Kannada NewsKarnataka News

ಸರಕಾರದಿಂದ ದಿಢೀರ್ ಲಾಕ್ ಡೌನ್ ಮಾದರಿ ಹೊಸ ಮಾರ್ಗಸೂಚಿ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ತೀರಾ ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಉಳಿದೆಲ್ಲ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸುವ ಹೊಸ ಮಾರ್ಗಸೂಚಿ ಸರಕಾರದಿಂದ ಬಿಡುಗಡೆಯಾಗಿದೆ.

ಹಠಾತ್ ಆಗಿ ಈ ಮಾರ್ಗಸೂಚಿ ಪ್ರಕಟವಾಗಿದ್ದು, ಬಹುತೇಕ ಲಾಕ್ ಡೌನ್ ಮಾದರಿಯಲ್ಲೇ ಇದೆ.

ದಿನನಿತ್ಯದ ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಎಲ್ಲವನ್ನೂ ಬಂದ್ ಮಾಡಿಸಲಾಗುತ್ತಿದೆ.

ವಿಚಿತ್ರವೆಂದರೆ ಸೆಲೂನ್, ಬ್ಯೂಟಿ ಪಾರ್ಲರ್, ವೈನ್ ಶಾಪ್ ಗಳಿಗೆ ಅನುಮತಿ ನೀಡಲಾಗಿದೆ.

ರಾಜ್ಯದ ಎಲ್ಲೆಡೆ ಪೊಲೀಸರು ಹಠಾತ್ ಆಗಿ ಅಂಗಡಿಗಳನ್ನು ಬಂದ್ ಮಾಡಿಸುತ್ತಿದ್ದಾರೆ.

ಮೇ 4ರ ವರೆಗೂ ರಾಜ್ಯದಲ್ಲಿ ಇದೇ ಪರಿಸ್ಥಿತಿ ಮುಂದುವರಿಯಲಿದೆ.

ಪರಿಷ್ಕೃತ ಮಾರ್ಗಸೂಚಿಯ ಪ್ರಕಾರ ರಾಜ್ಯಾದ್ಯಂತ ಮೇ 4ರವರೆಗೆ ಅಗತ್ಯ ಸೇವೆ ಹೊರತುಪಡಿಸಿ ಎಲ್ಲಾ ಸೇವೆಗಳನ್ನು ಬಂದ್ ಮಾಡಲಾಗುತ್ತಿದೆ. ಅಂಗಡಿ ಮುಂಗಟ್ಟುಗಳು, ಮಾರ್ಕೆಟ್, ಶಾಪಿಂಗ್ ಕಾಂಪ್ಲೆಕ್ಸ್, ಮಾಲ್, ಧಾರ್ಮಿಕ ಕೇಂದ್ರಗಳು ಸೇರಿದಂತೆ ಸಂಪೂರ್ಣ ಬಂದ್ ಮಾಡಲು ಆದೇಶ ಹೊರಡಿಸಲಾಗಿದೆ.

ಹೊಸ ನಿಯಮ ಜಾರಿಯಾಗುತ್ತಿದ್ದಂತೇಯೇ ಫೀಲ್ಡಿಗಿಳಿದ ಪೊಲೀಸರು ಔಷಧ ಅಂಗಡಿ, ದಿನಸಿ, ಹಣ್ಣು-ತರಕಾರಿ ಅಂಗಡಿ ಹೊರತುಪಡಿಸಿ ರಸ್ತೆ ಬದಿ ವ್ಯಾಪಾರ, ಅಂಗಡಿ ಮುಂಗಟ್ಟು ಸೇರಿದಂತೆ ಪ್ರತಿಯೊಂದು ಅಂಗಡಿಗಳನ್ನು ಬಂದ್ ಮಾಡಿಸುತ್ತಿದ್ದಾರೆ.

ಏಕಾ ಏಕಿ ಅಂಗಡಿಗಳು ಕ್ಲೋಸ್: ಬೆಳಗಾವಿಯಲ್ಲಿ ಅಲ್ಲೋಲಕಲ್ಲೋಲ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button