ಪ್ರಗತಿವಾಹಿನಿ ಸುದ್ದಿ; ಶಿರಸಿ: ಭಾರತದಲ್ಲೆ ಎರಡನೇ ಬಾರಿಗೆ ಕರ್ನಾಟಕದಲ್ಲೇ ಮೊದಲ ಬಾರಿಗೆ ಶಿರಸಿಯ ಲಾಲಬಹದ್ದೂರ ನಗರ ಮರಾಠಿಕ್ಕೊಪ್ಪದಲ್ಲಿ ನಿರ್ಮಾಣವಾಗುತ್ತಿದೆ 4.5 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಐತಿಹಾಸಿಕ ಶ್ರೀರಾಮ ಮಂದಿರದ ಸ್ತಬ್ಧಚಿತ್ರ.
2021 ರ ಬೇಡರ ವೇಷದ ಪ್ರಯುಕ್ತ ಈ ಬಾರಿ ಮರಾಠಿಕ್ಕೊಪ್ಪದ ಶಿವ ಬಾಯ್ಸ್ ತಂಡದವರ ಪರಿಶ್ರಮದಿಂದ ಈ ಸುಂದರ ಶ್ರಿರಾಮ ಮಂದಿರ ಮೂಡಿಬಂದಿದೆ. ಸಮಸ್ತ ಭಾರತಿಯರ ಕನಸಿನ ಶ್ರೀರಾಮ ಮಂದಿರದ ಸ್ತಬ್ಧಚಿತ್ರದ ಪುಣ್ಯದ ಕಾರ್ಯಕ್ಕೆ ಶಿವ ಬಾಯ್ಸ್ ತಂಡದ 20 ಜನ ಕಲಾವಿದರ 15 ದಿನಗಳ ಪ್ರರಿಶ್ರಮವಿರುವುದು ಇಲ್ಲಿ ಸ್ಮರಿಸಬಹುದು.
ಶಿರಸಿಯ ಮುಖ್ಯ ಕಲಾವಿದ ಕೇಶವ ನಾಯ್ಕರವರ ಕಲೆ ಈ ಸ್ತಬ್ಧಚಿತ್ರಕ್ಕೆ ಸಹಾಯಕವಾಗಿದೆ. ಬೇಡರ ವೇಷಧಾರಿಯಾಗಿ ಹರೀಶ ಬಾಬು ನಾಯ್ಕರವರು ಕುಣಿಯಲಿದ್ದಾರೆ.
ಮಾರ್ಚ್ 26ರಂದು ಸಾಯಂಕಾಲ 6 ಘಂಟೆಗೆ ಬೇಡರ ವೇಷ ಮರಾಠಿಕ್ಕೊಪ್ಪದಿಂದ ಪ್ರಾರಂಭವಾಗಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಕೋವಿಡ್-19 ನ ಮುಂಜಾಗ್ರತಾ ಕ್ರಮಗಳೊಂದಿಗೆ ಬರಬೇಕಾಗಿ ತಂಡದ ಅಧ್ಯಕ್ಷರಾದ ನಾಗರಾಜ ಮಾದೇವ ಗುಡಿಗಾರ ಅವರು ಆಮಂತ್ರಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ