ಸಂವತ್ಸರದ ಮೊದಲದಿನದ ಹಬ್ಬ ಯುಗಾದಿ

 ವಿಶ್ವಾಸ ಸೋಹೋನಿ
ಒಂದು ಸಂವತ್ಸರದ ಮೊದಲದಿನದ ಹಬ್ಬ ಯುಗಾದಿ. ಹಿಂದಿನ ಸಂವತ್ಸರ ಕಳೆದು ಹೊಸ ಸಂವತ್ಸರಕ್ಕೆ ಕಾಲಿಡುವ ದಿನ ಅದು. ಎಲ್ಲ ಜನರೂ ಈ ಹಬ್ಬವನ್ನು ಆಚರಿಉವುದರಿಂದ ಇದನ್ನು ಊರಿನಹಬ್ಬ ಎಂದೂ ಹೇಳುತ್ತಾರೆ. ಯುಗಾದಿಯಂದು ಚೈತ್ರ ಮಾಸದ ಆರಂಭ. ಗಿಡಮರಗಳು ಚಿಗುರಿ ನಲಿಯುವ ಕಾಲ. ಹೋಸವರುಷ ಎಲ್ಲರಿಗೂ ಶುಭವನ್ನು ತರಲಿ ಎಂಬುದೇ ಅಂದಿನ ಎಲ್ಲರ ಹಾರೈಕೆ.
ಯುಗ ಯುಗಾದಿ ಕಳೆದರೂ
ಉಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ….
ಎಂದು ಕನ್ನಡದ ವರ ಕವಿ ಬೇಂದ್ರೆ ಹಾಡಿದರು. ಯುಗಾದಿ ಹೊಸ ವರುಷ ತರುವ ಹಬ್ಬ, ಯುಗಾದಿ ಎಂದರೆ ಹೊಸವರ್ಷದ ಮೊದಲ ದಿನ ಎಂದು ಅರ್ಥ. ಇಲ್ಲಿ ಯುಗ ಎಂದರೆ ವರ್ಷ.ಭಾರತೀಯರಿಗೆ ಹೊಸ ವರ್ಷದ ಮೊದಲೆಯದಿನ, ಇದು ಚಾಂದ್ರಮಾನ ಪದ್ಧತಿಯಾಯಿತು. ಇದನ್ನು ಚಾಂದ್ರಮಾನ ಯುಗಾದಿ ಎಂದು ಹೇಳುತ್ತಾರೆ. ಕೆಲವರು ಸೌರಮಾನ ಪದ್ಧತಿಯಂತೆ ಯುಗಾದಿ ಆಚರಿಸುತ್ತಾರೆ..
ಯುಗಾದಿಯಂದು ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯುತ್ತದೆ.ಆ ದಿನ ಹಿಂದುಗಳು ಬೆಳಿಗ್ಗೆ ಅಭ್ಯಂಜನ ಸ್ನಾನ ಮಾಡಿ ಹೊಸ ವಸ್ತ್ರ ಧರಿಸಿ ದೇವತಾ ಪೂಜೆ ಮಾಡುತ್ತಾರೆ .ಜೀವನದಲ್ಲಿ ಕಷ್ಟ-ಸುಖಗಳು ಸಮಪಾಲು ಇರಲೆಂಬದರ ಸೂಚಕ ಬೇವು-ಬೆಲ್ಲ ತಿನ್ನುವರು.
ಜೀವನವೆಲ್ಲಾ ಬೇವು ಬೆಲ್ಲ
ಕಷ್ಟ-ಸುಖ ಸಿಹಿ-ಕಹಿ ಸಮವೆಲ್ಲ.
ಎನ್ನುತ್ತಾನೆ ಜನಪದ ಕವಿ. ಹೀಗಾಗಿ ಆ ದಿನ ಬೇವು-ಬೆಲ್ಲದ ಸೇವನೆಗೆ ತುಂಬಾ ಮಹತ್ವವಿದೆ. ಯುಗಾದಿ ಆಚರಣೆಯಲ್ಲಿ ಬೇವು ಬೆಲ್ಲ ಸೇವನೆ, ಪಂಚಾಂಗ ಶ್ರವಣ ಮತ್ತು ಚಂದ್ರದರ್ಶನ ಇವು ಮೂರೂ ಸೇರಿವೆ. ದೇವಸ್ಥಾನಗಳಲ್ಲಿ ಅಂದು ಸಂಜೆ ಪಂಚಾಂಗ ಶ್ರವಣ ನಡೆದು ಆ ವರ್ಷದ ಮಳೆ-ಬೆಳೆ, ರಾಜಕೀಯ, ವ್ಯಾಪಾರ ಮೊದಲಾದವುಗಳ ಪರಿಸ್ಥಿತಿಯನ್ನು ತಿಳಿಸಲಾಗುತ್ತದೆ. ಬೇವಿನ ಎಲೆಗಳನ್ನು ಸೇವಿಸುವಾಗ ಶತಾಯುರ್ವಜ್ರದೇಹಾಯ, ಸರ್ವಸಂಪತ್ಕರಾಯುಚ! ಸರ್ವಾರಿಷ್ಟ್ ವಿನಾಶಾಯ ನಿಂಬಕಂದಳ ಭಕ್ಷಣಂ ಎಂದು ಹೇಳಿ ಕೊಳ್ಳಲಾಗುತ್ತದೆ. ಬೇವಿನ ಸೇವನೆಯಿಂದ ಮಾನವ ವಜ್ರದೇಹಿ ಯಾಗುತ್ತಾನೆ. ಸಂಪತ್ತು ಆಯುಷ್ಯ ವೃದ್ಧಿಸುತ್ತದೆ. ಅನಿಷ್ಟಗಳು ನಾಶವಾಗುತ್ತದೆ ಎಂಬುದು ಇಲ್ಲಿನ ಅರ್ಥ. ಬಿದಿಗೆಯಂದು ಚಂದ್ರ ದರ್ಶನ ಮಾಡಿ ಹಿರಿಯರಿಗೆ ನಮಸ್ಕರಿಸುವುದು, ಬಂಧು ಮಿತ್ರರಿಗೆ ಶುಭ ಹಾರೈಸುವುದು ವಾಡಿಕೆಯಲ್ಲಿದೆ. ಯುಗಾದಿಯ ಮರುದಿನವಾದ ಅಂದು ವರ್ಷತೊಡಕು ಹಬ್ಬ. ವರ್ಷಕ್ಕೊಂದು ಹೊಸತು ಜನ್ಮ ಎಂದು ಕವಿ ಬಂದ್ರೆ ಹೇಳಿದಂತೆ ಯುಗಾದಿ ಎಲ್ಲರಿಗೂ ಹೊಸಚೈತನ್ಯ ತುಂಬುತ್ತದೆ. ಹುರುಪಿನಿಂದ ಕೆಲಸ ಮಾಡಲು ಪ್ರೇರೇಪಿಸುತ್ತದೆ. ಸಾಮಾನ್ಯವಾಗಿ ಕ್ರಿಸ್ ಕ್ರೈಸ್ತ ವರ್ಷದ ಮಾರ್ಚ್ ಅಥವಾ ಏಪ್ರಿಲ್ ತಿಂಗಳಲ್ಲಿ ಯುಗಾದಿ ಹಬ್ಬ ಬರುತ್ತದೆ. ನವೋದಯ ತರುವ ಈ ಹಬ್ಬ ಸಾರ್ವತ್ರಿಕವಾಗಿದೆ. ‘ಯುಗಾದಿ’ ಎಂಬ ಶಬ್ದವು ಸಂಸ್ಕೃತದ ‘ಯುಗ’ ಮತ್ತು ‘ಆದಿ’ ಎಂಬ ಎರಡು ಶಬ್ದಗಳಿಂದ ಕೂಡಿದೆ. ಸೃಷ್ಟಿ ನಾಟಕದಲ್ಲಿ ನಾಲ್ಕು ಯುಗಗಳು ಇವೆ. ಸತ್ಯಯುಗ, ತ್ರೇತಾಯುಗ, ದ್ವಾಪರಯುಗ, ಮತ್ತು ಕಲಿಯುಗ. ‘ಆದಿ’ ಎಂದರೆ ಪ್ರಾರಂಭ, ಪೂರ್ವಕಾಲ ಎಂದಾಗುತ್ತದೆ.
ವರ್ತಮಾನ ಸಮಯ ಕಲಿಯುಗದ ಕೊನೆಯ ಹಾಗೂ ಸತ್ಯಯುಗದ ಸಂಗಮ ಸಮಯ, ಸಂಗಮಯುಗವಾಗಿದೆ. ಹೀಗೆ ಕಲಿಯುಗದ ಅಂಧಕಾರದ ರಾತ್ರಿಯನ್ನು ಸತ್ಯಯುಗದ eನದ ಬೆಳಕನ್ನಾಗಿ ಪರಿವರ್ತಿಸುವ ಉದಯ ಕಾಲವೇ ‘ಯುಗಾದಿ’. ಈ ಯುಗಾದಿಯ ಸಮಯದಲ್ಲಿ ನಿರಾಕಾರ ಶಿವನು ಪ್ರಜಾಪಿತ ಬ್ರಹ್ಮಾರವರ ಶರೀರದಲ್ಲಿ ಪ್ರವೇಶ ಮಾಡಿ, ಹೊಸ ಸೃಷ್ಟಿಯ ಸ್ಥಾಪನೆ ಮಾಡುವನು. ಕಲಿಯುಗದ ತಮೋಪ್ರಧಾನ ಮನುಷ್ಯಾತ್ಮರಿಗೆ ಸತ್ಯ eನವನ್ನು ನೀಡಿ, ಅವರಿಗೆ ಸಹಜ ರಾಜಯೋಗವನ್ನು ಕಲಿಸಿ, ಅವರನ್ನು ಸ್ವರ್ಗ ಅಥವಾ ರಾಮರಾಜ್ಯಕ್ಕಾಗಿ ಬೇಕಾಗುವ ಶ್ರೀ ಲಕ್ಷ್ಮೀ-ನಾರಾಯಣ, ಶ್ರೀರಾಮ-ಸೀತೆಯರ ಸಮಾನ ದೇವಾತ್ಮರನ್ನಾಗಿ ಮಾಡುತ್ತಾನೆ. ಅದಕ್ಕಾಗಿಯೇ ರಾಮಾಯಣದಲ್ಲಿ ಇಂದ್ರನು ವ್ಶೆಜಯಂತಿ ಮಾಲೆಯನ್ನು ಹಾಗೂ ಚಿನ್ನದ ಕಲಶವನ್ನು ವಸುವಿಗೆ ನೀಡಿದ ದಿನವೆಂದು ಹೇಳಲಾಗುತ್ತದೆ.
ನಿಜವಾಗಿ ಸತ್ಯ ‘ಯುಗಾದಿ’, ಸಂಗಮ ಯುಗ. ಈ ಯುಗ ಬರುವುದು ಕಲ್ಪಕ್ಕೊಮ್ಮೆ ಮಾತ್ರ. ಅನೇಕ ಕಾಲಚಕ್ರಗಳು ಅನಾದಿ ಕಾಲದಿಂದ ನಡೆಯತ್ತಾ ಬಂದಿದೆ. ಉದಾಹರಣೆಗೆ ೬೦ ಸೆಕೆಂಡಿಗೆ ೧ ನಿಮಿಷ, ೬೦ ನಿಮಿಷಕ್ಕೆ ೧ ಗಂಟೆ, ೨೪ ಗಂಟೆಗೆ ೧ ದಿನ, ೭ ದಿನಗಳಿಗೆ ೧ ವಾರ, ೩೦ ದಿನಗಳಿಗೆ ೧ ತಿಂಗಳ, ೧೨ ತಿಂಗಳಿಗೆ ೧ ವರ್ಷದಂತೆ, ಈ ಸೃಷ್ಟಿ ನಾಟಕವು ೫೦೦೦ ವರ್ಷದ್ದಾಗಿದೆ. ಈಶ್ವರೀಯ eನದ ಪ್ರಕಾರ ಸತ್ಯಯುಗ ೧೨೫೦ ವರ್ಷ, ತ್ರೇತಾಯುಗ ೧೨೫೦ ವರ್ಷ, ದ್ವಾಪರಯುಗ ೧೨೫೦ ವರ್ಷ, ಕಲಿಯುಗ ೧೨೫೦ ವರ್ಷ. ಈ ರೀತಿ ನಾಲ್ಕು ಯುಗಗಳನ್ನು ಸೇರಿ ಒಂದು ಕಲ್ಪ ಆಗುತ್ತದೆ. ಈ ಕಾಲಚಕ್ರ ೫೦೦೦ ವರ್ಷಕ್ಕೊಮ್ಮೆ ಪುನರಾವೃತ್ತಿಯಾಗುತ್ತದೆ. ಪರಮಪಿತ ಶಿವನು ಸಂಗಮಯುಗದಲ್ಲಿ, [ಕಲಿಯುಗದ ಅಂತ್ಯ ಹಾಗೂ ಸತ್ಯಯುಗದ ಆರಂಭದ ಸಮಯ] ಒಮ್ಮೆ ಮಾತ್ರ ಈ ಭೂಮಿಗೆ ಬಂದು ವಿಶ್ವಪರಿವರ್ತನೆ ಮಾಡುತ್ತಾರೆ. ಅದರ ಸ್ಮಾರಕವಾಗಿಯೇ ‘ಯುಗಾದಿ’ಯನ್ನು ವರುಷ-ವರುಷ ಆಚರಿಸುತ್ತಾರೆ.
ಈ ರೀತಿಯಾಗಿ ಯುಗಾದಿಯು ನಾಡಿಗೆ ಮಾತ್ರವಲ್ಲದೆ, ಇಡೀ ವಿಶ್ವಕ್ಕೇ ಉಜ್ವಲತೆಯನ್ನು, ಜನತೆಗೆ ಸುಖ ಶಾಂತಿಯನ್ನು ನೀಡುವ ವಜ್ರಸಮಾನ ಸಮಯ. ಹೀಗೆ ಯುಗಾದಿಯು ‘ಭಕ್ತರಿಗಾಗಿ, ವಿಶಾಲ ಹೃದಯದ ಶಿವ ಶರಣೆಯರಿಗಾಗಿ, ಮುಕ್ತಿ ಬಯಸುವ ಆರಾಧಕರಿಗಾಗಿ, ಶಿವನು ಭಕ್ತರ ಕರೆಗೆ ಓಗೊಟ್ಟು, ಅವರ ಭಕ್ತಿಯ ಫಲವನ್ನು ನೀಡಲು ಧರೆಗೆ ಬಂದಿದ್ದಾನೆ’ ಎಂಬ ಪರಮ ಸಂದೇಶವನ್ನು ನೀಡುವ ಮಹಾನ ಪರ್ವವಾಗಿದೆ. ಕರೋನಾದ ಕಠಿಣ ಕಾಲದಲ್ಲಿ ಹಬ್ಬದ ಆಚರಣೆ ಕಷ್ಟಕರವಾಗಿದೆ. ಕೆ.ಎಸ್.ಆರ್.ಟಿ.ಸಿ. ಮುಷ್ಕರ ಒಂದು ಕಡೆಆದರೇ, ಇನ್ನೋಂದು ಕಡೆ ಜೀವನಾವಶ್ಯಕ ವಸ್ತಗಳಬೇಲೆ ಗಗನಕ್ಕೆ ಮುಟ್ಟಿದೆ. ಪ್ರಕೃತಿಯ ತಾಪ ದಿನನಿತ್ಯ ಜಾಸ್ತಿಅಗುತ್ತಿದೆ. ಈ ಸಮಯದಲ್ಲಿ ಕರುಣಾಮಯಿ ದಯಾಸಾಗರನಾದ ಪರಮಾತ್ಮ ಕೃಪೆಯು ನಮ್ಮ ಮೇಲೆ ಸದಾ ಇರಲಿ ಎಂದು ನಾವು ಎಲ್ಲರು ಸೆರಿ ಅವನಲ್ಲಿ ಕೇಳೋಣ.

(ಲೇಖಕರು – ವಿಶ್ವಾಸ ಸೋಹೋನಿ, ಬ್ರಹ್ಮಾಕುಮಾರಿಸ್, ಮೀಡಿಯಾ ವಿಂಗ್)

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button