮಹಿಳೆ ಧರ್ಮಸ್ಥಳ ಯೋಜನೆಯ ಸದುಪಯೋಗ ಪಡೆದುಕೊಂಡು ಸ್ವಾವಲಂಬ ಜೀವನ ಕಟ್ಟಿಕೊಳ್ಳಿ ಯೋಜನೆಯಲ್ಲಿರುವ ಎಲ್ಲ ಸೌಲಭ್ಯಗಳ ಉಪಯೋಗ ಮಾಡಿಕೊಳ್ಳಿ ಎಂದು ಹೇಳಿದರು.
ಯಳ್ಳೂರು ಯೂನಿಯನ್ ಬ್ಯಾಕ್ ಮ್ಯಾನೇಜರ್ ಅನು ಬಿ ಮಾತನಾಡಿ, ಹೆಣ್ಣು ಮಕ್ಕಳನ್ನು ಆರ್ಥಿಕವಾಗಿ ಸದೃಡ ಮಾಡುವ ನಿಟ್ಟಿನಲ್ಲಿ ಧರ್ಮಸ್ಥಳ ಸಂಘ ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿರುವುದಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು. ಇದೇ ವೇಳೆ ಮಹಿಳೆಯರಿಗೆ ಇರುವ ಸರ್ಕಾರದ ವಿವಿಧ ಬ್ಯಾಂಕಿಂಗ್ ಸೇವೆಯನ್ನು ತಿಳಿಸಿದರು.ಇವುಗಳ ಸದುಪಯೋಗ ಪಡೆದುಕೊಳ್ಳುವಂತೆ ಕರೆ ನೀಡಿದರು.
ನಂತರ ಜ್ಞಾನವಿಕಾಸ ಮಹಿಳಾ ಸದಸ್ಯರು ನಟ ಸಾರ್ವಭೌಮ ವರನಟ ಡಾ.ರಾಜಕುಮಾರ ಅವರ ಹುಟ್ಟಿದ್ರೆ ಕನ್ನಡ ನಾಡಲ್ಲಿ ಹುಟ್ಟಬೇಕು ಸೇರಿ ವಿವಿಧ ಹಾಡುಗಳಿಗೆ ಮನಮೋಹಕವಾಗಿ ನೃತ್ಯ ಮಾಡುವ ಮೂಲಕ ಎಲ್ಲರನ್ನು ರಂಜಿಸಿದರು.
ಇದೇ ವೇಳೆ ಧರ್ಮಸ್ಥಳ ಯೋಜನೆಯಿಂದ ಪ್ರಗತಿನಿಧಿ ಪಡೆದುಕೊಂಡು ಸ್ವ ಉದ್ಯೋಗ ಮಾಡಿ ಸ್ವಾವಲಂಬಿ ಜೀವನ ಕಟ್ಟಿಕೊಂಡಿರುವ 6 ಮಹಿಳಾ ಸಾಧಕರಿಗೆ ವೇದಿಕೆ ಮೇಲೆ ಆಸೀನರಾಗಿದ್ದ ಗಣ್ಯರು ಸತ್ಕರಿಸಿ ಗೌರವಿಸಿದರು.
ಸತ್ಕಾರ ಸ್ವೀಕರಿಸಿ ಮಾತನಾಡಿದ ಮಹಿಳಾ ಸಾಧಕಿ ಅನುರಾಧಾ ಅವರು ಓರ್ವರು ಖಾಲಿ ಮನೆಯಲ್ಲಿ ಕುಳಿತುಕೊಂಡರೆ ಏನು ಸಾಧಿಸಲು ಆಗೋದಿಲ್ಲ. ನಾನು ಏನಾದ್ರು ಮಾಡಬಹುದು ಎಂದು ಧೈರ್ಯದಿಂದ ಮುಂದೆ ಬಂದ್ರೆ ಏನಾದರು ಸಾಧಿಸಬಹುದು.ಹೀಗೆ ನನಗೆ ಧರ್ಮಸ್ಥಳ ಸಂಘದ ಸಹಾಯದಿಂದ ಒಂದು ಕ್ಯಾಂಟೀನ್ ಆರಂಭಿಸಿ ನಾಲ್ವರು ಮಹಿಳೆಯರಿಗೆ ಕ್ಯಾಂಟೀನ್ ನಲ್ಲಿ ಕೆಲಸ ಕೂಡ ಕೊಟ್ಟಿದೇನೆ ಎಂದು ತಮ್ಮ ಅನುಭವ ಹಂಚಿಕೊಂಡರು.
ನಂತರ ಜ್ಞಾನವಿಕಾಸ ಮಹಿಳಾ ಸದಸ್ಯರು ನಟ ಸಾರ್ವಭೌಮ ವರನಟ ಡಾ. ರಾಜಕುಮಾರ ಅವರ ಹುಟ್ಟಿದ್ರೆ ಕನ್ನಡ ನಾಡಲ್ಲಿ ಹುಟ್ಟಬೇಕು ಸೇರಿ ವಿವಿಧ ಹಾಡುಗಳಿಗೆ ಮನಮೋಹಕವಾಗಿ ನೃತ್ಯ ಮಾಡುವ ಮೂಲಕ ಎಲ್ಲರನ್ನು ರಂಜಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜ್ಞಾನವಿಕಾಸ ಕೇಂದ್ರದ ಅಧ್ಯಕ್ಷರಾದ ಮಂಜುಳಾ ಜಕ್ಕನ್ನವರ ವಹಿಸಿದ್ದರು.ಜಿಲ್ಲಾ ನಿರ್ದೇಶಕರಾದ ಶ್ರೀ ಪ್ರದೀಪ ಜಿ ಅವರು ಕಾರ್ಯಕ್ರಮ ಉದ್ಘಾಟಿಸಿದರು.ಮುಖ್ಯ ಅತಿಥಿಗಳಾಗಿ ಬೆಳಗಾವಿ ತಾಲೂಕಿನ ಯೋಜನಾಧಿಕಾರಿ ಶ್ರೀ ಪ್ರಭಾಕರ-ಎನ್ ,ಯೂನಿಯನ್ ಬ್ಯಾಂಕ್ ಮ್ಯಾನೇಜರ್ ಅನು ಬಿ ,ನಂದನ ಮಕ್ಕಳ ಧಾಮದ ಅಧ್ಯಕ್ಷರು ಕಸ್ತೂರಿ ಭಾಗಿ ಆಗಮಿಸಿದ್ದರು. ಜೊತೆಗೆ ಎಲ್ಲ ಒಕ್ಕೂಟದ ಅಧ್ಯಕ್ಷರು ಬೆಳಗಾವಿ ಬಿ ವಲಯದ ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು. ಮೇಲ್ವಿಚಾರಕರಾದ ವಿಶ್ವನಾಥ ಸ್ವಾಗತಿಸಿದ್ದರು.ಕೃಷಿ ಅಧಿಕಾರಿ ಸತೀಶ ವಂದಿಸಿದರು, ಜ್ಞಾನವಿಕಾಸ ಸಮನ್ವಯಾಧಿಕಾರಿ ಸುರೇಖಾ ಸುನೀಲ ಕೋಳಿ ನಿರೂಪಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ