ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯ ಸರ್ಕಾರದ ಎಸ್ಮಾ ಎಚ್ಚರಿಕೆ ನಡುವೆಯೂ ಸೆಡ್ಡು ಹೊಡೆದಿರುವ ಸಾರಿಗೆ ನೌಕರರು ನಾಳೆಯಿಂದ ರಾಜ್ಯಾದ್ಯಂತ ಮುಷ್ಕರಕ್ಕೆ ಮುಂದಾಗಿದ್ದು, ತಮ್ಮ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಘೋಷಿಸಿದ್ದಾರೆ.
6ನೇ ವೇತನ ಆಯೋಗ ಜಾರಿ ಮಾಡಬೇಕು ಎಂಬುದೇ ನಮ್ಮ ಪ್ರಮೊಖ ಬೇಡಿಕೆಯಾಗಿದ್ದು, ಬೇಡಿಕೆ ಈಡೇರುವವರೆಗೂ ಹೋರಾಟದಿಂದ ಹಿಂದೆ ಸರಿಯಲ್ಲ. ಸರ್ಕಾರದ ಯಾವುದೇ ಎಚ್ಚರಿಕೆಗಳಿಗೂ ಬಗ್ಗುವ ಪ್ರಶ್ನೆ ಇಲ್ಲ ಎಂದು ಸಾರಿಗೆ ನೌಕರರ ಕೂಟದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ.
ಸಾರಿಗೆ ನೌಕರರ ವಿರುದ್ಧ ಎಸ್ಮಾ ಜಾರಿ ಮಾಡುವ ಎಚ್ಚರಿಕೆ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿರುವ ಕೋಡಿಹಳ್ಳಿ, ಎಸ್ಮಾ ಜಾರಿ ಮಾಡಲು ಅದರದ್ದೇ ನೀತಿ ನಿಯಮಗಳಿವೆ ಹಾಗೊಂದು ವೇಳೆ ಜಾರಿ ಮಾಡಿದರೆ ನ್ಯಾಯಾಲಯವಿದೆ. ಜೈಲಿಗೆ ಹೋಗಲೂ ಸಿದ್ಧರಿದ್ದೇವೆ ಆದರೆ 6ನೇ ವೇತನ ಆಯೋಗ ಜಾರಿ ಬೇಡಿಕೆಯಿಂದ ಹಿಂದೆ ಸರಿಯಲ್ಲ ಎಂದರು.
ಕೊರೊನಾ ಸೋಂಕಿನ ಬಗ್ಗೆ ಸಾರಿಗೆ ನೌಕರರಿಗೂ ಅರಿವಿದೆ. ನಾವು ಶಾಂತಿಯುವ ಪ್ರತಿಭಟನೆಗೆ ಮುಂದಾಗಿದ್ದೇವೆ. ಇನ್ನು ಪರ್ಯಾಯವಾಗಿ ಸರ್ಕಾರ ಖಾಸಗಿ ಬಸ್ ಗಳನ್ನು ರಸ್ತೆಗಿಳಿಸಲು ಮುಂದಾಗಿದೆ. ಇಂದು ಸರ್ಕಾರ ಖಾಸಗಿ ಸಂಸ್ಥೆಗಳಿಗೆ ಕೆಲ ಭರವಸೆಗಳನ್ನು ನೀಡಿರಬಹುದು. ಆದರೆ ನಾಳೆ ನಿಮ್ಮ ಬೇಡಿಕೆಯನ್ನೂ ಈಡೇರಿಸದೇ ನಮಗಾದ ಸ್ಥಿತಿಯೇ ನಿಮಗೂ ಆಗಲಿದೆ ಎಂಬುದು ತಿಳಿದಿರಲಿ. ಹಾಗಾಗಿ ಖಾಸಗಿ ವಾಹನಗಳ ಚಾಲಕರು, ನಿರ್ವಾಹಕರು ಸಾರಿಗೆ ನೌಕರರ ಮುಷ್ಕರಕ್ಕೆ ಬೆಂಬಲ ನೀಡಲಿ ಎಂದು ಹೇಳಿದರು.
ಪ್ರತಿಭಟನೆ ನಡೆಸಿದರೆ ಎಸ್ಮಾ ಎಚ್ಚರಿಕೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ