Kannada NewsKarnataka NewsLatest

ಲಕ್ಷ್ಮಿ ಹೆಬ್ಬಾಳಕರ್, ಚನ್ನರಾಜ ಹಟ್ಟಿಹೊಳಿ ಬೇಗ ಗುಣಮುಖರಾಗಲೆಂದು ಪೂಜೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಹಾಗೂ ಚನ್ನರಾಜ ಹಟ್ಟಿಹೊಳಿ ಅವರ ಆರೋಗ್ಯ ಬೇಗ ಸುಧಾರಿಸಲಿ ಎಂದು ಮಾರೀಹಾಳ ಗ್ರಾಮದ  ಲಕ್ಷ್ಮೀ ಹೆಬ್ಬಾಳಕರ   ಅಭಿಮಾನಿ ಬಳಗದವರಿಂದ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಂದ  ಗ್ರಾಮದ ಆರಾಧ್ಯ ದೇವರಾದ  ಶ್ರೀ ಕೋಡಿ ಬಸವೇಶ್ವರ ಮತ್ತು ಶ್ರೀ ಪತ್ರಿ ಬಸವೇಶ್ವರ ದೇವಸ್ಥಾನಗಳಲ್ಲಿ ಅಭಿಷೇಕ ಹಾಗೂ ಪೂಜಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

  ಲಕ್ಷ್ಮೀ ಹೆಬ್ಬಾಳಕರ ಮತ್ತು  ಚನ್ನರಾಜ ಹಟ್ಟಿಹೊಳಿಯವರ ಆರೋಗ್ಯ ಬೇಗನೆ ಚೇತರಿಕೆ ಆಗಲೆಂದು ಎಲ್ಲರೂ ದೇವರಲ್ಲಿ ಶ್ರದ್ಧೆಯಿಂದ ಸಂಕಲ್ಪ ಮಾಡಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಬಸವರಾಜ ಮ್ಯಾಗೋಟಿ, ಗ್ರಾಮ ಪಂಚಾಯತ್ ಸದಸ್ಯರಾದ ಗುಡದಪ್ಪ ಗೊರವ, ಈರಣ್ಣ ಪಾಟೀಲ ಮತ್ತು ಅಭಿಮಾನಿ ಗಳಾದ ವಿಜಯ, ಪ್ರಕಾಶ, ಮಂಜುನಾಥ, ಮಹಾಂತೇಶ, ಬಾಳೇಶಿ, ಯಲಗುಂಡ, ಕೆಂಚಪ್ಪ, ವಿನೋದ, ವಿರೂಪಾಕ್ಷಿ ಹಾಗೂ ಇನ್ನೂ ಅನೇಕ ಕಾರ್ಯಕರ್ತರು ಹಾಜರಿದ್ದು ಶುಭಹಾರೈಸಿದರು.

ಲಕ್ಷ್ಮಿ ಹೆಬ್ಬಾಳಕರ್, ಚನ್ನರಾಜ್ ಹಟ್ಟಿಹೊಳಿ ಬೇಗ ಗುಣಮುಖರಾಗಲೆಂದು ಪೂಜೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button