Kannada NewsLatest

ಶುದ್ಧ ಕುಡಿಯುವ ನೀರಿನ ಘಟಕ ಅಳವಡಿಕೆಗೆ ಶಾಸಕ ಅನಿಲ ಬೆನಕೆ ಚಾಲನೆ

ಶುದ್ಧ ಕುಡಿಯುವ ನೀರಿನ ಘಟಕ ಅಳವಡಿಕೆಗೆ ಶಾಸಕ ಅನಿಲ ಬೆನಕೆ ಚಾಲನೆ

ಪ್ರಗತಿವಾಹಿನಿ ಸುದ್ದಿ – ಬೆಳಗಾವಿ : ಇಲ್ಲಿನ ವಿನಾಯಕ ನಗರ ಹಾಗೂ ಕೇಳಕರಬಾಗ್ ನಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಅಳವಡಿಕೆಗೆ ಶಾಸಕ ಅನಿಲ ಬೆನಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ವಿನಾಯಕ ನಗರ ಹಾಗೂ ಕೇಳಕರ ಬಾಗ್ ಪ್ರದೇಶಗಳಿಗೆ ಬೇಟಿ ನೀಡಿ ಮಾತನಾಡಿದ ಶಾಸಕರು ವಿನಾಯಕ ನಗರ ಹಾಗೂ ಕೇಳಕರ ಬಾಗ್ ನಲ್ಲಿ ಸಾರ್ವಜನಿಕರ ಕುಡಿಯುವ ನೀರಿನ ತೊಂದರೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಇಂದು ಈಗಾಗಲೇ ಇದ್ದ ಶುಧ್ದ ಕುಡಿಯುವ ನೀರಿನ ಘಟಕವನ್ನು ನವೀಕರಿಸಿ ಸಾರ್ವಜನಿಕರ ಉಪಯೋಗಕ್ಕೆ ವ್ಯವಸ್ಥೆ ಮಾಡಲಾಗಿದೆ, ಸಾರ್ವಜನಿಕರು ಶುದ್ದ ಕುಡಿಯುವ ನೀರಿನ ಘಟಕಗಳನ್ನು ಉಪಯೋಗಿಸುವಂತೆ ತಿಳಿಸಿದರು.

Home add -Advt

ಈ ಸಂದರ್ಭದಲ್ಲಿ ಶಾಸಕರೊಂದಿಗೆ ಬೆಳಗಾವಿ ಜಲ ಮಂಡಳಿ ಅಧಿಕಾರಿಗಳು ಹಾಗೂ ಅಲ್ಲಿನ ಸಾರ್ವಜನಿಕರು ಉಪಸ್ಥಿತರಿದ್ದರು. ////

Related Articles

Back to top button