Latest

ಈ ಮಾತಿಗೆ ನಾನೇಕೆ ಕ್ಷಮೆ ಕೇಳಬೇಕು ಎಂದ ಸಿದ್ದರಾಮಯ್ಯ

ಪ್ರಗತಿವಾಹಿನಿ ಸುದ್ದಿ; ಕೊಪ್ಪಳ: ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿಗೆ ನಾನು ಅವಮಾನ ಮಾಡಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅನಗತ್ಯವಾಗಿ ವಿಧೂಷಕ, ಜೋಕರ್ ನಂತೆ ಹೇಳಿಕೆ ನೀಡುತ್ತಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಗುಡುಗಿದ್ದಾರೆ.

ಕೊಪ್ಪಳದಲ್ಲಿ ಮಾತನಾಡಿದ ಅವರು, ಸುರೇಶ್ ಅಂಗಡಿಯವರೇ ರಾಜ್ಯದ ಪಾಲಿನ ಹಣ ಕೇಳಿಲ್ಲ. ಇನ್ನು ಮಂಗಳಾ ಅಂಗಡಿಯವರು ಏನು ಕೇಳ್ತಾರೆ ಎಂದು ನಾನು ಹೇಳಿದ್ದೆ. ಈ ಮಾತಿಗೆ ನಾನು ಏಕೆ ಕ್ಷಮೆ ಕೇಳಬೇಕು? ನಾನು ಅವಮಾನ ಮಾಡಿಲ್ಲ ಎಂದ ಮೇಲೆ ಕ್ಷಮೆ ಕೇಳುವ ಪ್ರಶ್ನೆಯೇ ಬರುವುದಿಲ್ಲ ಎಂದರು.

ಇನ್ನು ಸರ್ಕಾರದ ತಪ್ಪಿನಿಂದಾಗಿಯೇ ರಾಜ್ಯದಲ್ಲಿ ಕೊರೊನಾ 2ನೇ ಅಲೆ ಹೆಚ್ಚುತ್ತಿದೆ. ಮಹಾರಾಷ್ಟ್ರ, ಕೇರಳದಿಂದ ಬರುವವರನ್ನು ಟೆಸ್ಟ್ ಮಾಡುತ್ತಿಲ್ಲ. ಬಿಗಿಯಾದ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಕೇವಲ ದುಡ್ಡು ಹೊಡೆಯುವುದರಲ್ಲಿ ಸರ್ಕಾರ ಮುಳುಗಿದೆ ಎಂದು ಕಿಡಿಕಾರಿದರು.

1,68,912 ಜನರಲ್ಲಿ ಸೋಂಕು ಪತ್ತೆ; ಕೇಂದ್ರ ಆರೋಗ್ಯ ಇಲಾಖೆ ತಜ್ಞರ ತಂಡ ರಾಜ್ಯಕ್ಕೆ

Home add -Advt

Related Articles

Back to top button