ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ತಾಲೂಕಿನ ಹೊಸವಂಟಮುರಿ ಗ್ರಾಪಂ ವ್ಯಾಪ್ತಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ನವ್ಯದಿಶಾ ಸುಗ್ರಾಮ ಯೋಜನೆ ಬೆಳಗಾವಿ, ವಿಜ್ಞಾನ ಕೇಂದ್ರ ಬೆಳಗಾವಿ ಹಾಗೂ ರಾಜಾ ಲಖಮಗೌಡ ಮಹಾವಿದ್ಯಾಲಯ ರಸಾಯನ ಶಾಸ್ತ್ರ ಅಧ್ಯಯನ ವಿಭಾಗಗಳ ಸಂಯುಕ್ತ ಆಶ್ರಯದಲ್ಲಿ ವಿಜ್ಞಾನ ದಿನದ ನಿಮಿತ್ತ ’ಮನರಂಜನೆಯೊಂದಿಗೆ ರಸಾಯನ ಶಾಸ್ತ್ರ’ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ರಾಸಾಯನಿಕ ಬಣ್ಣಗಳ ಪರಿಕಲ್ಪನೆ, ಕೃತಕ ಜ್ವಾಲಾಮುಖಿ ಪ್ರಾತ್ಯಕ್ಷಿಕೆ, ಗ್ರಾಮೀಣ ಪ್ರದೇಶದಲ್ಲಿ ಜನರ ಮೂಢನಂಬಿಕೆಗಳ ಬಗ್ಗೆ ವಿಜ್ಞಾನದ ಪ್ರಯೋಗಗಳ ಮೂಲಕ ತಿಳಿಸಲಾಯಿತು.