Kannada NewsKarnataka NewsLatest

*ಅಪ್ರಾಪ್ತ ಬಾಲಕಿಯ ಎದೆ ಭಾಗ ಕತ್ತರಿಸಿ, ಗುಪ್ತಾಂಗಕ್ಕೆ ಚಾಕು ಇರಿದು ಬರ್ಬರ ಹತ್ಯೆ*

ಪ್ರಗತಿವಾಹಿನಿ ಸುದ್ದಿ: ನಿಶ್ಚಿತಾರ್ಥ ಮಾಡಿಕೊಂಡಿದ್ದ ಅಪ್ರಾಪ್ತೆಯನ್ನು ಬರ್ಬರವಾಗಿ ಕೊಲೆ ಮಾಡಿದ್ದ ಪ್ರಕರಣದಲ್ಲಿ ಆಘಾತಕಾರಿ ಮಾಹಿತಿ ಬಹಿರಂಗವಗಿದೆ.

ಬೆಂಗಳೂರಿನ ಡಿ.ಜೆ.ಹಳ್ಳಿ ಸಕ್ಕರೆ ಮಂಡಿಯ ಪಾಳುಮನೆಯಲ್ಲಿ ವ್ಯಕ್ತಿಯೋರ್ವ ಬಾಲಕಿಯನ್ನು ಭೀಕರವಾಗಿ ಕೊಲೆ ಮಾಡಿದ್ದ. ಈ ಪ್ರಕರಣದ ತನಿಖೆ ವೇಳೆ ಶಾಕಿಂಗ್​​ ವಿಚಾರಗಳು ಬೆಳಕಿಗೆ ಬಂದಿವೆ.

ಯುವತಿ ಮೇಲೆ ಆರೋಪಿ ಸೈಯದ್ ಶಬೀಲ್​​ಗಿದ್ದ ಅನುಮಾನವೇ ಕೊಲೆಗೆ ಕಾರಣ ಎಂಬುದು ಗೊತ್ತಾಗಿದೆ. ಆಕೆಯನ್ನು ಭೇಟಿಯ ನೆಪದಲ್ಲಿ ಕರೆದಿದ್ದ ಈತ ಎದೆ ಭಾಗ ಕತ್ತರಿಸಿ, ಗುಪ್ತಾಂಗಕ್ಕೆ ಚಾಕುವಿನಿಂದ ಇರಿದು ಮತ್ತು ಕುತ್ತಿಗೆ ಕೊಯ್ದು ಹತ್ಯೆ ಮಾಡಿರೋದು ತನಿಖೆ ವೇಳೆ ಬಯಲಾಗಿದೆ. ಘಟನೆ ಬಳಿಕ ನಾಪತ್ತೆಯಾಗಿರುವ ಆರೋಪಿಗಾಗಿ ಪೊಲೀಸರಿಂದ ಶೋಧ ಮುಂದುವರೆಸಿದ್ದಾರೆ.’

ಕೋಲಾರ ಮೂಲದ ಅಪ್ರಾಪ್ತ ಬಾಲಕಿ ಆಗಾಗ ಬೆಂಗಳೂರಿನ ಸಂಬಂಧಿಕರ ಮನೆಗೆ ಬರುತ್ತಿದ್ದಳು. ಈ ನಡುವೆ ಡಿಜೆ ಹಳ್ಳಿಯ ಈರುಳ್ಳಿ ಮಾರ್ಕೆಟ್​​ನಲ್ಲಿ ಕೆಲಸ ಮಾಡ್ತಿದ್ದ ಸೈಯದ್ ಶಬೀಲ್ ಎಂಬ ಯುವಕನ ಜೊತೆ ಆಕೆಗೆ ಪ್ರೀತಿ ಶುರುವಾಗಿತ್ತು. ಆಗಾಗ ಫೋನ್​​ನಲ್ಲಿ ಮಾತಾನಾಡುತ್ತಿರೋದನ್ನು ಗಮನಿಸಿದ ಸಂಬಂಧಿಕರು, ಪೋಷಕರಿಗೆ ವಿಚಾರ ತಿಳಿಸಿದ್ದರು. ಬಳಿಕ ಆಕೆ ಪ್ರೀತಿಸುತ್ತಿದ್ದವನ ಜೊತೆಯೇ ಮದುವೆ ಮಾಡಲು ಮನೆಯವರು ಮುಂದಾಗಿದ್ದರು. ಅದರಂತೆ ಕಳೆದ 2025ರ ಜೂನ್​​ನಲ್ಲಿ ಇವರಿಬ್ಬರ ಎಂಗೇಜ್ಮೆಂಟ್ ಕೂಡ ನಡೆದಿತ್ತು. ಕೆಲ ಸಮಯದ ಬಳಿಕ ಮದುವೆಯ ತಯಾರಿಯಲ್ಲೂ ಮನೆಯವರಿದ್ದರು. ಆದರೆ ಇತ್ತೀಚೆಗೆ ಅಪ್ರಾಪ್ತಳ ಮೇಲೆ ಅನುಮಾನ ಪಡಲು ಶುರು ಮಾಡಿದ ಶಬೀಲ್, ವಿವಾಹಕ್ಕೂ ಮೊದಲೇ ಅಟ್ಟಹಾಸ ಮೆರೆದಿದ್ದಾನೆ.

ಶಬೀಲ್ ಮನೆಯಿಂದ ಸ್ವಲ್ಪ ದೂರದಲ್ಲಿ ಇರುವ ಸಕ್ಕರೆ ಮಂಡಿ ಪಾಳು ಬಿದ್ದ ಜಾಗದಲ್ಲಿ ಆರೋಪಿ ಶಬೀಲ್ ಮತ್ತು ಅಪ್ರಾಪ್ತ ಯುವತಿ ಇಬ್ಬರೂ ಆಗಾಗ ಭೇಟಿ ಮಾಡುತ್ತಿದ್ದರು. ಅದೇ ಜಾಗಕ್ಕೆ ಯುವತಿಯನ್ನು ಈತ ಕರೆದಿದ್ದ. ಹೀಗಾಗಿ ಮನೆಯಲ್ಲೇ ಮೊಬೈಲ್​​ ಬಿಟ್ಟು ಆಕೆ ಶಬೀಲ್​​ನ ಭೇಟಿಗಾಗಿ ತೆರಳಿದ್ದಳು. ಬೆಳಗ್ಗೆ 6 ಗಂಟೆಗೆ ಮನೆಯಿಂದ ಹೋದ ಯುವತಿ 10.30 ಆದರೂ ಬಾರದ ಕಾರಣ ಸಂಬಂಧಿಕರ ಮನೆಯವರು ಹುಡುಕಾಟ ಆರಂಭಿಸಿದ್ದರು. ಶಬೀಲ್​​ಗೆ ಕರೆ ಮಾಡಿದರೂಆತ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಹೀಗಾಗಿ ಆತನ ಮನೆಯವರ ಬಳಿ ವಿಚಾರಿಸಿದಾಗ ಅವರಿಬ್ಬರು ಭೇಟಿ ಆಗ್ತಿದ್ದ ಜಾಗದ ಬಗ್ಗೆ ಮಾಹಿತಿ ಸಿಕ್ಕಿತ್ತು. ಅಲ್ಲಿಗೆ ತೆರಳಿ ಪರಿಶೀಲನೆ ನಡೆಸಿದಾಗ ರಕ್ತದ ಮಡುವಿನಲ್ಲಿ ಕುತ್ತಿಗೆ ಕೊಯ್ದ ಸ್ಥಿತಿಯಲ್ಲಿ ಅಪ್ರಾಪ್ತಳ ಶವ ಪತ್ತೆಯಾಗಿತ್ತು.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button