ಶ್ರೀ ಷ ಬ್ರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಹಿರೇಮಠ, ಹುಕ್ಕೇರಿ
ಯುಗ ಯುಗಾದಿ ಕಳೆದರೂ ಯುಗಾದಿ ಮತ್ತೆ ಬರುತಿದೆ ಒಂದು ಅದ್ಭುತವಾದ ಸಂದೇಶವಿದು. ಪ್ರತಿವರ್ಷವೂ ಕೂಡ ಯುಗಾದಿ ಬಂದೇ ಬರುತ್ತದೆ. ಬರುವುದರ ಮುಖಾಂತರ ಸಿಹಿ-ಕಹಿ ಅಣ್ಣ ಸಮನಾಗಿ ತೆಗೆದುಕೊಳ್ಳಿ ಎಂಬ ಸಂದೇಶವನ್ನು ಸಾರುತ್ತದೆ. ಬೇವು ಬೆಲ್ಲ ತಿಂದು ಆರೋಗ್ಯಪೂರ್ಣ ವಿಚಾರವನ್ನು ಮಾಡಿ ಎನ್ನುವ ಸಂದೇಶವನ್ನು ತಿಳಿಸುವ ಯುಗಾದಿ. ಇವತ್ತು ಹಿಂದೂಗಳಿಗೆ ಅಪರೂಪದ ಹಬ್ಬ.
ಯುಗಾದಿಯ ದಿನ ಸುಖದ ಸಂಕೇತವಾದ ಬೆಲ್ಲವನ್ನೂ ಮತ್ತು ಕಷ್ಟದ ಸಂಕೇತವಾದ ಬೇವನ್ನೂ ಸಮನಾಗಿ ಸ್ವೀಕರಿಸುವರು. ತಿಂದ ಮೇಲೆ ಬೆಲ್ಲವು ಹೊಟ್ಟೆಯೊಳಗೆ ಉರಿಯ ಅಥವಾ ಶಾಖವನ್ನು ಉಂಟು ಮಾಡಿದರೆ ಬೇವು ಆ ಉರಿಯ ಶಮನಕಾರಿ, ಬೇವು – ಬೆಲ್ಲದ ಮಿಶ್ರಣವನ್ನು ತಿನ್ನುವಾಗ ಹೇಳುವ ಒಂದು ಶ್ಲೋಕ ಹೀಗಿದೆ: ಶತಾಯು: ವಜ್ರದೇಹಾಯ ಸರ್ವಸಂಪತ್ಕರಾಯಚ|
ಸರ್ವಾರಿಷ್ಟ ವಿನಾಶಾಯ ನಿಂಬಕಂದಳ ಭಕ್ಷಣಂ|| – ಅದರರ್ಥ ಹೀಗಿದೆ – ನೂರು ವರುಷಗಳ ಆಯುಷ್ಯ, ಸದೃಢ ಆರೋಗ್ಯ, ಸಕಲ ಸಂಪತ್ತುಗಳ ಪ್ರಾಪ್ತಿಗಾಗಿಯೂ, ಸಕಲ ಅರಿಷ್ಟ ನಿವಾರಣೆಗಾಗಿಯೂ ಬೇವು ಬೆಲ್ಲ ಸೇವನೆ ಮಾಡುತ್ತೇನೆ.
ಯುಗಾದಿ ಹಬ್ಬದ ಸಾಂಪ್ರದಾಯಿಕ ಆಚರಣೆಗಳಲ್ಲಿ ಕೆಲವೆಂದರೆ ಸೂರ್ಯ ನಮಸ್ಕಾರ, ಪಂಚಾಂಗದ ಪೂಜೆ, ಹಾಗೂ ಸರ್ವೇ-ಸಾಮಾನ್ಯವಾಗಿ “ಬೇವು-ಬೆಲ್ಲ.” ಜೀವನದ ಸಿಹಿ-ಕಹಿಗಳೆರಡನ್ನೂ ಪಡೆಯಬೇಕೆಂದು ನೆನಪಿಸಲು ಬೇವು-ಬೆಲ್ಲಗಳ ಮಿಶ್ರಣವನ್ನು ತಿನ್ನಲಾಗುತ್ತದೆ. ಯುಗಾದಿಯೆಂದರೆ ಹೊಸವರ್ಷದ ಆರಂಭದ ದಿನವಾದರೂ ಭಾರತದಲ್ಲಿ ಈ ದಿನವನ್ನು ನಿರ್ಧರಿಸುವ ರೀತಿ ಹಲವಾರಿವೆ.
ಮುಖ್ಯವಾಗಿ ಚಾಂದ್ರಮಾನ ಹಾಗೂ ಸೌರಮಾನ ಎಂಬ ಎರಡು ಪ್ರಭೇದಗಳಿದ್ದು, ಹಿಂದೂ ಧರ್ಮದ ವೇದಾಂಗ ಜ್ಯೋತಿಷ ಶಾಸ್ತ್ರದಿಂದ ನಿರ್ಣಯಗೊಳ್ಳುತ್ತವೆ. ಚಂದ್ರನ ಚಲನೆಯನ್ನಾಧರಿಸಿ, ದಿನಗಣನೆ ಮಾಡುವುದನ್ನು ಚಾಂದ್ರಮಾನ ಹಾಗೂ ಸೂರ್ಯನ ಗತಿಯಿಂದ ಎಣಿಕೆ ಮಾಡುವುದನ್ನು ಸೌರಮಾನ ಎನ್ನುತ್ತಾರೆ. ಕರ್ನಾಟಕದಲ್ಲಿ ಚಾಂದ್ರಮಾನಪದ್ಧತಿ ಮೊದಲಿನಿಂದಲೂ ರೂಢಿಯಲ್ಲಿದೆ.
ಅದಕ್ಕಾಗಿಯೇ ಹಿಂದುಗಳೆಲ್ಲ ಹೊಸವರ್ಷವನ್ನು ಯುಗಾದಿಯೆಂದೇ ಭಾವಿಸಿ ಕೊಳ್ಳುವುದು ಸತ್ಯವು ಕೂಡ ಸರಿ. ನೀವೆಲ್ಲರೂ ಕೂಡ ಸುಖ-ಶಾಂತಿ-ನೆಮ್ಮದಿ ಇರಬೇಕು ಅಂತಂದ್ರೆ ಎರಡನ್ನು ಕೂಡ ಸಮಸಮನಾಗಿ ತೆಗೆದುಕೊಳ್ಳಬೇಕು. ಏನೇ ಬರಲಿ ಕಷ್ಟ ಬರಲಿ ಸುಂಕ ಬರಲಿ ಎಲ್ಲರೂ ಖುಷಿ ಖುಷಿಯಿಂದ ಇರೋಣ.
ಶಾರ್ವರಿ ನಾಮ ಸಂವತ್ಸರದಲ್ಲಿ ಶಾರ್ವರಿ ಎಂದರೆ ಇರುಳು, ಕತ್ತಲು. ಈ ವರ್ಷ ಎಲ್ಲರ ಬದುಕಿನಲ್ಲಿ ಕತ್ತಲು ಆಗಿ ಬಿಟ್ಟಿದೆ. ಈ ವರ್ಷವೂ ಕೂಡ ನಾವು ಕತ್ತಲೆಯನ್ನು ದಾಟಿಸಿಕೊಳ್ಳುವುದು ಅಂದ್ರೆ ಪ್ರಶ್ನೆ ಸಂವತ್ಸರ ಅಂದ್ರೆ ಪಲ್ಲವ, ಇಪ್ಪತ್ತೆರಡು ನಾನಾ ಬಗೆಯ ಅರ್ಥಗಳು ಸಂಸ್ಕೃತದಲ್ಲಿ ಬರುತ್ತವೆ. ಪಲ್ಲವ ಅಂದ್ರೆ ಹರಿಗೋಲು. ತೆಪ್ಪ ಅಂದ್ರು ಕೂಡ ಬರುತ್ತದೆ. ಈ ನದಿಯನ್ನು ದಾಟಿಸಿಕೊಳ್ಳಲು ತೆಪ್ಪವನ್ನು ಹೇಗೆ ಬಳಕೆ ಮಾಡುತ್ತೆವೆಯೋ, ಹರಿಗೋಲನ್ನು ಹೇಗೆ ಬಳಕೆ ಮಾಡುತ್ತೆವೆಯೋ ಹಾಗೆ ನಿದಾನವಾಗಿ ಸಾಗೋಣ. ಹುಟ್ಟು ಹಾಕುವುದನ್ನು ನಿಧಾನವಾಗಿ ದೋಣಿಯನ್ನು ಚಲಿಸಿದರೆ ಖಂಡಿತವಾಗಿ ದಡವನ್ನು ಮುಟ್ಟುತ್ತೇವೆ. ಶ್ರದ್ಧೆ ಇರಲಿ, ತಾಳ್ಮೆ ಇರಲಿ, ಪ್ರೀತಿ ಇರಲಿ ಎಲ್ಲರೂ ಖುಷಿಖುಷಿಯಾಗಿರೋಣ, ತೋಷವಾಗಿರೋಣ. ಕಷ್ಟ ಬರಲಿ ಸುಖಃ ಬರಲಿ, ಯಾರನ್ನೂ ದೋಷಿಸೋದು ಬೇಡ. ಒಳ್ಳೆಯ ರೀತಿಯಲ್ಲಿ ನಡೆಯೋಣ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ