Latest

ಸುಲಭವಾಗಿ ಸಾಯುವುದು ಹೇಗೆಂದು ಸರ್ಚ್ ಮಾಡಿ ಆತ್ಮಹತ್ಯೆಗೆ ಶರಣಾದ ಐಟಿ ಉದ್ಯೋಗಿ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಖಾಸಗಿ ಕಂಪನಿಯಲ್ಲಿ ಟೀಂ ಲೀಡರ್ ಆಗಿ ಕೆಲಸ ಮಾಡುತ್ತಿದ್ದ ಯುವಕನೊಬ್ಬ ಭಯಂಕರವಾಗಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಖಾಸಗಿ ಕಂಪನಿ ಉದ್ಯೋಗಿಯಾಗಿದ್ದ ಬೀದರ್ ಮೂಲದ ಜೀವನ್ ಅಂಬಾಟೆ ಆತ್ಮಹತ್ಯೆಗೆ ಶರಣಾದ ಯುವಕ. ಈತ ಸಾವಿಗೂ ಮುನ್ನ ಹೌಟು ಡೈ ಈಸಿಲಿ ಎಂದು ಸುಲಭವಾಗಿ ಸಾಯುವ ವಿಧಾನದ ಬಗ್ಗೆ ಯೂಟ್ಯೂಬ್ ನಲ್ಲಿ ಸರ್ಚ್ ಮಾಡಿದ್ದ. ಗ್ಯಾಸ್ ಸಿಲಿಂಡರ್ ನಲ್ಲಿ ಬರುವ ಮೊನಾಕ್ಸೈಡ್ ಮೂಲಕ ಸುಲಭವಾಗಿ ಸಾಯಬಹುದು ಎಂದು ಗೊತ್ತಾಗಿದೆ.

ಹೀಗಾಗಿ ಮುಖಕ್ಕೆ ಮಾಸ್ಕ್ ಧರಿಸಿ ಸಿಲಿಂಡರ್ ಪೈಪ್ ನ ಮೂಗಿಗೆ ಹಾಕಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ದೇಹದ ಒಳಗೆ ಮೊನಾಕ್ಸೈಡ್ ಹೋಗುತ್ತಿದ್ದಂತೆಯೇ ಕುಳಿತಲ್ಲೇ ಜೀವನ್ ಸಾವನ್ನಪ್ಪಿದ್ದಾನೆ.

ಆತ್ಮಹತ್ಯೆಗೂ ಮೊದಲು ತನ್ನ ಮನೆ ಬಾಗಿಲಿಗೆ ಪೋಸ್ಟ್ ಅಂಟಿಸಿದ್ದು, ಅದರಲ್ಲಿ ತನ್ನ ಸಾವಿನ ಬಳಿಕ ಮನೆಗೆ ಬರುವ ಜನರಿಗೆ ಯಾವುದೇ ಅಪಾಯವಾಗಬಾರದು ಎಂದು ಏನೆಲ್ಲ ಮಾಡಬೇಕು ಎಂಬುದನ್ನು ಬರೆದಿಟ್ಟಿದ್ದ. ಮನೆ ಬಾಗಿಲು ಓಪನ್ ಮಾಡಿದ ಬಳಿಕ ಕಿಟಕಿ ಓಪನ್ ಮಾಡಿ. ಲೈಟ್ ಆನ್ ಮಾಡಬೇಡಿ ಎಂದು ಬರೆದಿದ್ದ. ಜೀವನ್ ಆತ್ಮಹತ್ಯೆ ಮಾಡಿಕೊಂಡ ಮೂರು ದಿನಗಳ ಬಳಿಕ ಘಟನೆ ಬೆಳಕಿಗೆ ಬಂದಿದೆ. ಡೆತ್ ನೋಟ್ ಕೂಡ ಬರೆದಿರುವ ಜೀವನ್ ಅದರಲ್ಲಿ ಸುಂದರವಾದ ಜೀವನ ನಡೆಸಬೇಕು ಎಂಬ ಕನಸಿನೊಂದಿಗೆ ಬೀದರ್ ನಿಂದ ಬೆಂಗಳೂರಿಗೆ ಬಂದೆ. ಇಲ್ಲಿ ನಾನು ಅಂದುಕೊಂಡಂತೆ ನಡೀತಿಲ್ಲ. ಮನೆಯವರೂ ನನಗೆ ಫೋನ್ ಮಾಡಲ್ಲ. ಜೀವನ ಬೇಜಾರಾಗಿದೆ ಎಂದು ಬರೆದಿದ್ದಾನೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button