ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ ಐಟಿ ವಿರುದ್ಧ ಗಂಭೀರ ಆರೋಪ ಮಾಡಿರುವ ಯುವತಿ ಪರ ವಕೀಲ ಜಗದೀಶ್, ಎಸ್ ಐಟಿ ಆರೋಪಿ ಪರ ಕೆಲಸ ಮಾಡುತ್ತಿದೆ. ಕೋರ್ಟ್ ಆದೇಶವನ್ನು ಕೂಡ ಉಲ್ಲಂಘಿಸಿ, ಸಂತ್ರಸ್ತೆ ವಿಡಿಯೋ ಚಿತ್ರೀಕರಣ ಮಾಡಿ ಮಾಧ್ಯಮಗಳಿಗೆ ನೀಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಜಗದೀಶ್, ಕೇಸ್ ಸಂಬಂಧ ಇಂದು ದಾಖಲೆಗಳನ್ನು ಸಲ್ಲಿಸುತ್ತೇನೆ. ಆರೋಪಿ ಬಂಧಿಸದಿದ್ದರೆ ಕೋರ್ಟ್ ಮೊರೆ ಹೋಗುತ್ತೇವೆ. ಎಸ್ ಐಟಿ ಕಾನೂನು ಉಲ್ಲಂಘನೆ ಮಾಡುತ್ತಿದೆ ಎಂದರು.
ಸಿಡಿ ಕೇಸ್ ನಲ್ಲಿ ಯುವತಿ ಪರವಾಗಿ ನಾನು ವಾದ ಮಂಡಿಸುತ್ತಿರುವದಕ್ಕೆ ನನ್ನ ತೇಜೋವಧೆಗೂ ಯತ್ನಿಸಲಾಗುತ್ತಿದೆ. ಕೆಲವರು ನಾನು ಕಾಂಗ್ರೆಸ್ ಪರ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ಆದರೆ ನಾನು ಕಾಂಗ್ರೆಸ್ ಪಕ್ಷದ ಪರವೂ ಅಲ್ಲ, ಬಿಜೆಪಿ ಪರವವೂ ಅಲ್ಲ. ನಾನು ಓರ್ವ ವಕೀಲ. ವಕೀಲನಾಗಿ ನನಗೆ ಬದ್ಧತೆಗಳಿವೆ. ಕಾಂಗ್ರೆಸ್ ಪಕ್ಷದವರ ವಿರುದ್ಧವೂ ನಾನು ಹಲವು ಕೇಸ್ ಗಳನ್ನು ಹಾಕಿ ಗೆದ್ದಿದ್ದೆನೆ. ಇಲ್ಲಿ ಪಕ್ಷದ ವಿಚಾರ ಬರಲ್ಲ. ಓರ್ವ ವಕೀಲನಾಗಿ ನನ್ನ ಕೆಲಸವನ್ನು ನಾನು ಪ್ರಾಮಾಣಿಕವಾಗಿ ಮಾಡುತ್ತಿದ್ದೇನೆ ಎಂದು ಹೇಳಿದರು.
ಸಂತ್ರಸ್ತ ಯುವತಿಗೆ ಓರ್ವ ಸಹೋದರ ಎಂಬ ಭಾವನೆಯಿಂದ ನಾನು ನನ್ನ ಕೆಲಸ ಮಾಡುತ್ತಿದ್ದೇನೆ. ನನ್ನ ತೇಜೋವಧೆ ಮಾಡುವ ತಂತ್ರಗಾರಿಕೆ ಬೇಡೆ. ಈ ಬಗ್ಗೆ ನಾನು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುತ್ತೇನೆ. ಈ ಕೇಸ್ ಮುಗಿಯುವವರೆಗೂ ನಾನು ಕಪ್ಪು ಕೋಟು ಧರಿಸುವುದಿಲ್ಲ. ನನಗೂ ನನ್ನ ಕೆಲಸದ ಬಗ್ಗೆ ನಿಷ್ಠೆ, ಪ್ರಾಮಾಣಿಕತೆ ಎಂಬುದಿದೆ ಎಂದು ಹೇಳಿದ್ದಾರೆ.
ಮೆಡಿಕಲ್ ಟೆಸ್ಟ್ ಗೆ ಹಾಜರಾದ ಸಿಡಿ ಸಂತ್ರಸ್ತೆ; ರಮೇಶ್ ಜಾರಕಿಹೊಳಿಗೆ ಟೆನ್ ಶನ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ