ಪ್ರಗತಿವಾಹಿನಿ ಸುದ್ದಿ: ಮುಂಬೈ: ಮಹಾರಾಷ್ಟ್ರದ ಲೇಡಿ ಸಿಂಗಂ ಖ್ಯಾತಿಯ ಅರಣ್ಯಾಧಿಕಾರಿ ದೀಪಾಲಿ ಚೌವ್ಹಾಣ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಅಧಿಕಾರಿ ಎಂ ಎಸ್ ರೆಡ್ದಿಯನ್ನು ರಾಜ್ಯ ಸರ್ಕಾರ ಅಮಾನತು ಮಾಡಿ ಆದೇಶ ಹೊರಡಿಸಿದೆ.
ಎಂ ಎಸ್ ರೆಡ್ಡಿ ಮೇಲ್ಘಟ್ ಮೀಸಲು ಅರಣ್ಯದ ಮಾಜಿ ಪ್ರಾದೇಶಿಕ ನಿರ್ದೇಶಕರಾಗಿದ್ದರು. ತಮಗೆ ರೆಡ್ಡಿ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ದೀಪಾಲಿ ಚೌವ್ಹಾಣ್ ಆರೋಪಿಸಿದ್ದರು.
ದೀಪಾಲಿ ಚೌವ್ಹಾಣ್ ಸರ್ವಿಸ್ ರಿವಾಲ್ವರ್ ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ದೀಪಾಲಿ ಚೌವ್ಹಾಣ್ ಮೃತದೇಹ ವಸತಿ ಗೃಹದಲ್ಲಿ ಪತ್ತೆಯಾಗಿತ್ತು. ಮೃತ ದೇಹದ ಬಳಿಯೇ ಡೆತ್ ನೋಟ್ ಕೂಡ ಪತ್ತೆಯಾಗಿತ್ತು. ದೀಪಾಲಿ ಅವರ ನಿಗೂಢ ಸಾವು ಹಲವು ಅನುಮಾನಕ್ಕೆ ಕಾರಣವಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ