Kannada NewsKarnataka NewsLatest

ವಿದ್ಯುತ್ ಪ್ರಸರಣ ನಿಗಮದಿಂದ ಸಾರ್ವಜನಿಕರಿಗೆ ಗಂಭೀರ ಎಚ್ಚರಿಕೆ

ಚಿಕ್ಕೋಡಿ – ಶ್ರೀಶೈಲಂ ಬಸ್ ವ್ಯವಸ್ಥೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಚಿಕ್ಕೋಡಿ ವಿಭಾಗದ ಚಿಕ್ಕೋಡಿ ಘಟಕದಿಂದ ಚಿಕ್ಕೋಡಿಯಿಂದ ಶ್ರೀಶೈಲಂವರೆಗೆ ಅಂತರ್ ರಾಜ್ಯ ರಾತ್ರಿ ಸಾರಿಗೆಯನ್ನು ಆರಂಭಿಸಲಾಗಿದೆ.
ಸಾರಿಗೆಯು ಚಿಕ್ಕೋಡಿಯಿಂದ ಮಧ್ಯಾಹ್ನ ೩:೦೦ ಗಂಟೆಗೆ ತೆರಳಿ, ಚಿಕ್ಕೋಡಿ-ಕಾಗವಾಡ-ಅಥಣ -ವಿಜಯಪುರ-ಸಿಂದಗಿ – ಶಾಪುರ -ಯಾದಗಿರಿ-ಮೆಹಬೂಬ ನಗರ-ಅಚ್ಚಂಪೇಟ್ ಮಾರ್ಗವಾಗಿ ಚಲಿಸಿ, ಬೆಳಿಗ್ಗೆ ೬:೩೦ಕ್ಕೆ ಶ್ರೀಶೈಲಂ ತಲುಪುತ್ತದೆ.
ಶ್ರೀಶೈಲಂದಿಂದ ಮಧ್ಯಾಹ್ನ ೨:೩೦ ಗಂಟೆಗೆ ತೆರಳಿ ಅದೇ ಮಾರ್ಗದಲ್ಲಿಯೇ ಬಂದು ಬೆಳಿಗ್ಗೆ ೬:೧೫ ಗಂಟೆಗೆ ಚಿಕ್ಕೋಡಿ ತಲುಪುತ್ತದೆ.
ಸಾರ್ವಜನಿಕ ಪ್ರಯಾಣ ಕರು ಈ ಸಾರಿಗೆ ವ್ಯವಸ್ಥೆಯ ಪ್ರಯೋಜನ ಪಡೆದುಕೊಳ್ಳಬೇಕೆಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಚಿಕ್ಕೋಡಿ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕ್ಷಯರೋಗ ದಿನಾಚರಣೆ

  ಕ್ಷಯರೋಗ ನಿರ್ಮೂಲನೆಗಾಗಿ ಕಾಲ ಘಟಿಸುತ್ತಿದೆ – ಎಲ್ಲರೂ ಕೈಜೋಡಿಸೋಣ ಎಂದು ಕರೆ ನೀಡಿ, ಪ್ರತಿ ವರ್ಷ ಸುಮಾರು ೫ ಸಾವಿರದಷ್ಟು ಕ್ಷಯರೋಗಿಗಳನ್ನು ಬೆಳಗಾವಿ ಜಿಲ್ಲೆಯಲ್ಲಿ ಪತ್ತೆ ಹಚ್ಚಿ ಸುಮಾರು ಶೇ ೯೦ ರಷ್ಟು ಕ್ಷಯರೋಗಿಗಳಿಗೆ ಯಶಸ್ವಿಯಾಗಿ ಚಿಕಿತ್ಸೆ ನೀಡಿ ರೋಗ ಮುಕ್ತರನ್ನಾಗಿ ಮಾಡಲಾಗುತ್ತಿದೆ. ಒಟ್ಟಾರೆ ೨೦೦೩ ರಿಂದ ಇಲ್ಲಿಯ ವರೆಗೆ ೭೮,೯೭೯ ಕ್ಷಯರೋಗಿಗಳನ್ನು ಪತ್ತೆ ಹಚ್ಚಿ ಶೇ ೮೫ ರಷ್ಟು ಕ್ಷಯರೋಗಿಗಳಿಗೆ ಪೂರ್ಣ ಚಿಕಿತ್ಸೆ ನೀಡಿ ಗುಣಪಡಿಸಲಾಗಿದೆ ಎಂದು ಆರೋಗ್ಯ ಮತ್ತು ಕು. ಕ. ಸೇವೆಗಳ ವಿಭಾಗೀಯ ಉಪ ನಿರ್ದೇಶಕರಾದ ಡಾ|| ಶೈಲಜಾ ವಾಯ್ ತಮ್ಮಣ್ಣವರ ಅವರು ಹೇಳಿದರು.
ಜಿಲ್ಲಾ ಮಟ್ಟದ ವಿಶ್ವ ಕ್ಷಯರೋಗ ದಿನಾಚರಣೆಯನ್ನು ಬುಧವಾರ (ಮಾ.೨೪) ರಂದು ಕೆಎಲ್‌ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆ ಬೆಳಗಾವಿಯ ಚರಕಾ ಸಭಾಂಗಣದಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
೨೦೨೦-೨೧ ನೇ ಸಾಲಿನ ಅತ್ಯುತ್ಯಮ ಹಿರಿಯ ಚಿಕಿತ್ಸಾ ಮೇಲ್ವಿಚಾರಕ ರಾಜ್ಯಮಟ್ಟದ ಪ್ರಶಸ್ತಿಯು ಬೆಳಗಾವಿ ಜಿಲ್ಲೆಯ ಅಥಣ ಕ್ಷಯರೋಗ ಘಟಕದ ರಾಜಶೇಖರ ಕುರಹಟ್ಟಿ ಇವರಿಗೆ ಲಭಿಸಿದ್ದು ಎಲ್ಲರೂ ಉತ್ತಮವಾಗಿ ಕಾರ್ಯನಿರ್ವಹಿಸಿ ಬೆಳಗಾವಿ ಜಿಲ್ಲೆಯನ್ನು ಕ್ಷಯಮುಕ್ತ ಜಿಲ್ಲೆಯನ್ನಾಗಿಸಲು ಶ್ರಮಿಸಬೇಕೆಂದು ಕರೆ ನೀಡಿದರು.
ಕ್ಷಯರೋಗ ನಿರ್ಮೂಲನೆಯಲ್ಲಿ ಕೇವಲ ಆರೋಗ್ಯ ಇಲಾಖೆ ಮಾತ್ರವಲ್ಲ ಎಲ್ಲ ಖಾಸಗಿ ಆರೋಗ್ಯ ಸಂಸ್ಥೆಗಳು ಹಾಗೂ ಖಾಸಗಿ ವೈದ್ಯರ ಪಾತ್ರ ಅತೀ ಹಿರಿದಾಗಿದ್ದು ತಮ್ಮಲ್ಲಿ ಆರೋಗ್ಯ ತಪಾಸಣೆಗೆ ಬರುವ ಜನರಲ್ಲಿ ಕ್ಷಯರೋಗ ಸಂಶಯುತರನ್ನು ಗುರುತಿಸಿ ಆದಷ್ಟು ಬೇಗ ಕ್ಷಯರೋಗ ಪತ್ತೆ ಹಚ್ಚಿ ಸಮಾಜದಲ್ಲಿ ರೋಗ ಪಸರಿಸುವುದನ್ನು ತಡೆಗಟ್ಟಲು ಸಹಕರಿಸಲು ಕರೆ ನೀಡಿದರು. ಜೊತೆಗೆ ಕ್ಷಯರೋಗ ನಿಯಂತ್ರಣಕ್ಕಾಗಿ ಪ್ರತಿದಿನವನ್ನು ಕ್ಷಯರೋಗ ದಿನವನ್ನಾಗಿ ಪರಿಗಣ ಸಿದಾಗ ಮಾತ್ರ ಕ್ಷಯರೋಗ ನಿರ್ಮೂಲನೆ ಸಾಧ್ಯವೆಂದು ಕೆಎಲ್‌ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ನಿರ್ದೇಶಕರಾದ ಎಸ್. ಸಿ. ಧಾರವಾಡ ಅವರು ತಿಳಿಸಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕ್ಷಯರೋಗ ನಿಯಂತ್ರಣಕ್ಕಾಗಿ ಸಾಕಷ್ಟು ಸಹಕಾರ ಹಾಗೂ ಸೌಲಭ್ಯಗಳನ್ನು ಕಲ್ಪಿಸುತ್ತಿದ್ದು ಕ್ಷಯರೋಗಿ ಎಂದು ದೃಡಪಟ್ಟ ರೋಗಿಗಳಿಗೆ ಮಾಸಿಕ ರೂ. ೫೦೦/- ರಂತೆ ನಿಕ್ಷಯ ಪೋಷನಾ ಯೋಜನೆ, ಕ್ಷಯರೋಗಿಯ ಮಾಹಿತಿ ನೀಡುವ ಎಲ್ಲ ಖಾಸಗಿ ವೈದ್ಯರಿಗೆ ರೂ. ೫೦೦/- ಪ್ರೋತ್ಸಾಹದನ & ರೋಗಿಗೆ ಚಿಕಿತ್ಸೆ ನೀಡಿ ಗುಣಪಡಿಸಿದ ಚಿಕಿತ್ಸಾ ನಿರ್ವಾಹಕರಿಗೆ ರೂ. ೧೦೦೦/- ಗೌರವಧನ ನೀಡಲಾಗುತ್ತಿದ್ದು ಇದನ್ನು ಸದುಪಯೋಗ ಪಡಿಸಿಕೊಂಡು ಆಂದೋಲನ ರೂಪದಲ್ಲಿ ಕ್ಷಯ ಪತ್ತೆ ಚಟುವಟಿಕೆಗಳನ್ನು ಕೈಗೊಳ್ಳಬೇಕೆಂದು ಆರ್. ಜಿ. ವಿವೇಕಿ ಅವರು ಉಪನ್ಯಾಸ ಮಾಡಿದರು.
ಆಶಾ ಕಾರ್ಯಕರ್ತೆಯರಾದ ಶ್ರೀಮತಿ ಲಲಿತಾ ಪಾಟೀಲ ಹಾಗೂ ಸುಮನ ಇವರ ಪ್ರಾರ್ಥನೆ ಮತ್ತು ನಾಡ ಗೀತೆ ಹಾಡಿದರು. ೨೦೨೦-೨೧ ನೇ ಸಾಲಿನಲ್ಲಿ ಕ್ಷಯರೋಗ ನಿಯಂತ್ರಣ ಕಾರ್ಯಕ್ರಮದಡಿ ಉತ್ತಮ ಪ್ರಗತಿ ತೋರಿದ ಆಧಿಕಾರಿಗಳು, ಆಶಾ ಕಾರ್ಯಕರ್ತೆ ಆರೋಗ್ಯ ಸಿಬ್ಬಂದಿ, ಖಾಸಗಿ ವೈದ್ಯರು ಮತ್ತು ಖಾಸಗಿ ಆಸ್ಪತ್ರೆಗಳಿಗೆ ಅವರ ಅತ್ಯುತ್ಯಮ ಸೇವೆಯನ್ನು ಪರಿಗಣ ಸಿ ಈ ಸಂದರ್ಭದಲ್ಲಿ ನೆನಪಿನ ಕಾಣ ಕೆ ನೀಡಿ ಸನ್ಮಾನಿಸಲಾಯಿತು.
ಹಿರಿಯ ಆರೋಗ್ಯ ನಿರೀಕ್ಷಕರಾದ ಸಿ. ಜಿ. ಅಗ್ನಿಹೊತ್ರಿ ನಿರೂಪಿಸಿದರು ಹಾಗೂ ಜಿಲ್ಲಾ ಕ್ಷಯರೋಗ ನಿ. ಕೇಂದ್ರದ ಹಿರಿಯ ಆರೋಗ್ಯ ನಿರೀಕ್ಷಕರು ಎಸ್. ಜಿ. ಲಾಡ ಅವರು ವಂದನಾರ್ಪಣೆ ಮಾಡಿದರು.
ಕಾರ್ಯಕ್ರಮದಲ್ಲಿ ಆರೋಗ್ಯ ಮತ್ತು ಕು. ಕ. ಸೇವೆಗಳು ವಿಭಾಗೀಯ ಉಪ ನಿರ್ದೇಶಕರಾದ ಶೈಲಜಾ ವಾಯ್ ತಮ್ಮಣ್ಣವರ, ಯಳ್ಳೂರ ರೋಡ ಕೆಎಲ್‌ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ನಿರ್ದೇಶಕರಾದ ಡಾ|| ಎಸ್. ಸಿ. ಧಾರವಾಡ, ಜಿಲ್ಲಾ ಬಿಮ್ಸ್ ಆಸ್ಪತ್ರೆಯ ಶಸ್ತ್ರ ಚಿಕಿತ್ಸಕರಾದ ಡಾ|| ಹುಸೇನಸಾಹೆಬ ಖಾಜಿ, ಆರೋಗ್ಯ & ಕು. ಕ. ಅಧಿಕಾರಿಗಳಾದ ಡಾ|| ಎಸ್. ವಿ. ಮುನ್ಯಾಳ, ಜಿಲ್ಲಾ ಸರ್ವೇಕ್ಷಾಧಿಕಾರಿಗಳಾದ ಡಾ|| ಬಿ. ಎನ್ ತುಕ್ಕಾರ, ಜಿಲ್ಲಾ ಕುಷ್ಠರೋಗ ನಿ. ಅಧಿಕಾರಿಗಳಾದ ಡಾ|| ಚಾಂದನಿ, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ|| ಮಹೇಶ ಕಿವಡಸನ್ನವರ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿಗಳಾದ ಡಾ|| ಅನೀಲ್ ಎಸ್. ಕೊರಬು, ಜಿಲ್ಲೆಯ ಆರೋಗ್ಯ ಇಲಾಖೆಯ ಜಿಲ್ಲಾ ಸಂಯೋಜಕರಾದ ಸ್ವಪ್ನಿಲ್ ಕಾಂಬಳೆ, ಕೆ.ಹೆಚ್.ಪಿ.ಟಿಯ ವಿವಿಧ ಕಾರ್ಯಕ್ರಮ ಅನುಷ್ಠಾನ ಅಧಿಕಾರಿಗಳು, ತಾಲೂಕಾ ಆರೋಗ್ಯಾಧಿಕಾರಿಗಳು ಹಾಗೂ ಪ್ರಾ. ಆ.ಕೇಂದ್ರದ ವೈದ್ಯಾಧಿಕಾರಿಗಳು ಮತ್ತು ಜಿಲ್ಲಾ ಕ್ಷಯರೋಗ ನಿಯಂತ್ರಣ ಕೇಂದ್ರದ ಎಲ್ಲಾ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯವರು ಹಾಗೂ ಆರೋಗ್ಯ ಕಾರ್ಯಕರ್ತರು, ಎನ್.ಜಿ.ಓ.ಗಳು ಹಾಗೂ ಮಾಧ್ಯಮ ಮಿತ್ರರು ಉಪಸ್ಥಿತರಿದ್ದರು.

ತೋಟಗಾರಿಕೆ ತರಬೇತಿಗಾಗಿ ಅರ್ಜಿ ಅಹ್ವಾನ

ತೋಟಗಾರಿಕೆ ಪ್ರಾಯೋಗಿಕ ತರಬೇತಿ ಯೋಜನೆಯಡಿಯಲ್ಲಿ ೨೦೨೧-೨೧ ನೇ ಸಾಲಿನಲ್ಲಿ ಬೆಳಗಾವಿ ಜಿಲ್ಲೆಯ ಪುರುಷ ಅಭ್ಯರ್ಥಿಗಳಿಗೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಿಡಕಲ್ ಡ್ಯಾಮ್ ತೋಟಗಾರಿಕೆ ತರಬೇತಿ ಕೇಂದ್ರದಲ್ಲಿ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಗದಗ ಜಿಲ್ಲೆಯ ತೋಟಗಾರಿಕಾ ತರಬೇತಿ ಕೇಂದ್ರದಲ್ಲಿ ಮೇ.೩ ರಿಂದ ಫೆ. ೨, ೨೦೨೨ ರವರೆಗೆ ೧೦ ತಿಂಗಳ ತರಬೇತಿ ಹಮ್ಮಿಕೊಳ್ಳಲಾಗಿರುತ್ತದೆ.
ಅಭ್ಯರ್ಥಿಯು ಎಸ್. ಎಸ್. ಎಲ್. ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ತರಬೇತಿ ಬಯಸುವ ಅಭ್ಯರ್ಥಿಯ ತಂದೆ/ತಾಯಿ/ಪೋಷಕರು ಕಡ್ಡಾಯವಾಗಿ ಜಮೀನು ಹೊಂದಿರಬೇಕು ಹಾಗೂ ಸ್ವಂತ ಸಾಗುವಳಿ ಮಾಡುತ್ತಿರಬೇಕು ಈ ಬಗ್ಗೆ ಪಹಣ ಯನ್ನು ನೀಡುವುದು ಕಡ್ಡಾಯವಾಗಿರುತ್ತದೆ.
ಸಾಮಾನ್ಯ ವರ್ಗದ ಅಭ್ಯರ್ಥಿಯು ಕನಿಷ್ಠ ೧೮ ವರ್ಷಗಳು ಹಾಗೂ ಗರಿಷ್ಠ ೩೦ ವರ್ಷ ವಯೋಮಿತಿ ಹೊಂದಿರಬೇಕು. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳ ಕನಿಷ್ಠ ೧೮ ವರ್ಷಗಳು ಹಾಗೂ ಗರಿಷ್ಠ ೩೩ ವರ್ಷಗಳು ಆಗಿರಬೇಕು. ಅಭ್ಯರ್ಥಿಯು ತರಬೇತಿ ಕೇಂದ್ರದಲ್ಲಿಯೇ ಇರಬೇಕು.
ಅರ್ಜಿಗಳನ್ನು ಮಾ. ೨೪ ರಿಂದ ಏ.೧೭ ರವರೆಗೆ ನೀಡಲಾಗುವುದು ಹಾಗೂ ಭರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಏ. ೧೭ ರ ಸಂಜೆ ೫ ಗಂಟೆಯವರೆಗೆ ನಿಗದಿಪಡಿಸಲಾಗಿದೆ.
ನಿಗದಿತ ಅವಧಿಯೊಳಗೆ ಎಲ್ಲಾ ಅಭ್ಯರ್ಥಿಗಳು ಏ. ೨೦ ರಂದು ರಾಣ ಚೆನ್ನಮ್ಮ ವೃತ್ತದ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ (ರಾವ) ಅವರ ಕಚೇರಿಯಲ್ಲಿ ಮುಂಜಾನೆ ೧೧ ಗಂಟೆಗೆ ನೇರವಾಗಿ ಮೂಲ ದಾಖಲಾತಿಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಬೇಕು.
ಈ ಕಛೇರಿಯಿಂದ ಮತ್ತೆ ಯಾವುದೇ ಪತ್ರ ವ್ಯವಹಾರ ಮಾಡಲಾಗುವುದಿಲ್ಲ ಈ ಕುರಿತು ದೂರವಾಣ ಸಂ: ೦೮೩೧-೨೪೫೧೪೨೨ ಮತ್ತು ಹಿಡಕಲ್ ಡ್ಯಾಂ ದೂರವಾಣ ಸಂ: ೦೮೩೩೩-೨೬೩೦೦೮ಕ್ಕೆ ಸಂಪರ್ಕಿಸಬಹುದು.
ಅರ್ಜಿಯ ನಿಗದಿತ ಪ್ರವೇಶ ಪತ್ರಗಳನ್ನು ಚೆನ್ನಮ್ಮ ವೃತ್ತದ ಬಳಿ ಇರುವ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ (ರಾವ) ಅವರ ಕಛೇರಿಯಲ್ಲಿ ಅಥವಾ ಇಲಾಖೆಯ  ವೆಬ್ ಸೈಟ್ ನಲ್ಲಿ ಡೌನ್ ಲೋಡ್ ಮಾಡಿಕೊಳ್ಳಬಹುದು. ಸಾಮಾನ್ಯ ವರ್ಗದವರು ರೂ. ೩೦ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ೧೫ ರೂಪಾಯಿಗಳ ಮೌಲ್ಯದ ಇಂಡಿಯನ್ ಪೋಸ್ಟಲ್ ಆರ್ಡರ್   ಅನ್ನು ಜಿಲ್ಲಾ ಪಂಚಾಯತ್ ತೋಟಗಾರಿಕೆ ಉಪನಿರ್ದೇಶಕರ ಅವರ ಹೆಸರಿನಲ್ಲಿ ಪಡೆದು ಅರ್ಜಿ ಜೊತೆಗೆ ಪೂರ್ಣ ಮಾಹಿತಿಗಳನ್ನು ತುಂಬಿ ಅರ್ಹತಾ ಪತ್ರಗಳೊಂದಿಗೆ ಎಸ್. ಎಸ್. ಎಲ್. ಸಿ ಪ್ರಮಾಣ ಪತ್ರದ ಅಂಕ ಪಟ್ಟಿ, ಲಿವಿಂಗ್ ಸರ್ಟಿಫಿಕೇಟ್, ಜಾತಿ ಪ್ರಮಾಣ ಪತ್ರ, ಸ್ವಂತ ಜಮೀನಿನ ಉತಾರ, ಹಿಡುವಳಿ ದೃಢೀಕರಣ ಪತ್ರದ ದಾಖಲಾತಿಗಳೊಂದಿಗೆ ಭರ್ತಿ ಮಾಡಿದ ಅರ್ಜಿಯನ್ನು ಲಗತ್ತಿಸಿ ರಾಣ ಚೆನ್ನಮ್ಮ ವೃತ್ತದ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಿಗೆ ಸಲ್ಲಿಸಬೇಕು.
ಹೆಚ್ಚಿನ ವಿವರಗಳಿಗೆ ಆಯಾ ತಾಲೂಕಿನ ಜಿಲ್ಲಾ ಪಂಚಾಯತ್ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಹಾಗೂ ಜಿಲ್ಲಾ ಪಂಚಾಯತ್ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಛೇರಿಯಲ್ಲಿ ಭೇಟಿ ನೀಡಿ ವಿಚಾರಿಸಿ ಎಂದು ಚೆನ್ನಮ್ಮ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿದ್ಯುತ್ ವ್ಯತ್ಯಯ

 

ಹುವಿಸಕಂನಿ ವತಿಯಿಂದ ಎಚ್.ಟಿ ಮತ್ತು ಎಲ್.ಟಿ ಮಾರ್ಗಗಳ ಬಲವರ್ಧನೆ ಹಾಗೂ ಇತರೆ ತುರ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುತ್ತಿರುವುದರಿಂದ ಮಾ.೨೬ ರಂದು ಬೆಳಿಗ್ಗ್ಗೆ ೦೯ ಗಂಟೆಯಿಂದ ಸಾಯಂಕಾಲ ೦೫ ಗಂಟೆಯವರೆಗೆ ೧೧೦ ಕೆ.ವ್ಹಿ. ಉಚಗಾಂವ ಉಪಕೇಂದ್ರದಿಂದ ವಿತರಣೆಯಾಗುವ ಬೆನಕನಹಳ್ಳಿ, ಸಾವಗಾಂವ, ಮಂಡೋಳಿ, ಹಂಗರಗಾ ಹಾಗೂ ಆರ್ಮಿ ಕಾಲನಿ ಗ್ರಾಮಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಹುವಿಸಕಂ ನಿಗಮದ ಕಾರ್ಯನಿರ್ವಾಹಕ ಇಂಜಿನೀಯರ (ವಿ) ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿದ್ಯುತ್ ಪ್ರಸರಣ ನಿಗಮ ಎಚ್ಚರಿಕೆ

ಚಿಕ್ಕೋಡಿ ತಾಲೂಕಿನ ಕಬ್ಬೂರ ಗ್ರಾಮದಲ್ಲಿ ಹೊಸದಾಗಿ ನಿರ್ಮಿಸಿರುವ ೨೨೦/೧೧೦/೧೧ ಕೆವ್ಹಿ ವಿದ್ಯುತ್ ಕೇಂದ್ರದಿಂದ ಹಾಲಿ ಚಾಲ್ತಿ ಇರುವ ೨೨೦ ಕೆ ವ್ಹಿ ಘಟಪ್ರಭಾ -ಚಿಕ್ಕೋಡಿ ಜೋಡಿ ಮಾರ್ಗದಿಂದ ಬಹುಪ್ರಸರಣ ಮಾರ್ಗ ೩.೦೯೮ ಕಿಮೀ ಹಾಗೂ ಹಾಲಿ ಚಾಲ್ತಿಯಲ್ಲಿರುವ ೧೧೦ ಕೆ.ವ್ಹಿ. ರಾಯಬಾಗ-ಇಟ್ನಾಳ ಜೋಡಿ ಮಾರ್ಗದಿಂದ ಬಹುಪ್ರಸರಣ ಮಾರ್ಗದ ಗೋಪುರಗಳ ಮೇಲೆ ೧೬.೪೩೬ಕಿಮೀ ಜೋಡಿ ಮಾರ್ಗವನ್ನು ನಿರ್ಮಿಸಲಾಗಿದೆ.

ಈ ೨೨೦/೧೧೦ಕೆವ್ಹಿ ವಿದ್ಯುತ್ ಪ್ರಸರಣ ಮಾರ್ಗಗಳು ಕಬ್ಬೂರ, ಜೋಡಟ್ಟಿ, ಗಿರಿನಾಯಕವಾಡಿ, ಭೆಂಡವಾಡ, ಕಟಕಭಾವಿ, ಬ್ಯಾಕೂಡ, ಬಿರನಾಳ, ಬೊಮ್ಮನಾಳ, ನಿಡಗುಂದಿ ಹಾಗೂ ಅಕ್ಕ ಪಕ್ಕದ ಗ್ರಾಮಗಳ ಸರಹದ್ದಿನ ವ್ಯಾಪ್ತಿಯಲ್ಲಿ ಬರುವ ಪ್ರದೇಶಗಳಲ್ಲಿ ಹಾಯ್ದು ಹೋಗುತ್ತದೆ.

ಈ ವಿದ್ಯುತ್ ಪ್ರಸರಣ ಮಾರ್ಗಗಳಲ್ಲಿ ಮಾ.೨೫ ರಂದು ಇಲ್ಲವೆ ತದನಂತರ ಯಾವುದೇ ಕ್ಷಣದಲ್ಲಿ ವಿದ್ಯುತ್ತನ್ನು ಹರಿಬಿಡಲಾಗುವುದು. ಕಾರಣ ವಿದ್ಯುತ್ ಗೋಪುರಗಳನ್ನು ಹತ್ತುವದಾಗಲಿ ಅಥವಾ ತಂತಿಗಳನ್ನು ಮುಟ್ಟುವದಾಗಲಿ, ಹಸಿರು ಟೊಂಗೆಗಳನ್ನು ಎಸೆಯುವದಾಗಲಿ ಮತ್ತು ಲೈನ್ ಕೆಳಗಡೆ ದನಕರುಗಳನ್ನು ಕಟ್ಟುವದಾಗಲಿ, ಗಿಡಮರಗಳನ್ನು ನೆಡುವದಾಗಲಿ, ಮನೆ/ಗುಡಿಸಲುಗಳನ್ನು ನಿರ್ಮಿಸುವದಾಗಲಿ ಮಾಡಿದರೆ ಪ್ರಾಣಾಪಾಯವಾಗುವುದು. ಆದಕಾರಣ ಸಾರ್ವಜನಿಕರು ಮೇಲ್ಕಾಣ ಸಿದವುಗಳನ್ನು ಮಾಡಬಾರದು ಎಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಬೃಹತ್ ಕಾಮಗಾರಿ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರು (ವಿ) ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಒಂದು ವೇಳೆ ಇಂತಹ ಕೃತ್ಯಗಳನ್ನು ಯಾರಾದರೂ ಎಸಗಿದಲ್ಲಿ ಮುಂದೆ ಒದಗಬಹುದಾದ ಅಪಾಯಗಳಿಗೆ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಜವಾಬ್ದಾರಿಯಾಗಿರುವುದಿಲ್ಲ ಎಂದು  ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button