ಮೆಸ್ ನಲ್ಲಿ ಸಿಕ್ಕಿದ್ದ ಚಿನ್ನದ ಚೈನ್ ಮರಳಿಸಿ ಪ್ರಾಮಾಣಿಕತೆ ಮೆರೆದ ಉಮೇಶ ಕತ್ತಿ ಪಿಎ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಆಸ್ಪತ್ರೆಗೆ ಚಿಕಿತ್ಸೆಗೆಂದು ಬೆಳಗಾವಿಗೆ ಬಂದಿದ್ದ ರಾಣೆಬೆನ್ನೂರಿನ ವ್ಯಕ್ತಿ ಕಳೆದುಕೊಂಡಿದ್ದ ಬಂಗಾರದ ಚೈನನ್ನು ಸಚಿವ ಉಮೇಶ ಕತ್ತಿ ಅವರ ಆಪ್ತ ಸಹಾಯಕ ಶ್ರೀಶೈಲ ಮಗ್ದುಂ ಮರಳಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.
ಶ್ರೀಶೈಲ್ ಮಗದುಮ್ಮ ಇಂದು ಮಧ್ಯಾಹ್ನ ಮೆಸ್ ಒಂದಕ್ಕೆ ಊಟಕ್ಕೆ ಹೋಗಿದ್ದಾರೆ. ಈ ವೇಳೆ ಸುಮಾರು ಒಂದೂವರೆ ತೊಲೆಯಷ್ಟು ತೂಕದ ಬಂಗಾರದ ಚೈನ್ ಸಿಕ್ಕಿತ್ತು. ತಕ್ಷಣ ಮೆಸ್ ಮಾಲಿಕರಿಗೆ ವಿಷಯ ತಿಳಿಸಿ, ಕಳೆದುಕೊಂಡವರು ಹುಡುಕಿಕೊಂಡು ಬಂದರೆ ತಮ್ಮನ್ನು ಸಂಪರ್ಕಿಸುವಂತೆ ತಿಳಿಸಿ ಎಂದು ಮೊಬೈಲ್ ನಂಬರ್ ಕೊಟ್ಟು ಬಂದಿದ್ದರು.
ನಂತರ ತಾವು ಕಳೆದುಕೊಂಡ ಚೈನನ್ನು ಹುಡುಕಿಕೊಂಡು ಬಂದ ಚೈನು ಮಾಲೀಕರಾದ ರಾಣೆಬೆನ್ನೂರಿನ ಪ್ರವೀಣಕುಮಾರ್ ಪಾಟೀಲ ಅವರಿಗೆ ಮೆಸ್ ಮಾಲಿಕರು ಮಗದುಮ್ ಅವರ ನಂಬರ್ ನೀಡಿದರು.
ಮಗ್ದುಮ್ ಅವರು ಸಚಿವ ಉಮೇಶ ಕತ್ತಿ ಅವರ ಹಸ್ತದಿಂದ ಚೈನನ್ನು ವಾಪಸ್ ನೀಡಿದರು.ಪ್ರವೀಣ ಕುಮಾರ ಪಾಟೀಲ ಚಿಕಿತ್ಸೆಗೆಂದು ಬೆಳಗಾವಿಗೆ ಬಂದಿದ್ದರು. ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ವೇಳೆ ಚೈನನ್ನು ತೆಗೆದು ಕಿಸೆಯಲ್ಲಿಟ್ಟುಕೊಂಡಿದ್ದರು. ಮೆಸ್ ನಲ್ಲಿ ಹಣ ಕೊಡುವ ವೇಳೆ ಚೈನ್ ಕೆಳಗೆ ಬಿದ್ದಿತ್ತು.
ಮಗ್ದು ಅವರು ಅದನ್ನು ಮರಳಿಸಿ ಪ್ರಾಮಾಣಿಕತೆ ತೋರಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ