ಪ್ರಗತಿವಾಹಿನಿ ಸುದ್ದಿ; ಮಂಗಳೂರು: ಸಚಿವ ಕೆ.ಎಸ್.ಈಶ್ವರಪ್ಪ ಬರೆದಿರುವುದು ಪತ್ರಮಾತ್ರವಲ್ಲ ರಾಜ್ಯದಲ್ಲಿ ಸರ್ಕಾರ ಹೇಗೆ ಆಡಳಿತ ನಡೆಸುತ್ತಿದೆ ಎಂಬುದರ ಚಿತ್ರಣ. ಹಿರಿಯ ಸಚಿವರೊಬ್ಬರು ಮುಖ್ಯಮಂತ್ರಿಗಳ ಆದಳಿತದ ಬಗ್ಗೆ ನಂಬಿಕೆಯಿಲ್ಲ ಎಂಬುದನ್ನು ಪತ್ರದ ಮೂಲಕ ರಾಜ್ಯಪಾಲರಿಗೆ ದೂರು ನೀಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಸಚಿವರಿಗೆ ಸಿಎಂ ಮೇಲೆ ವಿಶ್ವಾಸವಿಲ್ಲ. ಸರ್ಕಾರದಲ್ಲಿ ಏನೆಲ್ಲಾ ನಡೆಯುತ್ತಿದೆ ಎಂಬುದನ್ನು ಈಶ್ವರಪ್ಪ ತಿಳಿಸಿದ್ದಾರೆ. ಸಿಎಂ ಯಡಿಯೂರಪ್ಪ ತಮ್ಮ ಆಡಳಿತ ಸರಿಯಿದೆ ಎನ್ನುವುದಾದರೆ ಸಂಜೆಯೊಳಗೆ ಸಚಿವ ಈಶ್ವರಪ್ಪ ಅವರನ್ನು ವಜಾ ಮಾಡಲಿ. ಇಲ್ಲವೇ ಯಡಿಯೂರಪ್ಪ ಸ್ವಯಂ ಪ್ರೇರಿತರಾಗಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದರು.
ರಾಜ್ಯ ಸರ್ಕಾರ ಜಾರಿಗೆ ತಂದಿರುವ ಕೊರೊನಾ ಮಾರ್ಗಸೂಚಿ ವಿಫಲವಾಗಲಿದೆ. ಚಿತ್ರಮಂದಿರಗಳಿಗೆ ಒಂದು ನಿಯಮ, ಚುನಾವಣೆಗೆ ಒಂದು ನಿಯಮ, ಉಳಿದ ಕ್ಷೇತ್ರಕ್ಕೆ ಒಂದು ನಿಯಮ ಮಾಡಲಾಗಿದೆ. ಚುನಾವಣೆ ಸಿದ್ಧತೆ ಸೇರಿದಂತೆ ಎಲ್ಲದಕ್ಕೂ ಅನ್ವಯವಾಗುವಂತೆ ಒಂದೇ ನಿಯಮ ಜಾರಿಗೆ ತರಲಿ ಎಂದರು.
ನಮ್ಮಲ್ಲಿ ಹೊಗೆ ಶುರುವಾಗಿದೆಯಷ್ಟೇ, ಕಾಂಗ್ರೆಸ್ ನಲ್ಲಿ ಬೆಂಕಿಯೇ ಬಿದ್ದಿದೆ ಎಂದ ಬಿಜೆಪಿ ರಾಜ್ಯಾಧ್ಯಕ್ಷ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ