Kannada NewsKarnataka NewsLatest

ರಮೇಶ ಜಾರಕಿಹೊಳಿ ಸಿಡಿ ಪ್ರಕರಣ: ಮೂಲ ವಿಡೀಯೋ ಪತ್ತೆ?

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿರುವ ಮಾಜಿ ಸಚಿವ ರಮೇಶ ಜಾರಕಿಹೊಳಿ ಸಿಡಿ ಪ್ರಕರಣದ ಮೂಲ ವಿಡೀಯೋವನ್ನು ತನಿಖಾ ತಂಡ ಪತ್ತೆ ಮಾಡಿದೆ ಎಂದು ಗೊತ್ತಾಗಿದೆ.

ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ಮೂಲ ವಿಡೀಯೋವನ್ನು ವಶಕ್ಕೆ ಪಡೆದು ಎಫ್ಎಸ್ಎಲ್ ಗೆ ಕಳಿಸಿದೆ ಎನ್ನಲಾಗುತ್ತಿದೆ.

ಯುವತಿ ತನ್ನ ವೆನಿಟಿ ಬ್ಯಾಗ್ ನಲ್ಲಿ ರಹಸ್ಯ ಕ್ಯಾಮೆರಾ ಇಟ್ಟುಕೊಂಡು ರೆಕಾರ್ಡ್ ಮಾಡಿದ್ದಾಳೆ ಎನ್ನುವ ಬಲವಾದ ಸಂಶಯ ವ್ಯಕ್ತವಾಗಿದ್ದು, ಇದೊಂದು ಹನಿಟ್ರ್ಯಾಪ್ ಆಗಿರಬಹುದು ಎನ್ನುವ ಅನುಮಾನ ಬಲವಾಗುವಂತಾಗಿದೆ.

ಬೆಂಗಳೂರಿನ ಪ್ರತಿಷ್ಠಿತ ಅಪಾರ್ಟ್ ಮೆಂಟ್ ಒಂದರಲ್ಲಿ ರೆಕಾರ್ಡ್ ಆಗಿರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಬಹಿರಂಗವಾದ  ವಿಡೀಯೋದಲ್ಲಿ ಕೆಲವು ಪಾರ್ಟ್ ಮೊಬೈಲ್ ನಲ್ಲಿ ರೆಕಾರ್ಡ್ ಆಗಿರುವಂತೆಯೂ, ಕೆಲವು ಪಾರ್ಟ್ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿರುವಂತೆಯೂ ಭಾಸವಾಗುವಂತಿದೆ.  ಹಾಗಾದರೆ ಎರಡೂ ರೀತಿಯಲ್ಲಿ ರೆಕಾರ್ಡ್ ಮಾಡಲಾಗಿದೆಯೇ, ನಂತರ ಅವುಗಳನ್ನು ಎಡಿಟ್ ಮಾಡಿ ಸೇರಿಸಲಾಗಿದೆಯೇ ಎನ್ನುವ ಕುರಿತು ಎಸ್ಐಟಿ ತನಿಖೆ ನಡೆಸುತ್ತಿದೆ.

ಕಳೆದ ಮಾರ್ಚ್ 2ರಂದು ಸಿಡಿ ಬಹಿರಂಗವಾಗಿ ರಾಜ್ಯ ರಾಜಕಾರಣದಲ್ಲಿ ಭಾರಿ ಕೋಲಾಹಲವನ್ನೇ ಸೃಷ್ಟಿಸಿದೆ. ಸಚಿವರಾಗಿದ್ದ ರಮೇಶ ಜಾರಕಿಹೊಳಿ ಸಿಡಿ ಹೊರಗೆ ಬರುತ್ತಿದ್ದಂತೆ ಪಕ್ಷಕ್ಕೆ ಮುಜುಗರವಾಗ ಬಾರದೊಂದು ಸಚಿವಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ಈ ವಿಷಯ ವಿಧಾನಸಭೆಯ ಅಧಿವೇಶನದಲ್ಲೂ ಭಾರಿ ಗದ್ದಲಕ್ಕೆ ಕಾರಣವಾಗಿತ್ತು.

ಪ್ರಕರಣದ ತನಿಖೆಯನ್ನು ಎಸ್ಐಟಿಗೆ ವಹಿಸಲಾಗಿದ್ದು, ಸಿಡಿಯಲ್ಲಿರುವ ಯುವತಿ ಪತ್ತೆಗೆ ಜಾಲ ಬೀಸಲಾಗಿದೆ. ಜೊತೆಗೆ ಇದರ ಹಿಂದೆ ಯಾರ್ಯಾರ ಕೈವಾಡವಿದೆ ಎನ್ನುವುದರ ಪತ್ತೆಗೆ ಯತ್ನ ನಡೆದಿದೆ.

ಈ ಮಧ್ಯೆ ಎಸ್ಐಟಿ ರಮೇಶ ಜಾರಕಿಹೊಳಿ ಮೊಬೈಲ್ ನ್ನು ವಶಕ್ಕೆ ಪಡೆದಿದ್ದು, ಹಲವಾರು ಬಾರಿ ಯುವತಿ ಮೊಬೈಲ್ ಗೆ ಕರೆ ಮಾಡಿರುವುದನ್ನು ಪತ್ತೆ ಮಾಡಿದೆ ಎಂದು ಗೊತ್ತಾಗಿದೆ. ತನಿಖೆ ತೀವ್ರಗೊಂಡಿದ್ದು ಇನ್ನು ಕೆಲವೇ ದಿನದಲ್ಲಿ ಸಂಪೂರ್ಣ ವಿವರ ಹೊರಗೆ ಬರಬಹುದು.

ಸಿಡಿ ವಿಷಯ 4 ತಿಂಗಳ ಮೊದಲೇ ಗೊತ್ತಾಗಿತ್ತು, ಎಷ್ಟೇ ಖರ್ಚಾದರೂ ಜೈಲಿಗೆ ಹಾಕಿಸದೆ ಬಿಡಲ್ಲ – ರಮೇಶ ಜಾರಕಿಹೊಳಿ

Big Breaking – ರಮೇಶ ಜಾರಕಿಹೊಳಿ ವಿರುದ್ಧ ದಾಖಲಿಸಿದ್ದ ಕೇಸ್ ವಾಪಸ್

ಡಿಕೆಶಿ ಪುತ್ರಿಯ ಮದುವೆಯಲ್ಲಿ ಕಾಣಿಸಿಕೊಂಡ ರಮೇಶ ಜಾರಕಿಹೊಳಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button