Kannada NewsKarnataka NewsLatestPolitics

*ನನ್ನನ್ನು ಸಿಎಂ ಮಾಡುವುದಾದರೆ ಮಾತ್ರ ಬಿಜೆಪಿಗೆ ಹೋಗುತ್ತೇನೆ ಎಂದ ಯತ್ನಾಳ್*

ಪ್ರಗತಿವಾಹಿನಿ ಸುದ್ದಿ: ರಾಜ್ಯ ಕಾಂಗ್ರೆಸ್ ನಲ್ಲಿ ನಾಯಕತ್ವ ಬದಲಾವಣೆ ವಿಚಾರ ಚರ್ಚೆ ಜೋರಾಗಿರುವಾಗಲೇ ಅತ್ತ ವಿಪಕ್ಷ ಬಿಜೆಪಿಯಲ್ಲಿಯೂ ಅಧಿಕಾರಕ್ಕಾಗಿ ಕಿತ್ತಾಟ ಆರಂಭವಾಗಿದೆ. ಮತ್ತೊಂದೆಡೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ನನ್ನನ್ನು ಸಿಎಂ ಮಾಡುವುದಾದರೆ ಮಾತ್ರ ಬಿಜೆಪಿಗೆ ಬರುತ್ತೇನೆ ಎಂದಿದ್ದಾರೆ.

ಈ ಬಗ್ಗೆ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ್, ಆರ್.ಆಶೋಕ್ ಅವರು ನನ್ನನ್ನು ಕರೆದು ಮಾತನಾಡಿದಸಿದರು. ಬಿಜೆಪಿಗೆ ವಾಪಸ್ ಆಗುವಂತೆ ಹೇಳಿದರು. ಬಿಜೆಪಿ ಸ್ಥಿತಿ ಕೆಟ್ಟದಾಗಿದೆ. ಎಲ್ಲಾ ಹೊಂದಾಣಿಕೆ ರಾಜಕೀಯದಲ್ಲಿ ಬ್ಯುಸಿಯಾಗಿದ್ದಾರೆ. ನೀವು ವಾಪಸ್ ಬಿಜೆಪಿಗೆ ಬರಲೇಬೇಕು ಎಂದು ಹೇಳಿದರು ಎಂದರು.

ನಾನು ಬಿಜೆಪಿಗೆ ಮತ್ತೆ ಬರಬೇಕು ಎನ್ನುವುದಾದರೆ ನನ್ನನ್ನು ಮುಖ್ಯಮಂತ್ರಿ ಮಾಡಬೇಕು ಎಂದಿದ್ದೇನೆ. ನನ್ನನ್ನು ಮುಖ್ಯಮಂತ್ರಿ ಮಾಡುವುದಾದರೆ ಮಾತ್ರ ನಾನು ಬಿಜೆಪಿಗೆ ಮರಳಿ ಬರುತ್ತೇನೆ. ಇಲ್ಲವಾದಲ್ಲಿ ಇಲ್ಲ, ನಾವೇ ಜೆಸಿಬಿ ಪಕ್ಷ ಕಟ್ಟುತ್ತೇವೆ ಎಂದು ಹೇಳಿದ್ದಾಗಿ ತಿಳಿಸಿದರು.

ಇನ್ನು ಅಧಿವೇಶನದ ಬಳಿಕ ನಿಯೋಗದೊಂದಿಗೆ ತೆರಳಿ ಅಮಿತ್ ಶಾ ಭೇಟಿಯಾಗುವ ಬಗ್ಗೆಯೂ ಚರ್ಚೆ ನಡೆಸಲಾಗಿದೆ ಎಂದು ಹೇಳಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button