ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಲಿಂಗಾಯತ ಮಹಿಳಾ ಸಮಾಜದ ೨೦೨೧—೨೦೨೨ ರ ನೂತನ ಅಧ್ಯಕ್ಷರು ಪದಾಧಿಕಾರಿಗಳ ಮತ್ತು ಕಾರ್ಯಕಾರಿ ಸಮಿತಿ ಸದಸ್ಯರ ಪದಗ್ರಹಣ ಸಮಾರಂಭ ಗುರುವಾರ ಎಸ್.ಜಿ.ಬಾಳೇಕುಂದ್ರಿ ಇನ್ಸಟಿಟ್ಯೂಟ್ ಅಫ್ ಇಂಜಿನಿಯರ್ಸ ಸಭಾಗೃಹದಲ್ಲಿ ನೆರವೇರಿತು.
ನೂತನ ಅಧ್ಯಕ್ಷರಾಗಿ ಶಾಂತಾ ಮಸೂತಿ ಕಾರ್ಯದರ್ಶಿಯಾಗಿ ಸಂಗೀತಾ ಅಕ್ಕಿ, ಸಹ ಕಾರ್ಯದರ್ಶಿಯಾಗಿ ಉಮಾ ರುದ್ರಗೌಡರ, ಖಜಾಂಚಿಯಾಗಿ ಗೀತಾ ಮಲ್ಲಾಪುರ, ಒಟ್ಟು ೨೫ ಸದಸ್ಯೆಯರು ಅಧಿಕಾರ ವಹಿಸಿಕೊಂಡರು.
ಇದೇ ಸಮಾರಂಭದಲ್ಲಿ ಲಿಂಗಾಯತ ಮಹಿಳಾ ಸಮಾಜದ ಬೆಳ್ಳಿಹಬ್ಬದ ಸಫಲತೆಗೆ ಶ್ರಮಿಸಿದ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಸದಸ್ಯರಿಗೆ ಬಹುಮಾನ ವಿತರಿಸಲಾಯಿತು. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು.
ಸಮಾರಂಭದಲ್ಲಿ ಗೌರವಾಧ್ಯಕ್ಷರುಗಳಾದ ಶೈಲಜಾ ಭಿಂಗೆ, ರತ್ನಾ ಬೆಲ್ಲದ, ಶೈಲಾ ಪಾಟೀಲ, ಆಶಾ ಪಾಟೀಲ, ಜೋತಿ ಬಾದಾಮಿ, ಜಯಶೀಲಾ ಬ್ಯಾಕೋಡ್ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ