Kannada NewsKarnataka NewsLatest

​ ಬೆಳಗಾವಿ ಲೋಕಸಭಾ ಕ್ಷೇತ್ರ ಮರಳಿ ಕಾಂಗ್ರೆಸ್ ತೆಕ್ಕೆಗೆ  – ಲಕ್ಷ್ಮಿ ಹೆಬ್ಬಾಳಕರ್ ವಿಶ್ವಾಸ

ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಜೊತೆ ವಿವಿಧೆಡೆ ಪ್ರಚಾರ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಲೋಕಸಭಾ ಕ್ಷೇತ್ರ ಮರಳಿ ಕಾಂಗ್ರೆಸ್ ತೆಕ್ಕೆಗೆ ಬರುವುದು ಖಚಿತ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬೆಳಗಾವಿ ಗ್ರಾಮೀಣ ಕ್ಷೇತ್ರದ ವಿವಿಧ ಭಾಗಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಅವರೊಂದಿಗೆ ಪ್ರಚಾರ ಸಭೆಗಳನ್ನು ನಡೆಸಿ ಅವರು ಮಾತನಾಡುತ್ತಿದ್ದರು.
 

 

​ಬೆಳಗ್ಗೆ​ ಸಾಂಬ್ರಾ ಗ್ರಾಮಕ್ಕೆ ತೆರಳಿ ಸಂವಿಧಾನ​​ ಶಿಲ್ಪಿ, ಸಮಾನತೆಯ ಹರಿಕಾರ ಹಾಗೂ ಮಹಾನ್ ನಾಯಕರಾದ ಡಾ. ಬಿ. ಆರ್ ಅಂಬೇಡ್ಕರ್ ಜಯಂತಿಯ ನಿಮಿತ್ಯ ಅವರ ಪುತ್ಥಳಿಗೆ ಗೌರವಾರ್ಪಣೆಯನ್ನು ಸಲ್ಲಿಸಿ​ ನಂತರ ಇಬ್ಬರು ನಾಯಕರೂ ವಿವಿಧೆಡೆ ಪ್ರಚಾರ ಕಾರ್ಯ ಆರಂಭಿಸಿದರು.
ಬೆಳಗಾವಿ ಲೋಕಸಭಾ ಕ್ಷೇತ್ರದ ಮತದಾರರು ಕಟ್ಟಾ ಕಾಂಗ್ರೆಸ್ ಬೆಂಬಲಿಗರು. ಕಾರಣಾಂತರಗಳಿಂದ ಮಧ್ಯೆ ಕೆಲವು ವರ್ಷ ಬಿಜೆಪಿ ಬೆಂಬಲಿಸಿರಬಹುದು. ಆದರೆ ಬಿಜೆಪಿಯ ಸುಳ್ಳು ಭರವಸೆಗಳು ಜನರಿಗೆ ಈಗ ಅರ್ಥವಾಗಿದೆ. ಇನ್ನೂ ಅವರನ್ನು ಮೂರ್ಖರನ್ನಾಗಿಸಲು ಬಿಜೆಪಿಗೆ ಸಾಧ್ಯವಿಲ್ಲ. ಹಾಗಾಗಿ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಅತ್ಯಧಿಕ ಅಂತರದಿಂದ ಗೆಲ್ಲುವುದು ನಿಶ್ಚಿತ ಎಂದು ಲಕ್ಷ್ಮಿ ಹೆಬ್ಬಾಳಕರ್ ತಿಳಿಸಿದರು.
 
 ಶ್ರೀ ಬೀರದೇವರ ಮಂದಿರಕ್ಕೆ ತೆರಳಿ ಆಶೀರ್ವಾದವನ್ನು ಪಡೆದು, ಬೆಳಗಾವಿ ಜಿಲ್ಲೆಯ ಅಭಿವೃದ್ಧಿಗಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವ ಮೂಲಕ ಕೈ ​ಜೋ​ಡಿಸಿ ಎಂದು​ ಅಲ್ಲಿ ಸೇರಿದ್ದ ಜನರಿಗೆ ಲಕ್ಷ್ಮಿ ಹೆಬ್ಬಾಳಕರ್ ಮನವಿ ಮಾ​ಡಿದರು​.
​ನಂತರ, ಮಾರಿಹಾಳ ಗ್ರಾಮದಲ್ಲಿ ಪ್ರಚಾರ ಕಾರ್ಯಕ್ರಮ ನಡೆಸಿ, ಕಳೆದ ವಿಧಾನಸಭೆ ಚುನಾವಣೆಯಂತೆ ಈ ಬಾರಿಯೂ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ವಿನಂತಿಸಿದರು. ಈ ಸಂದರ್ಭದಲ್ಲಿ​  ಸತೀಶ್ ಜಾಹರಕಿಹೊಳಿ ಹಾಗೂ ಲಕ್ಷ್ಮಿ ಹೆಬ್ಬಾಳಕರ್​ ಗ್ರಾಮದ ಶ್ರೀ ಬಸವೇಶ್ವರ ಹಾಗೂ ವಾಲ್ಮೀಕಿ ಸಮಾಜದ ನಾಮಪಲಕಕ್ಕೆ ಗೌರವವನ್ನು ಸಲ್ಲಿ​ಸಿದರು.
 
ಬೆಳಗಾವಿ ಗ್ರಾಮೀಣ ಕ್ಷೇತ್ರದ ಮೊದಗಾ ಗ್ರಾಮದಲ್ಲಿ ಲೋಕಸಭಾ ಉಪ ಚುಣಾವಣೆಯ ಅಂಗವಾಗಿ ​ ಸತೀ​ಶ್​ ಜೊತೆ ಪ್ರಚಾರ ಕಾರ್ಯಕ್ರಮದಲ್ಲಿ‌ ಭಾಗಿಯಾ​ದ ಹೆಬ್ಬಾಳಕರ್, ನಾನು ಮಾಡಿರುವ ಎಲ್ಲ ಅಭಿವೃದ್ಧಿ ಕಾಮಗಾರಿಗಳಿಗೆ ನೀವೆಲ್ಲ ಸಹಕಾರ, ಬೆಂಬಲ ನೀಡಿದ್ದೀರಿ. ಹಾಗೆಯೇ ಅವುಗಳನ್ನು ಮುಂದುವರಿಸಿಕೊಂಡು ಹೋಗಲು ಹಾಗೂ ನನ್ನ ಕೈಗೆ ಇನ್ನಷ್ಟು ಬಲ ತುಂಬಲು ಸತೀಶ್ ಜಾರಕಿಹೊಳಿ ಅವರಿಗೆ ಮತ ನೀಡಿ ಎಂದು ಕೋರಿದರು.
ಅಭೂತಪೂರ್ವ ಜನ ಬೆಂಬಲ ದೊರೆಯುತ್ತಿರುವುದನ್ನು ನೋಡಿದರೆ ಸತೀಶಣ್ಣನವರು ಲಕ್ಷಾಂತರ ಮತಗಳ ಅಂತರದಿಂದ ಗೆಲ್ಲುವುದರಲ್ಲಿ ಯಾವ ಸಂಶಯ​ವೂ ಇಲ್ಲ ಎಂದು ಹೆಬ್ಬಾ ಳಕರ್ ತಿಳಿಸಿದರು.​
​  ಪಂತ ಬಾಳೇಕುಂದ್ರಿ ಗ್ರಾಮದಲ್ಲಿ​ ಮತ್ತು ಕೆಕೆ ಕೊಪ್ಪ ಗ್ರಾಮದಲ್ಲಿ ​ಸಹ ​ಲೋಕಸಭಾ ಉಪ ಚುಣಾವಣೆಯ ಅಂಗವಾಗಿ ಸತೀ​ಶ್ ಜಾರಕಿಹೊಳಿ ಜೊತೆ ಲಕ್ಷ್ಮಿ ಹೆಬ್ಬಾಳಕರ್ ಪ್ರಚಾರ ಕಾರ್ಯಕ್ರಮದಲ್ಲಿ‌ ಭಾಗಿಯಾಗಿ ಮತ ಯಾಚಿಸಿದ​ರು.​

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button