Kannada NewsKarnataka News

ವ್ಯಕ್ತಿ ನಾಪತ್ತೆ

ಮಂಗೇಶ ಬಿಕಾಜಿ ದೇಶಪಾಂಡೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬೆಳಗಾವಿ ನಗರದ ತಿಲಕವಾಡಿಯ ನಿವಾಸಿಯಾದ ಮಂಗೇಶ ಬಿಕಾಜಿ ದೇಶಪಾಂಡೆ ಅವರು ಏ.೦೮ ರಂದು ಮುಂಜಾನೆ ೫ ಗಂಟೆಗೆ ಮನೆಯಲ್ಲಿ ವಾಕಿಂಗ್ ಹೋಗಿ ಬರುತ್ತೇನೆ ಎಂದು ಹೇಳಿ ಹೋಗಿ ಮನೆಗೆ ಮರಳಿ ಬಾರದೇ ಎಲ್ಲಿ ಕಾಣೆಯಾಗಿರುತ್ತಾರೆ ಎಂದು ತಿಲಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗೇಶ ಬಿಕಾಜಿ ದೇಶಪಾಂಡೆ (೪೧ ವರ್ಷ) ೫ ಫೂಟ್. ೨ ಇಂಚು ಎತ್ತರವಿದ್ದು, ದುಂಡು ಮುಖ, ಕೆಂಪು ಮೈಬಣ್ಣ, ಉದ್ದ ಮೂಗು, ಎತ್ತರವಾದ ಹಣೆ ಮತ್ತು ಕಪ್ಪು ಕೂದಲು, ಸದೃಢ ಮೈಕಟ್ಟು ಹೊಂದಿರುತ್ತಾರೆ.
ಕಪ್ಪು ಬಣ್ಣದ ಟೀ ಶರ್ಟ್ ಹಾಗೂ ಕಪ್ಪು ಬಣ್ಣದ ನೈಟ್ ಪ್ಯಾಂಟ್ ಧರಿಸಿರುತ್ತಾರೆ. ಕನ್ನಡ, ಮರಾಠಿ ಭಾಷೆ ಮಾತನಾಡುತ್ತಾರೆ.
ಈ ಪ್ರಕಾರ ಚಹರೆಯುಳ್ಳ ವ್ಯಕ್ತಿ ಕಂಡು ಬಂದಲ್ಲಿ ತಿಲಕವಾಡಿ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ: ೦೮೩೧-೨೪೦೫೨೩೬ ಗೆ ಸಂಪರ್ಕಿಸಿ ಎಂದು ತಿಲಕವಾಡಿ ಪೊಲೀಸ್ ಠಾಣೆಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button