Kannada NewsLatest

ಸಿಡಿ ಬರುತ್ತೆ, ಹೋಗುತ್ತೆ, ಆದರೆ ಕೊರೋನಾ ರಮೇಶ್ ಜಾರಕಿಹೊಳಿ ಮುಟ್ಟಲು ಹೋದರೆ ಅವರಿಗೂ ಬರುತ್ತೆ ಎಂದ ಸಚಿವ

ಪ್ರಗತಿವಾಹಿನಿ ಸುದ್ದಿ; ಬಾಗಲಕೋಟೆ: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ತೋಟಗಾರಿಕಾ ಸಚಿವ ಆರ್.ಶಂಕರ್, ಸಿಡಿ ಹೇಗೆ ಬಂತೋ ಹಾಗೇ ಹೋಗುತ್ತೆ. ಹಿಂದೆನೂ ಇಂತಹ ಸಿಡಿಗಳು ಬಂದಿದ್ದವು ಎಂದು ಹೇಳಿದ್ದಾರೆ.

ಆದರೆ ರಮೇಶ ಜಾರಕಿಹೊಳಿ ಅವರನ್ನು ಬಂಧಿಸಲು ಹೋದರೆ ಅವರಿಗೂ ಕೊರೋನಾ ಬರುತ್ತೆ ಎಂದು ಅವರು ಎಚ್ಚರಿಸಿದ್ದಾರೆ.

Home add -Advt

ಬಾಗಲಕೋಟೆಯಲ್ಲಿ ಮಾತನಾಡಿದ ಸಚಿವರು, ಈ ಸಿಡಿಗಳೆಲ್ಲ ವಾಪಸ್ ಹೋಗುತ್ತವೆ. ಚುನಾವಣೆಯಲ್ಲಿ ಜನರು ಈ ಸಿಡಿ, ಪಿಡಿಗಳಿಗೆಲ್ಲ ಸೊಪ್ಪು ಹಾಕಲ್ಲ, ತಲೆಕೆಡಿಸಿಕೊಳ್ಳುವುದೂ ಇಲ್ಲ. ಅವರಿಗೆ ಬೇಕಾಗಿದ್ದು ಅಭಿವೃದ್ಧಿ ಅಷ್ಟೇ. ಹಾಗಾಗಿ ಉಪಚುನಾವಣೆಯಲ್ಲಿ ಬಿಜೆಪಿಗೆ ಮತನೀಡಿ ಗೆಲ್ಲಿಸುತ್ತಾರೆ. ಸಿಡಿ ಪ್ರಕರಣ ತನಿಖೆ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಸತ್ಯಾಸತ್ಯತೆ ಹೊರಬರುತ್ತದೆ. ರಮೇಶ್ ಜಾರಕಿಹೊಳಿ ನಿರ್ದೋಷಿಯಾಗಿ ಹೊರ ಬರುತ್ತಾರೆ ಎಂದರು.

ರಮೇಶ್ ಜಾರಕಿಹೊಳಿಯನ್ನು ಬಂಧಿಸಬೇಕು ಎಂಬ ಒತ್ತಾಯ ಕೇಳಿಬರುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ರಮೇಶ್ ಜಾರಕಿಹೊಳಿಗೆ ಕೊರೊನಾ ಬಂದಿದೆ. ಹಾಗಾಗಿ ಅವರನ್ನು ಮುಟ್ಟಲು ಹೋದವರಿಗೂ ಕೊರೊನಾ ಬರುತ್ತೆ ಎಂದು ಹೇಳಿದ್ದಾರೆ.

ಗೋಕಾಕ ಮಗ V/S ಗೋಕಾಕ ಮಗಳು

 

Related Articles

Back to top button