ಸತೀಶ್ ಜಾರಕಿಹೊಳಿ ಸ್ಪರ್ಧೆಯಿಂದಾಗಿ ಬಿಜೆಪಿಗೆ ಅನುಕಂಪದ ಅಸ್ತ್ರ ಅನಿವಾರ್ಯವಾಯಿತೇ?
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕೊನೆಯ ಕ್ಷಣದಲ್ಲಿ ಬಿಜೆಪಿ ತನ್ನ ಗೇಮ್ ಪ್ಲ್ಯಾನ್ ಬದಲಾಯಿಸಲು ಕಾಂಗ್ರೆಸ್ ಪಕ್ಷ ಸತೀಶ್ ಜಾರಕಿಹೊಳಿ ಅವರನ್ನು ಕಣಕ್ಕಿಳಿಸಿದ್ದೇ ಕಾರಣವಾಯಿತೆ?
ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿಯಲ್ಲಿ 35 ಜನರು ಅರ್ಜಿ ಸಲ್ಲಿಸಿದ್ದರು. ಬಹುತೇಕ ಎಲ್ಲರೂ ತಮಗೇ ಟಿಕೆಟ್ ಎಂದುಕೊಂಡು ಓಡಾಡುತ್ತಿದ್ದರು. ಬಿಜೆಪಿಯೂ ಹಲವು ಬಾರಿ ತನ್ನ ಗೇಮ್ ಪ್ಲ್ಯಾನ್ ಬದಲಾಯಿಸುತ್ತ ಬಂದಿದೆ.
ಮಹಾಂತೇಶ ಕವಟಗಿಮಠ, ಶೃದ್ಧಾ ಶೆಟ್ಟರ್, ಎಂ.ಬಿ.ಜಿರಲಿ, ಡಾ.ರವಿ ಪಾಟೀಲ ಮತ್ತಿತರರ ಹೆಸರು ಹಲವು ಬಾರಿ ಮೇಲಕ್ಕೆ ಬಂದು ಹೋಗಿದೆ. ಆದರೆ ಕೊನೆಯ ಕ್ಷಣದಲ್ಲಿ ಬಿಜೆಪಿ ತನ್ನ ಗೇಮ್ ಪ್ಲ್ಯಾನ್ ಬದಲಾಯಿಸುವ ಅನಿವಾರ್ಯತೆಗೆ ಸಿಲುಕಿತು. ಇದಕ್ಕೆ ಕಾರಣ ಕಾಂಗ್ರೆಸ್ ಸತೀಶ್ ಜಾರಕಿಹೊಳಿ ಅವರನ್ನು ಕಣಕ್ಕಿಳಿಸಿದ್ದು.
ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಸರಿಸುಮಾರು 7 -8 ಲಕ್ಷ ಲಿಂಗಾಯತರಿದ್ದಾರೆ. ಸುಮಾರು 12 ಲಕ್ಷ ಇತರೇ ವರ್ಗದ ಮತದಾರರಿದ್ದಾರೆ. ಇಲ್ಲಿಯವರೆಗೂ ಲಿಂಗಾಯತ ಮತಗಳನ್ನು ನಂಬಿಕೊಂಡು ಟಿಕೆಟ್ ನೀಡಲಾಗುತ್ತ ಬರಲಾಗಿದೆ. ಆದರೆ ಈ ಬಾರಿ ಸತೀಶ್ ಜಾರಕಿಹೊಳಿ ಸ್ಪರ್ಧೆಯಿಂದಾಗಿ ಇತರ ವರ್ಗದ ಮತ ಅತ್ತ ಸರಿಯುವ ಸಾಧ್ಯತೆ ಇದೆ. ಹಾಗಾಗಿ ಆ ಮತಗಳ ಮೇಲೆ ಅನುಕಂಪದ ಅಸ್ತ್ರ ಬಳಸಲು ಬಿಜೆಪಿ ಮುಂದಾಗಿದೆ.
ಮಂಗಲಾ ಅಂಗಡಿ ಹೆಸರು ಸಂಭಾವ್ಯರ ಪಟ್ಟಿಯಲ್ಲಿದೆ, ಆದರೆ ತನ್ನ ಬದಲು ಮಗಳಿಗೆ ಕೊಡುವಂತೆ ಮಂಗಲಾ ಅವರು ಕೋರಿದ್ದಾರೆ ಎಂದು ಪ್ರಗತಿವಾಹಿನಿ ನಿನ್ನೆಯಷ್ಟೆ ಪ್ರಕಟಿಸಿತ್ತು. ಆದರೆ ಮಗಳು ಹುಬ್ಬಳ್ಳಿಯವರಾಗುವುದರಿಂದ, ಮಗಳಿಗಿಂತ ಅವರಿಗೇ ಕೊಟ್ಟರೆ ಅನುಕೂಲವಾಗಬಹುದು ಎನ್ನುವ ದೃಷ್ಟಿಯಿಂದ ಕೊನೆಯ ಕ್ಷಣದಲ್ಲಿ ಗೇಮ್ ಪ್ಲ್ಯಾನ್ ಬದಲಾಯಿಸಲಾಗಿದೆ.
ಇದಾಗ ಬೆಳಗಾವಿ ಕಣ ಅಂತಿಮವಾಗಿದೆ. ಇನ್ನೇನಿದ್ದರೂ ಯುದ್ಧದ ಆಖಾಡಕ್ಕಿಳಿಯಬೇಕಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ